
ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ,ಪೋಲಿಸ್ ಇಲಾಖೆ, ಹಲವು ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷತನಕ್ಕೆ ಎಚ್ಚರಿಕೆ ನೀಡಿದ ಜನಪ್ರತಿನಿಧಿಗಳು…

ದಿ:22-05-2026 ಇಂದು ಜಿ.ಪಂ. ಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ನಗರ ಶಾಸಕರಾದ ಚನ್ನಬಸಪ್ಪ , ಸಾಗರ ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಶಾಸಕರಾದ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ, ಶಾಸಕರಾದ ಶಾರದಾ ಪೂರ್ಯಾ ನಾಯ್ಕ,ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು,ಎಂಎಡಿಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ,ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಓ ಹೇಮಂತ್ ಎನ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಎಸ್ ಪಿ ಕಾರಿಯಪ್ಪ, ಜಿ.ಪಂ ಉಪ ಕಾರ್ಯದರ್ಶಿಗಳು, ಸಿಪಿಓ,ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಹಲವು ವಿಚಾರಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕರ್ತವ್ಯ ನಿರ್ವಹಿಸಬೇಕೆಂದು ಹಾಗೂ ನಾಗರಿಕರ ವಿಚಾರದಲ್ಲಿ ನಿರ್ಲಕ್ಷ ತೋರಿದರೆ ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ!! ನೀಡಿದರು.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷತನಕ್ಕೆ ಬಡವರ ಬಲಿ : ಶಾಸಕ ಚನ್ನಬಸಪ್ಪ !!

ಶಿವಮೊಗ್ಗ ನಗರ ಶಾಸಕರಾದ ಚನ್ನಬಸಪ್ಪ ನೇರವಾಗಿ ಸಭೆಯ ಅಧ್ಯಕ್ಷರನ್ನು ಪ್ರಶ್ನೆ ಮಾಡುತ್ತ.ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ವಿಚಾರವಾಗಿ. ಶಿವಮೊಗ್ಗ ನಗರ ಹಾಗೂ ಹಲವಾರು ಗ್ರಾಮಗಳಿಂದ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ಬರುವಂತ ಸಾರ್ವಜನಿಕರ ದೂರಿನ ಅನ್ವಯ ಆಸ್ಪತ್ರೆಯಲ್ಲಿ ಸ್ವಚ್ಛತೆ, ಔಷಧಿ ವಿತರಣೆ, ರೋಗಿಗಳ ಯೋಗ ಕ್ಷೇಮ ವಿಚಾರಣೆ, ಶೌಚಾಲಯಗಳ ದುರುಸ್ಥಿತಿ, ವೈದ್ಯರುಗಳ ನಿರ್ಲಕ್ಷತನ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯುತ್ತಿರುವಂತ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ . ಕಲಿಕೆಗೆಂದು ಬಂದಂತ ಕಲಿಕಾ ವಿದ್ಯಾರ್ಥಿ ವೈದ್ಯ ವಿದ್ಯಾರ್ಥಿಗಳೇ ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ. ಮುಖ್ಯ ವೈದ್ಯರುಗಳು ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಾರದೆ, ಹಾಗೂ “ಗೋಲ್ಡನ್ ಅವರ್ಸ್: ಎನ್ನುವಂತ ಸಮಯಗಳಲ್ಲಿ ಸಾರ್ವಜನಿಕನ ಪ್ರಾಣ ಉಳಿಸುವಂತಹ ಸಮಯಗಳಲ್ಲಿ ಸಂಬಂಧಪಟ್ಟಂತಹ ಮುಖ್ಯ ವೈದ್ಯರುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಹಾಗೂ ಸರಿಯಾದ ಸಮಯಕ್ಕೆ ಬಾರದೆ ಹಲವಾರು ಬಡಜೀವಗಳು ಉಸಿರು ಚೆಲ್ಲುತ್ತಿವೆ. ಇದಕ್ಕೆ ಹೊಣೆ ಯಾರು? ಬಡವರ ಜೀವಕ್ಕೆ ಬೆಲೆ ಇಲ್ಲವೇ…? ಆಸ್ಪತ್ರೆ ಗೆ ಚಿಕಿತ್ಸೆಗಾಗಿ ಬಂದಂತಹ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ನೇಹಮಯವಾಗಿ ಚಿಕಿತ್ಸೆ ನೀಡಿ ಅವರ ನೋವುಗಳಿಗೆ ಸ್ಪಂದಿಸಿ ಪ್ರೀತಿಯಿಂದ ಕರ್ತವ್ಯ ನಿರ್ವಹಿಸುವಂತಹ ವೈದ್ಯರುಗಳು ಇಂದು ಕಾಣಸಿಗುತ್ತಿಲ್ಲ. ಕೇವಲ ಸಂಬಳಕ್ಕಾಗಿ ಹಾಗೂ ತಮ್ಮದೇ ಆದಂತಹ ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಾ ಹೆಚ್ಚಿನ ಕಾಲ ಖಾಸಗಿ ಆಸ್ಪತ್ರೆಗಳಲ್ಲಿ ಕಳೆಯುತ್ತಾ, ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಕಲಿಕಾ ವೈದ್ಯ ವಿದ್ಯಾರ್ಥಿಗಳಿಂದ ಚಿಕಿತ್ಸೆ ನೀಡಲಾಗುತ್ತದೆ. ಇವರ ನಿರ್ಲಕ್ಷತನಕ್ಕೆ ಹಾಗೂ ಇವರ ಕಲಿಕೆಗೆ ವಸ್ತುಗಳಾಗಿವೆ ಬಡವರ ಜೀವಗಳು. ಸಚಿವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಶಾಸಕರುಗಳ ಸಭೆಯನ್ನು ಒಮ್ಮೆಯಾದರೂ ಕರೆದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಶಾಸಕರುಗಳ ಸಭೆಯನ್ನು ಆಸ್ಪತ್ರೆಯಲ್ಲಿ ಏರ್ಪಡಿಸುವ ಮೂಲಕ ಜಿಲ್ಲಾ ಆಸ್ಪತ್ರೆಗೆ ಬರುವಂತ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ, ಆರೋಗ್ಯ ಸೇವೆಯಲ್ಲಿ ಉನ್ನತ ಮಟ್ಟದ ಹಾಗೂ ಗುಣಮಟ್ಟದ ಸೇವೆ ನೀಡುವಂತಹ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ವಿಚಾರವಾಗಿ ಸೂಚನೆ ನೀಡುವಂತೆ ತಿಳಿಸಿದರು.
ಅರಣ್ಯ ಅಧಿಕಾರಿಗಳೆಂದರೆ…? ಸುಪ್ರೀಂ ಕೋರ್ಟ್ ಅಲ್ಲ : ತೀರ್ಥಳ್ಳಿ ಶಾಸಕ ಅರಗ ಜ್ಞಾನೇಂದ್ರ..

