ಸಿಎಲ್‌ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …

ಶ್ರೀ ದುರ್ಗಾಂಬಾ ಹೋಟೆಲ್ನಲ್ಲಿ ಅಕ್ರಮ ಮಧ್ಯ ಮಾರಾಟ ..

ಸಿಎಲ್‌2 ಮಧ್ಯದಂಗಡಿಯಲ್ಲಿ ಮಧ್ಯಪಾನ ಮಾಡಲು ಅವಾಕಾಶ…

ಮೇಲೆ ಹೋಟೆಲ್ ಕೆಳಗೆ ಸಿಎಲ್‌2

ಶಿವಮೊಗ್ಗ: 20-05-2026- ಅಬಕಾರಿ ಇಲಾಖೆಯ ನಿಯಮಗಳನ್ನು ಪಾಲೀಸದೆ ಅಕ್ರಮವಾಗಿಮಧ್ಯ ಮಾರಾಟ ಮಾಡುತ್ತಿರುವ ಹಲವಾರು ಮಧ್ಯದ ಅಂಗಡಿಗಳು, ಹಾಗೂ ಮಾಂಸಾಹಾರಿ ಹೋಟೆಲ್ ಗಳು, ರಾಜ್ಯ ಹೆದ್ದಾರಿಯ ಪಕ್ಕದಲಿರುವ ಗೂಡಂಗಡಿಗಳು, ಹಾಗೂ ಇನ್ನಿತರ ವ್ಯವಸ್ಥೆಯ ಮೂಲಕ ಮಧ್ಯ ಮಾರಾಟವನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆಗೆ ಹಕ್ಕಿಲ್ಲವೇ. ಅಧಿಕಾರವಿಲ್ಲವೇ. ಇದ್ದರೂ ಕಣ್ಣು ಮುಚ್ಚಿ ಕುಳಿತ್ತಿದ್ದಾರೆಯೇ..?ಅಥವಾ ಲಂಚಕ್ಕಾಗಿ ಸುಮ್ಮನಿದ್ದಾರಯೇ..? ರಾಜ್ಯದ ಮುಖ್ಯಮಂತ್ರಿಗಳೇ ಸಾರ್ವಜನಿಕರ ರಸ್ತೆಗಳಲ್ಲಿ ಮಾಂಸಾಹಾರಿ ಹೋಟೆಲ್,ಹಾಗೂ ಸಿಎಲ್‌2 ಮಧ್ಯದಂಗಡಿಗಳಿಂದ. ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಹಾಗೂ ಪಾದ ಚಾರಿಗಳಿಗೆ ಹಲವಾರು ರೀತಿಯ ಸಮಸ್ಯೆಗಳು ಹಾಗೂ ಅಪಘಾತಗಳು, ಪ್ರಾಣ ಹಾನಿ, ಹಾಗೂ ಇನ್ನಿತರ ಮಾನವ ಹಕ್ಕು ಉಲ್ಲಂಘನೆ ನಡೆಯುತ್ತಿದ್ದರು, ಕಣ್ಣು ಮುಚ್ಚಿ ಕುಳಿತಿರುವ ಸರ್ಕಾರ ಕೇವಲ ತೆರಿಗೆಗಾಗಿ ರಾಜ್ಯಭಾರ ಮಾಡುತ್ತಿದೆಯೋ..? ಅಥವಾ ಸಾರ್ವಜನಿಕರ ಹಿತಕ್ಕಾಗಿ ಸರ್ಕಾರ ರಾಜ್ಯಭಾರ ಮಾಡುತ್ತಿದೆಯೋ..? ಸಾರ್ವಜನಿಕರಿಗೆ ತಿಳಿಯದಂತಾಗಿದೆ…

ಶಿವಮೊಗ್ಗ ನಗರದ ಅನೇಕ ಮುಖ್ಯ ರಸ್ತೆಗಳಲ್ಲಿ ಸಿಗ್ನಲ್ ಗಳ ಹತ್ತಿರ ಹಾಗೂ ಶಾಲಾ ಕಾಲೇಜು ದೇವಸ್ಥಾನ ಇನ್ನಿತರ ಸ್ಥಳಗಳಲ್ಲಿ ಮಾಂಸಹಾರಿ ಹೋಟೆಲ್ ಗಳಲ್ಲಿ ಸಿಎಲ್‌2  ಮಧ್ಯದಂಗಡಿಗಳಲ್ಲಿ. ಕಾನೂನು ಬಾಹಿರವಾಗಿ, ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಮಧ್ಯ ಮಾರಾಟವನ್ನು  ಯಾವುದೇ  ಅಧಿಕಾರಿಗಳ  ಭಯವಿಲ್ಲದೆ.  ಮಧ್ಯ ಮಾರಾಟ ಮಾಡುತ್ತಿರುವಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದೇ..? ಅಥಾವ ಕ್ರಮ ಕೈಗೊಳ್ಳದೆ ಅವರು ನೀಡುವ ಎಂಜಲು ಕಾಸಿಗೆ ಜೊತಬಿದ್ದು ತಮ್ಮ ಕರ್ತವ್ಯವನ್ನು ಮರೆತಿದ್ದಾರೆಯೇ ಅಬಕಾರಿ ಅಧಿಕಾರಿಗಳು. ಕಾನೂನು ಬಾಹಿರವಾಗಿ ಮಧ್ಯ ಮಾರಾಟ ಮಾಡುತ್ತಿರುವಂತ ಮಾಂಸಾಹಾರಿ ಹೋಟೆಲ್ ಗಳು ಹಾಗೂ ಅಬಕಾರಿ ನಿಯಮಗಳನ್ನು ಪಾಲಿಸದೆ ಮಧ್ಯ ಮಾರಾಟ ಮಾಡುತ್ತಿರುವಂತಹ ಪರವಾನಿಗೆ ಪಡೆದಂತಹ “ಸಿಎಲ್‌2” ಮಧ್ಯದ ಅಂಗಡಿಗಳ ಕಾನೂನು ಬಾಹಿರವಾದಂತಹ ಅಕ್ರಮ ದಂಧೆಗಳನ್ನು ಕಂಡರೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿರುವಂತ ಅಬಕಾರಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡುವಂತಾಗಬೇಕು.

ಅಕ್ರಮ ಮಧ್ಯಮಾರಾಟದಿಂದಾಗುವ ಸಮಸ್ಯೆಗಳೇನು…

ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ ಮಧ್ಯದ ಅಂಗಡಿ ತೆರೆಯಲು ಪರವಾನಿಗೆ ಪಡೆದಂತಹ ನಿಯಮಗಳನ್ನು ಅನುಸರಿಸಿ ತಮ್ಮ ವ್ಯಾಪಾರ ನಡೆಸಲು ಸೂಚನೆಗಳನ್ನು ನೀಡುತ್ತಾರೆ ಆ ಪ್ರಕಾರವಾಗಿ ಮೊದಲನೇದಾಗಿ ಸಿ ಎಲ್ 2 ಮಧ್ಯದ ಅಂಗಡಿಯನ್ನು ತೆರೆಯಲು ಸಮಯವನ್ನು ನಿಗದಿಪಡಿಸಿದ್ದು ಅಬಕಾರಿ ನಿಯಮಗಳ ಪ್ರಕಾರ I)ವ್ಯವಹಾರದ ಅವಧಿ ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು 1968 ರ ನಿಯಮಗಳ ರೀತ್ಯಾ ಕರ್ನಾಟಕ ರಾಜ್ಯಾದ್ಯಂತ ದಿನಾಂಕ: 26.08.2009 ರಿಂದ ಚಾಲ್ತಿಗೆ ಬರುವಂತೆ ವಿವಿಧ ಸನ್ನದುಗಳ ವ್ಯವಹಾರದ ವೇಳೆ.

ಕ್ರ. ಸಂ.

ಸನ್ನದುಗಳು

ಸಮಯ

1

ಸೇಂದಿ ಮಳಿಗೆ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು)

ಬೆಳಿಗ್ಗೆ 6:00 ರಿಂದ ರಾತ್ರಿ 9:30

2

ಸಿಎಲ್-2 ಭಾ.ತ.ಮ / ವಿದೇಶಿಯ ಮದ್ಯ ಚಿಲ್ಲರೆ ಮಾರಾಟದ ಮಳಿಗೆಗಳು

ಬೆಳಿಗ್ಗೆ 10.00 ರಿಂದ ರಾತ್ರಿ 10.30

3

ಸಿಎಲ್-4 (ಕ್ಲಬ್)

ಬೆಳಿಗ್ಗೆ 9.00 ರಿಂದ ರಾತ್ರಿ 12.00

4

ಸಿಎಲ್-6ಎ (ಸ್ಟಾರ್ ಹೋಟೆಲ್)

ಬೆಳಿಗ್ಗೆ 9.00 ರಿಂದ ರಾತ್ರಿ 12.00

5

ಸಿಎಲ್-7 (ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್)

ಬೆಳಿಗ್ಗೆ 9.00 ರಿಂದ ರಾತ್ರಿ 12.00

6

ಸಿಎಲ್-9 (ಬಾರ್ ಮತ್ತು ರೆಸ್ಟೋರೆಂಟ್)

ಬೆಳಿಗ್ಗೆ 10.00 ರಿಂದ ರಾತ್ರಿ 11:30

7

ಆರ್ ವಿ ಬಿ

ಬೆಳಿಗ್ಗೆ 10.00 ರಿಂದ ರಾತ್ರಿ 11.30

8

ಸಿಎಲ್-11ಸಿ (ಎಂ.ಎಸ್.ಐ.ಎಲ್)

ಬೆಳಿಗ್ಗೆ 11.00 ರಿಂದ ರಾತ್ರಿ 10:00

ಈರೀತಿಯಾಗಿ ಅಬಕಾರಿ ನಿಯಮಗಳನ್ನು ಪಾಲಿಸದೆ. ಹಲವಾರು ಮಧ್ಯದಂಗಡಿಗಳು ಬೇಳಿಗ್ಗೆ ಸಮಯ 900-ಗಂಟೆಗೆ ಅಂಗಡಿಗಳನನ್ನು ತೆರೆಯುತ್ತಿದ್ದು. ಇದರಿಂದ ಯುವ ಜನಾಂಗ ಹಾಗೂ ರಸ್ತೆಯಲ್ಲಿ ಶಾಲೆಗಳಿಗೆ ಹೋಗುವಂತಹ ಮಕ್ಕಳ ಮನಸ್ಸಿನ ಮೇಲೆ ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು. ಮತ್ತು ರಸ್ತೆಗಳಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ, ಮಧ್ಯದ ನಶೆಯಲ್ಲಿ ತೇಲಾಡುತ್ತಿರುವಂತಹ ವ್ಯಕ್ತಿಗಳಿಂದ ಹಲವಾರು ತೊಂದರೆಗಳು, ಅಪಘಾತಗಳು ಆಗುತ್ತಿದ್ದು. ಈ ವಿಚಾರವಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳು ಕಾನೂನು ನಿಯಮವನ್ನು ಪಾಲಿಸದೆ ಅಕ್ರಮ ಮಧ್ಯಮಾರಾಟ ಮಾಡುವಂತಹ ಮಾಂಸಾಹಾರಿ ಹೋಟೆಲ್ಗಳಾದ


(


1, ಶ್ರೀ ದುರ್ಗಾಂಭ ಮಾಂಸಹಾರಿ ಹೋಟೇಲ್‌, 100ಅಡಿ ರಸ್ತೆ ರಾಜೇಂದ್ರ ನಗರ) (ಬಾಲಾಜಿ ವೈನ್‌ ಸೆಂಟರ್‌, ವಿನೋಬನಗರ ಮೋದಲನೆ ಹಂತ 1ನೇ ತಿರುವು.)  (ಶಕ್ತಿ ಬಾರ್‌ ಅಂಡ್‌ ರೇಸ್ಟೋ ರೇಂಟ್‌, ವಿನೋಬ ನಗರ ಮುಖ್ಯರಸ್ತೆ.)  ಮತ್ತು ಇನ್ನಿತರ ಪರವಾನಿಗೆ ಪಡೆದಂತಹ, ಹಾಗೂ ಪಡೆಯದಂತೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತ ಕೆಲಸವನ್ನು. ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಕರ್ನಾಟಕ ಅಬಕಾರಿ ಇಲಾಖೆಯ ಆಯುಕ್ತರು. ತಮ್ಮ ಅಧಿಕಾರ ಹಾಗೂ ಕರ್ತವ್ಯವನ್ನು ನಿಷ್ಠೆಯಿಂದ ತಮಗೆ ನೀಡಿರುವ ಅಧಿಕಾರವನ್ನು ಸಾರ್ವಜನಿಕರ ಪರವಾಗಿ ಹಾಗೂ ಅಬಕಾರಿ ನಿಯಮಗಳ ಅನುಸಾರ ಕ್ರಮ ಕೈಗೊಳ್ಳುವೇಕೆಂಬುದು, ಸಾರ್ವಜನಿಕರ ದೂರಿನ ಅನ್ವಯ (ಸಿಟಿ ರೌಂಡ್ಸ್ ಪತ್ರಿಕೆ ಬಳಗದಿಂದ ) ಕರ್ನಾಟಕ ಅಬಕಾರಿ ಇಲಾಖೆಯ ಆಯುಕ್ತರಿಗೆ ಹಾಗೂ

ಜಿಲ್ಲಾಧಿಕಾರಿಗಳವರಿಗೆ ಮನವಿ.

ವರದಿ: ಅಣ್ಣಪ್ಪ.ಎಂ-