
ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯ ನಾಲ್ಕನೇ ತಿರುವಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜಯಂತೋತ್ಸವ ಹಾಗೂ 14ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇವತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಭಕ್ತಾದಿಗಳು, ಈ ಎಲ್ಲಾ ದೇವತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು. ಮನ. ಧನ. ಸಹಾಯದಿಂದ ಸಹಕರಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು. ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಸೇವಾ ಸಮಿತಿ(ರಿ.) ವತಿಯಿಂದ ಸರ್ವಭಕ್ತರಿಗೂ ಪ್ರೀತಿಯ ಕರೆಯೋಲೆ….

ದಿನಾಂಕ -30-04-2026 : ಗುರುವಾರದಂದು ಬೆಳಿಗ್ಗೆ 9:00ಗೆ ವೇದಬ್ರಹ್ಮ ಶ್ರೀ ಸುಮುಖ ಭಟ್ಟ ಇವರ ಆಚಾರ್ಯತ್ವದಲ್ಲಿ ಗುರು ಪ್ರಾರ್ಥನೆ, ಫಲ ಪ್ರಾರ್ಥನೆ, ಮಹಾಗಣಪತಿ ಪೂಜೆ, ಪುಣ್ಯ ವಾಚನ ,ದೇವಾನಾಂಧಿ, ಕಂಕಣ ಬಂಧನ, ಮಂಡಲ ಆರಾಧನ ಪೂರ್ವಕ ಹಾಗೂ (ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವರ ಸಾಮೂಹಿಕ ಹೋಮ ) ಮಧ್ಯಾಹ್ನ 12:30 ಸಮಯಕ್ಕೆ ಸರಿಯಾಗಿ( ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ) ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು.

ಸಂಜೆ 6-00 ರಿಂದ 8:30ರ ವರೆಗೆ (ಸಪ್ತಸ್ವರ ಟ್ರಸ್ಟ್ ವಿ ಶಿವಮೊಗ್ಗ ಶ್ರೀ ಚಂದ್ರಶೇಖರ್ ಭಟ್ ಮತ್ತು ತಂಡದವರಿಂದ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ) ಹಾಗೂ ( ಶ್ರೀ ನರಸಿಂಹ ಸ್ವಾಮಿ ದೇವರ ನವರೂಪದ ಭರತನಾಟ್ಯ ) ಕಾರ್ಯಕ್ರಮಗಳನ್ನು ವಿಶೇಷವಾಗಿ ಏರ್ಪಡಿಸಲಾಗಿದ್ದು. ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಜಯಂತೋತ್ಸವ ಹಾಗೂ ವಾರ್ಷಿಕೋತ್ಸವದ ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತನು, ಮನ, ಧನ, ಸಹಾಯದೊಂದಿಗೆ ಹಾಗೂ ನೂತನವಾಗಿ ನಿರ್ಮಿಸುತ್ತಿರುವಂತ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಕಟ್ಟಡಕ್ಕೆ ದೇಣಿಗೆ ನೀಡುವಂತಹ ಭಕ್ತಾದಿಗಳು, ಭಕ್ತ ವೃಂದದವರು ಈ ಎಲ್ಲಾ ಪುಣ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇವರ ಕೃಪೆಗೆ ಪಾತ್ರರಾಗುವ, ಪುಣ್ಯ ಕಾರ್ಯದೊಂದಿಗ , ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸುವ ಮೂಲಕ ಕಾರ್ಯಕ್ರಮವನ್ನು ಭಕ್ತಾದಿಗಳು ನೆರವೇರಿಸಿ ಕೊಡಬೇಕೆಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಸೇವಾ ಸಮಿತಿ(ರಿ.) ವತಿಯಿಂದ ಆಹ್ವಾನಿಸಲಾಗಿದೆ..



More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