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಹಾಗೂ ಸುತ್ತಮುತ್ತಲಿನ ತಾಲೂಕುಗಳ ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಹಲವಾರು ಅಕ್ರಮ ದಂಧೆಗಳು ಹೆಗ್ಗಿಲ್ಲದೆ ನಡೆಯುತ್ತಿದ್ದು. ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆಯೇ..? ಅಥವಾ ಕಳ್ಳದಂಧೆಕೋರರ ಜೊತೆಗೂಡಿ ಅಕ್ರಮ ದಂಧೆಗಳಿಗೆ ದಾರಿ ದೀಪವಾಗಿದಯೆ..? ಎಂದು ತಿಳಿಯದಂತಾಗಿದೆ. ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವಂತಹ ಅಕ್ರಮ ದಂಧೆಗಳಲ್ಲಿ ಲಂಚವೆಂಬ ಮೋಹಕ್ಕೆ ಬಲಿಯಾಗಿ. ತಮ್ಮ ಕರ್ತವ್ಯವನ್ನು ಮರೆತು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿರುವಂತ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಮಲೆನಾಡು ಭಾಗದಲ್ಲಿ ಎಲೆಚುಕ್ಕಿ ರೋಗದಿಂದಾಗಿ ಸುಮಾರು ೪೦ ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದ ರೈತರು ೪-೫ ಕ್ವಿಂಟಾಲ್ ಬೆಳೆಯುವಂತಾಗಿದೆ. ಆದ್ದರಿಂದ ಎಲೆಚುಕ್ಕಿ ರೋಗ ನಿರ್ಮೂಲನೆಗೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಮಳೆ ಸಹಿತ ಬಿರುಗಾಳಿಯಿಂದದಂತಹ ನಷ್ಟಗಳಿಗೆಸಮರ್ಪಕವಾಗಿ ತ್ವರಿತಗತಿಯಲ್ಲಿ. ಸರ್ಕಾರದಿಂದ ನೀಡುವಂತಹ ಸವಲತ್ತುಗಳನ್ನು ಸಹಾಯ ಹಸ್ತದ ಅನುದಾನಗಳನ್ನು ಶೀಘ್ರದಲ್ಲಿ ತಲುಪಿಸುವಂತಹ ಹಾಗೂ ವಿಶ್ವಾಸಮಯವಾದಂತಹ ಕರ್ತವ್ಯವನ್ನು, ನಿಯಮಗಳ ಅನುಸಾರ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು : ಮಧು ಬಂಗಾರಪ್ಪ…

