ಶಿವಮೊಗ್ಗ: 26-04-2026: ದಿನಾಂಕ 24/04/2026 ರಂದು ರಾತ್ರಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಚಾನಲ್ ಏರಿಯಾದ ಹತ್ತಿರ ಒಬ್ಬ ಮಂಗಳಮುಖಿಯನ್ನು ಯಾರೋ ಅಪರಿಚಿತರು ಆಟೋದಲ್ಲಿ ಕರೆದುಕೊಂಡು ಬಂದು 4,000/- ನಗದು, ಮೊಬೈಲ್, ಕೊರಳ ಚೈನ್ & ಬಂಗಾರದ ಉಂಗುರಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ ಎಂದು.ಶಿವಮೊಗ್ಗ ನಗರದ ವಿನೋಬ ನಗರ ಪೋಲಿಸ್ ಠಾಣೆಗೆ ದಿನಾಂಕ 25/04/2026 ರಂದು ದೂರು ನೀಡಿದ ಮೇರೆಗೆ ಗುನ್ನೆ ಸಂಖ್ಯೆ: 82/2026 ಕಲಂ 309(4) ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಈ ಮೇಲ್ಕಂಡ ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ ಶಿವಮೊಗ್ಗ ಜಿಲ್ಲಾ ಎಸ್ಪಿ .ನಿಖಿಲ್ ಬಿ. ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಅಡಿಷನಲ್ ಎಸ್ ಪಿ. ಸಂಜೀವ್ ಕುಮಾರ್. ಟಿ . ಡಿ.ವೈ.ಎಸ್.ಪಿ ರವರ ಮಾರ್ಗದರ್ಶನದಲ್ಲಿ, ಸುರೇಶ್ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ( ಪ್ರಭಾರ ) ರವರ ಉಸ್ತುವಾರಿಯಲ್ಲಿ ತಿರುಮಲೇಶ್ ಜಿ. ಪಿ ಎಸ್ಐ ಮತ್ತು ಸಿಬ್ಬಂದಿಗಳಾದ ರಾಜು ಕೆ ಆರ್ ಸಿಪಿಸಿ 1074, ಚಂದ್ರಾನಾಯ್ಕ ಬಿ ಸಿಪಿಸಿ 1122, ವಿಜಯಕುಮಾರ್ ಸಿಪಿಸಿ 1266, ಮನುಶಂಕರ ಸಿಪಿಸಿ 1556, ರವರ ಪಿ.ಐ ಹಾಗೂ ಪಿಎಸ್ಐ ವಿನೋಬನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಸಿಬ್ಬಂದಿಗಳ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಪ್ರಕರಣದ ಆರೋಪಿತನಾದ ದೇವರಾಜ, 27 ವರ್ಷ, ಹಳೆ ಮಂಡ್ಲಿ, ಶಿವಮೊಗ್ಗ ಈತನನ್ನು ಪ್ರಕರಣ ದಾಖಲಾಗಿ 12 ಗಂಟೆಯೊಳಗೆ ಬಂಧಿಸಿ, ಮೊಬೈಲ್ ಅದರ ಬೆಲೆ 20,000 ಮತ್ತು ಕೃತ್ಯಕ್ಕೆ ಬಳಸಿದ ಆಟೋ, 3 ಲಕ್ಷ ಹಾಗೂ 01 ಚಾಕು ಸೇರಿ ಒಟ್ಟು ಅಂದಾಜು ಮೌಲ್ಯ 3,20,000/- ರೂ ಮೌಲ್ಯದ ಮಾಲು ವಶಪಡಿಸಿಕೊಂಡಿರುತ್ತಾರೆ.
ಈ ಪ್ರಕರಣದಲ್ಲಿ ಉತ್ತಮವಾದ ಕಾರ್ಯವನ್ನು ನಿರ್ವಯಿಸಿದ ಸಿಬ್ಬಂದಿಗಳಿಗೆ ಎಸ್ಪಿ .ನಿಖಿಲ್ ಬಿ.ರವರು
ಪ್ರಶಂಸಿಸಿ ಅಭಿನಂದಿಸಿರುತ್ತಾರೆ.


More Stories
r
ಗ್ರಾಮಾಂತರ ಪ್ರದೇಶದ ಈ ಭಾಗಗಳಲ್ಲಿ ವಿದ್ಯುತ್ ಕಡಿತ.!.
ಭಾರತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆಗೆ ಶ್ರೀನಿವಾಸ್ ಸ್ಪರ್ಧೆ: ಪ್ರಗತಿ ಮತ್ತು ಸೇವೆಗಾಗಿ ಬಲಿಷ್ಠ ಭರವಸೆಯೊಂದಿಗೆ..!