ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?

ಸವಳಂಗ ಹಾಗೂ ಅಬ್ಬಲಗೆರೆ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಲ್ಲಿನ ಯುವ ಜೋಡಿಗಳೇ ಇವನ ಟಾರ್ಗೆಟ್…

 

ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಾದ ಅಬ್ಬಲಗೆರೆ, ಕೊಮ್ಮನಾಳ್‌,ಕಲ್ಲಪುರ,ಸವಳಂಗ, ಹಾಗೂ ಸುತ್ತಮುತ್ತಲಿನ ನೀಲಗಿರಿ ಪ್ಲಾಂಟೆಷನನ್‌ಗಳ ಹಾಗೂ ರಸ್ತೆ ಬದಿಯ ನಿರ್ಜನ ಪ್ರದೇಶಗಳಿಗೆ ಬರುವಂತಹ ಶಿವಮೊಗ್ಗ ನಗರದ ಹಾಗೂ ಸುತ್ತಮುತ್ತಲಿನ ಕಾಲೇಜಿನ ವಿದ್ಯಾರ್ಥಿಗಳು ಹಾಗು ಯುವ ಜೋಡಿಗಳೆ ಇವರ ಟಾರ್ಗೆಟ್‌….

 

 

ಶಿವಮೊಗ್ಗ -23-05-2026:     ಹಲವಾರು ದಿನಗಳಿಂದ ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಾದ ಅಬ್ಬಲಗೆರೆ, ಸವಳಂಗ, ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಿಗೆ ಭೇಟಿ ಕೊಡುವಂತಹ ಯುವ ಜೋಡಿಗಳು ಹಾಗೂ ಇನ್ನಿತರ ಹುಡುಗ ಹುಡುಗಿಯರೇ, ರಾಬರಿ ಗ್ಯಾಂಗ್ ನ ಅಥಿತಿಗಳು. ಯುವ ಜೋಡಿಗಳನ್ನೆ ಹಿಂಬಾಲಿಸುತ್ತ ನಿರ್ಜನ ಪ್ರದೇಶಗಳಿಗೆ ತೆರಳುವವರೆಗೂ ಕಾಯುತ್ತಾ ಕುಳಿತಿರುವಂತ ಈ ರಾಬರಿ ಗ್ಯಾಂಗ್ ಹಠತ್ತನೇ ಯುವ ಜೋಡಿಗಳ ಮೇಲೆ ದಾಳಿ ಮಾಡಿ ಅವರ ಬಳಿ ಇರುವಂತಹ ಬೆಲೇ ಬಾಳುವಂತ ಬಂಗಾರ ಹಾಗೂ ಇನ್ನಿತರ ಹಣ ವಸ್ತುಗಳನ್ನು ದೋಚಿ. ಹಲ್ಲೆ ಮಾಡಿ ಕೆಲವು ಬಾರಿ ಆ ಮಹಿಳೆಯರ, ಹೆಣ್ಣು ಮಕ್ಕಳ ಮೇಲೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗುತಿದ್ದರೇ..? ಇತನ ಗ್ಯಾಂಗ್‌ ಶಿವಮೊಗ್ಗ ನಗರದ ಕೆಲ ಪುಂಡ ರಾಜಕಾರಣಿಗಳ ಹಾಗೂ ಪೋಕರಿಗಳ ಆರ್ಶಿವಾದದೋಂದಿಗೆ, ಹಲವು ಪ್ರರಕರಣಗಳಲ್ಲಿ ಕಾನೂನಿನ ಮುಷ್ಠಿಯಿಂದ ತಪ್ಪಿಸಿಕೊಂಡ್ಡಿದ್ದಾರೆ ಎಂಬುದು ಮಂಜುನಾಯ್ಕ ಅಂಡ್‌ ರಾಬರಿ ಟೀಮ್‌ನಿಂದ ಹಲ್ಲೆಗೆ ಒಳಗಾದಂತಹ ಹೇಣ್ಣುಮಕ್ಕಳ ಹಾಗು ವಿದ್ಯಾರ್ಥಿನಿಯರ ಮತ್ತು ಅಬ್ಬಲಗೆರೆ ಹಾಗೂ ಸುತ್ತಮುತ್ತಲಿನ ಸಾವಜನಿಕರ ದೂರುಗಳಾಗಿದ್ದವು.