ಜಿಲ್ಲೆಯ ಹೊಳೆಹೊನ್ನೂರು ವ್ಯಾಪ್ತಿಯ ಮತ್ತು ಇತರೆ ಕೆಲವೆಡೆ ಇತ್ತೀಚೆಗೆ ಬಿರುಗಾಳಿ ಮತ್ತು ಮಳೆಯಿಂದಾಗಿ ಅನೇಕ ರೈತರ ಅಡಿಕೆ ಮರಗಳು ಧರೆಗುರುಳಿ ಸಂಭವಿಸಿದ ಹಾನಿಗೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಅಡಿಕೆ ಬೆಳೆ ಹಾನಿ ಕುರಿತು ಈಗಾಗಲೇ ಮೌಲ್ಯ ಮಾಪನ ಮಾಡಲಾಗಿದೆ. ಈ ಹಾನಿ ವಿಷಯ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕಿದೆ. ನಾನು ಮತ್ತು ಸಾಗರ ಶಾಸಕರು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಮನವಿ ಮಾಡಿದ್ದೇವೆ ಎಂದ ಅವರು ಕೇಂದ್ರ ಸರ್ಕಾರವೂ ಈ ಕುರಿತು ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸೋಣವೆಂದರು. ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಗೆಸ್ಟ್ ಶಿಕ್ಷಕರನ್ನು ನೇಮಕ ಮಾಡಲು ಆದೇಶಿಸಲಾಗುತ್ತಿದೆ. ಪಿಯು ಗೆ ನೆನ್ನೆ ಆದೇಶ ಆಗಿದ್ದು, ಎಸ್ ಎಸ್ ಎಲ್ ಸಿ ಗೆ ಇಂದೇ ಆದೇಶ ಆಗಲಿದೆ ಎಂದರು. ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದಕ್ಕೆ ಶಾಲಾ ಶಿಕ್ಷಣ ಸಚಿವರಿಗೆ ಹಾಗೂ ಜಿ.ಪಂ ಸಿಇಓ ಅವರ ಕಾರ್ಯವೈಖರಿಗೆ ಶಾಸಕರು ಸಭೆಯಲ್ಕಿ ಅಭಿನಂದನೆ ಸಲ್ಲಿಸಿದರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.

ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಮಾತನಾಡಿ, ಮಳೆಗಾಳಿ ಹಾನಿಗೆ ಎಕರೆಗೆ ರೂ. ೯೦೦೦ ನಿಗದಿಯಿಂದ ರೈತರಿಗೆ ಏನೂ ಉಪಯೋಗವಿಲ್ಲ. ಅಡಿಕೆ ಮರಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದು, ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು. ಶಾಸಕರಾದ ಶಾರದಾ ಪೂರ್ಯಾನಾಯ್ಕ, ಈ ಬೆಳೆ ನಷ್ಟಕ್ಕೆ ವಿಮೆ ಸೇರ್ಪಡೆಯಾಗುವುದಿಲ್ಲ. ಆದ್ದರಿಂದ ಸೇರ್ಪಡೆಗೊಳಿಸಲು ಸಹ ಕ್ರಮ ಕೈಗೊಳ್ಳಬೇಕೆಂದರು. ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಮಾತನಾಡಿ, ಗಾಳಿಮಳೆ ಯಿಂದ ರೈತರಿಗೆ ಪರಿಹಾರ ನೀಡಲು ಪರಿಹಾರ ಪೋರ್ಟಲ್ ಲ್ಲಿ ವರದಿ ದಾಖಲಿಸಿದ್ದು ಇನ್ನು ೧೫ ರಿಂದ ೨೦ ದಿನಗಳಲ್ಲಿ ಪರಿಹಾರ ಮಂಜೂರಾಗಲಿದೆ ಎಂದರು.


More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಡಿ.ಹೆಚ್.ಟಿ.ಟಿ 3 ವರ್ಷದ ಡಿಪ್ಲೋಮಾ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ..!!