ಶಿವಮೊಗ್ಗ: ಜಮೀನಿನ ಮಾರಾಟದ ಹಣದ ವಿಚಾರವಾಗಿ ಒಡಹುಟ್ಟಿದವರ ಮಧ್ಯೆ ಹಲವು ದಿನಗಳಿಂದ ಹಣದ ವಿಚಾರದಲ್ಲಿ ವೈಮನಸ್ಸು ಹುಟ್ಟಿದ್ದು ಕೊಲೆಯಲ್ಲಿ ಅಂತ್ಯಗೊಂಡಿದೆ … ಹಣದಾಸಗೆ ಒಡಹುಟ್ಟಿದವನನ್ನೆ ಅಟ್ಟಾಡಿಸಿಕೊಂಡು ಇರಿದು ಹತ್ಯೆ.
ಗಂಡ ಹೆಂಡತಿ ಮಧ್ಯೆ ವೈ ಮನಸು
ಕೊಲೆಯಾದ ಸಂತೋಷ ಮತ್ತು ಆತನ ಹೆಂಡತಿ ರಂಜಿತಾರವರ ಮಧ್ಯೆ ಸಂಸಾರದ ವಿಚಾರದಲ್ಲಿ ವೈಮನಸ್ಸು ಬಂದಿದ್ದರಿಂದ ರಂಜಿತಾಳು ತನ್ನ ಮಕ್ಕಳಾದ ರಂಗನಾಥ & ಚಿರು ಇವರೊಂದಿಗೆ ತವರು ಮನೆಯಾದ ಹಾರನಹಳ್ಳಿಗೆ ಹೋಗಿ ಅಲ್ಲಿಯೇ ಇರುತ್ತಾಳೆ. ಈಗ್ಗೆ ಸುಮಾರು 6-7 ತಿಂಗಳ ಹಿಂದೆ ಪಿರ್ಯಾದಿಯು ಮೂರು ಜನ ಮಕ್ಕಳಿಗೂ ತಲಾ ಮುಕ್ಕಾಲು ಎಕರೆ ಜಮೀನು ಸಮನಾಗಿ ಹಂಚಿದ್ದು ಪಿರ್ಯಾದಿಯ ಮತ್ತೊಬ್ಬ ಮಗನಾದ ರಮೇಶನು ಸಂತೋಷನಿಗೆ ನೀನು ತಾಯಿಗೆ ಬಂದ ಜಮೀನನ್ನು ಮಾರಾಟ ಮಾಡಿ ಬಂದ ಹಣವನ್ನು ನೀನೇ ಇಟ್ಟುಕೊಂಡಿದ್ದೀಯ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಆಗಾಗ್ಗೆ ಬೆದರಿಕೆ ಹಾಕುತ್ತಿದ್ದ.
ರಮೇಶನ ದುರಾಸೆಗೆ ಬಲಿಯಾದ ಸಂತೋಷ!!

ರಮೇಶನ ಹಣದಾಸೆಯ ಅಮಲಿನಿಂದ ದಿನಾಂಕ-13/05/2026 ರಂದು ಬೆಳಗ್ಗೆ ರಮೇಶನು ಸಂತೋಷನಿಗೆ ಅವಾಚ್ಯವಾಗಿ ಬೈದು ಅಮ್ಮನಿಗೆ ಬಂದ ಜಮೀನಿನನ್ನು ಮಾರಾಟಮಾಡಿ ಹೆಂಡತಿ ಮಕ್ಕಳನ್ನು ಸಾಕದೇ ತವರುಮನೆಗೆ ಕಳಿಸಿ ಮಜಾ ಮಾಡುತ್ತಿದ್ದೀಯ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿದವನೇ ಮನೆಯಲ್ಲಿದ್ದ ಒಂದು ಕುಡುಗೋಲು ತಂದು ಸಂತೋಷನ ಬೆನ್ನಿನ ಎಡಭಾಗ, ಎಡತೊಡೆ, ಎಡಭುಜದ ಹತ್ತಿರ ಬಲವಾಗಿ ಹೊಡೆದು ರಕ್ತಗಾಯಪಡಿಸಿದ್ದು, ನಂತರ ಬುಲೆರೋ ವಾಹನದಲ್ಲಿ ಚಿಕಿತ್ಸೆಗಾಗಿ ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ 108 ವಾಹನದಲ್ಲಿ ಸಂತೋಷನನ್ನು ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂತೋಷನು ಮಧ್ಯಾಹ್ನ 12.45 ಗಂಟೆಗೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾನೆ.

ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 140/2026 ಕಲಂ 103(1) ಬಿ ಎನ್ ಎಸ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಪ್ರಕರಣದ ತನಿಖಾಧಿಕಾರಿಗಳಾದ ಶ್ರೀಮತಿ ನಾಗಮ್ಮ ಪೋಲಿಸ್ ವೃತ್ತ ನಿರೀಕ್ಷಕರು, ಹೊಳೆ ಹೊನ್ನೂರು ಪೊಲೀಸ್ ಠಾಣಾ ಪ್ರಭಾರ ರವರ ನೇತೃತ್ವದಲ್ಲಿ, ಶ್ರೀಮತಿ ಶಾಂತಲಾ ಪಿಎಸ್ಐ ಹೊಳೆಹೊನ್ನೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಈ ದಿನ ದಿನಾಂಕ 13-05-2026 ರಂದು ಸಂಜೆ 05:00 ಗಂಟೆಗೆ ಪ್ರಕರಣದ ಆರೋಪಿತನಾದ ರಮೇಶ ಈತನನ್ನು ದಸ್ತಗಿರಿ ಮಾಡಿರುತ್ತಾರೆ.


More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!