 

 

ರಾಬರಿ ಗ್ಯಾಂಗ್ ಮಾಸ್ಟರ್ ಮೈಂಡ್ ಮಂಜುನಾಥ್‌ನಾಯ್ಕ ಅಲಿಯಾಸ್‌ ರಾಬ್ರಿ ಮಂಜ ಎಂಬತನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 22- 05- 2026ರಂದು ಮಹಿಳೆಯ ಓರ್ವ ಮಹಿಳೆಯ ಬಂಗಾರದ ಸರವನ್ನು ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಂತಹ ಮಂಜುನಾಥ್ ಅಲಿಯಾಸ್‌ ರಾಬ್ರಿ ಮಂಜ ಪೊಲೀಸರ ವಶಕ್ಕೆ …

22-05-2026 ರಂದು ಸಂಜೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಲಗೆರೆಯಿಂದ ಸ್ವಲ್ಪ ಮುಂದೆ ಯುವತಿಯೊಬ್ಬರು ಕಾರಿನಿಂದ ಕೆಳಗೆ ಇಳಿಯುತ್ತಿರುವಾಗ ಹಿಂಭಾಗದಿಂದ ಇಕೋ ಸ್ಪೋರ್ಟ್ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಯುವತಿಯ ಕೊರಳಿನಲ್ಲಿದ್ದ ಬಂಗಾರದ ಚೈನ್ ಅನ್ನು ಕಿತ್ತುಕೊಂಡು ಪರಾರಿಯಾದ ಬಗ್ಗೆ ಠಾಣಾ ಗುನ್ನೆ ಸಂಖ್ಯೆ 176/2025 ಕಲಂ: 309(4) ಬಿಎನ್ಎಸ್ ರೀತ್ಯಾ ರೀತ್ಯಾ ಸರಗಳ್ಳತನ ಪ್ರಕರಣ ದಾಖಲಾಗಿರುತ್ತೆ.

ಮಂಜುನಾಥ್ ನಾಯ್ಕ ಅಲಿಯಾಸ್ ರಾಬರಿ ಮಂಜ ಎಂಬ ಈ ವ್ಯಕ್ತಿ 15 ದಿನಗಳಿಂದಷ್ಟೇ ಮದುವೆಯಾಗಿದ್ದು ಮದುಮಗನ ಹಚ್ಚಿದ ಅರಿಶಿಣದ ಗಮಲು ಹಾರುವ ಮುನ್ನವೇ ಸರಗಳ್ಳತನಕ್ಕೆ  ಕೈ ಹಾಕಿರುವುದು ಈತನ ಕಳ್ಳತನದ ಹಾಗೂ ರಾಬರಿ ಕರ್ತವ್ಯಕ್ಕೆ ಇವನು ನೀಡುತ್ತಿರುವ ಗೌರವವನ್ನು ನೋಡಿದರೆ ಇವನು ಯಾವ ರೀತಿ ಕಳ್ಳತನ ಮಾಡುತ್ತಿದ್ದ ಎಂಬುದಕ್ಕೆ ಹಾಗೂ ಕಳ್ಳತನ, ರಾಬರಿ ಇನ್ನಿತರ ಸಮಾಜಘಾತಕ ಕಾರ್ಯಗಳಲ್ಲಿ ಇವನಿಗಿರುವ ನಿಷ್ಠೆ ಹಾಗೂ ವ್ಯಾಮೋಹಕ್ಕೆ. ನಮ್ಮ ಘನ ನ್ಯಾಯಾಲಯ ಕಠಿಣವಾದ ಶಿಕ್ಷೆ ನೀಡುವ ಮೂಲಕ ಹಾಗೂ ಸಮಾಜದಲ್ಲಿ ಇಂತಹ ವ್ಯಕ್ತಿಗಳಿಂದ ಭದ್ರತೆ ನೀಡುವ ಮೂಲಕ ಮತ್ತು ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮೇಲಿರುವಂತ ವಿಶ್ವಾಸ ನಂಬಿಕೆ ಮಾಸದಂತೆ , ಪೊಲೀಸ್ ಇಲಾಖೆ, ಇಂತಹ ವ್ಯಕ್ತಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣವಾದ ಶಿಕ್ಷೆ ನೀಡಬೇಕು..

ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ ಶ್ರೀ ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಶ್ರೀ ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಕಾಂಡಿಕೆ ಹಾಗೂ ಪಿ.ಎಸ್.ಐ ನವೀನ್ ಮಠಪತಿ & ಸಿಬ್ಬಂದಿಯವರಾದ, ಸಿಪಿಸಿ ಶ್ರೀಕಾಂತ್, ಕಾಶಿನಾಥ, ಕವನ ರವರನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿ ಮಂಜುನಾಥನಾಯ್ಕ ಈತನನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ 5,00,000/- ಮೌಲ್ಯದ ಕಾರು, ಹಾಗೂ ಸುಮಾರು 150,000/-ರೂ ಬೆಲೆಬಾಳುವ 10 ಗ್ರಾಂ ತೂಕದ ಬಂಗಾರದ ಸರವನ್ನು ಅಮಾನತ್ತುಪಡಿಸಿಕೊಂಡು, ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.

 

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ:  ಆರೋಪಿ ಪೋಲಿಸರ ವಶಕ್ಕೆ

 

 

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯ ಬಡಾವಣೆಯವಾಸಿ 73 ವರ್ಷದ ವೃದ್ದೆಯೊಬ್ಬರು ದಿನಾಂಕ 13/05/2026 ರಂದು ವಾಕಿಂಗ್ ಗೆ ಹೋಗಿದ್ದಾಗ, ಯಾರೋ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದು ವೃದ್ದೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಈ ಬಗ್ಗೆ ಠಾಣಾ ಗುನ್ನೆ ಸಂಖ್ಯೆ 0093/2026 ಕಲಂ 309 (4) ಬಿ.ಎನ್.ಎಸ್ ರೀತ್ಯಾ ಸರಗಳ್ಳತನ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.

ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ ಶ್ರೀ ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಶ್ರೀ ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಶ್ರೀ ಸಂತೋಷ ಕುಮಾರ್ ಡಿ. ಕೆ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ರವರ ಉಸ್ತುವಾರಿಯಲ್ಲಿ ಶ್ರೀ ತಿರುಮಲೇಶ್ ಜಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಸಿಪಿಸಿ ಶ್ರೀ ರಾಜು ಕೆ ಆರ್ ಶ್ರೀ ಚಂದ್ರಾನಾಯ್ಕ ಬಿ, ಶ್ರೀ ಮಲ್ಲಪ್ಪ ಎಸ್ ಜಿ, ಶ್ರೀ ಅರುಣಕುಮಾರ್ ಎನ್ ಕೆ, ಶ್ರೀ ಮನುಶಂಕರ್ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಭರತ್ 21 ವರ್ಷ ಚಾಲುಕ್ಯನಗರ ಗೋಪಾಳ ಶಿವಮೊಗ್ಗ ಟೌನ್ ಮತ್ತು 2) ಮೊಹ್ಮದ್ ಆಬೀದ್ 19 ವರ್ಷ ಮೇಲಿನ ತುಂಗಾನಗರ ಗೋಪಾಳ ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟ 07 ಗ್ರಾಂ ತೂಕದ ಬಂಗಾರ ಅಂದಾಜು ಬೆಲೆ 1,00,000 ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅಂದಾಜು ಬೆಲೆ 40,000/- ರೂ ಸೇರಿ ಒಟ್ಟು ಅಂದಾಜು ಮೌಲ್ಯ 1,40,000/- ರೂ ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ.