ಶಿವಮೊಗ್ಗ- 02-11-2026
ಹ್ಯಾಮಿಲ್ಟನ್, ನ.2: ಟಿ-20 ಕ್ರಿಕೆಟ್ ನಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡಿರುವ ಗ್ಲೆನ್ ಫಿಲಿಪ್ಸ್, ಭಾರತ ತಂಡದ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ನ್ಯೂಝಿಲ್ಯಾಂಡ್ ಬ್ಯಾಟರ್ ಫಿಲಿಪ್ಸ್ ಭಾನುವಾರ ನಡೆದ ಐದನೇ ಟಿ-20 ಪಂದ್ಯದ ವೇಳೆ ಇಂಗ್ಲೆಂಡ್ನ ಫಿಲ್ ಸಾಲ್ಟ್ ದಾಖಲೆಯನ್ನು ಮುರಿದಿದ್ದಾರೆ.
2023ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 331 ರನ್ ಗಳಿಸಿದ್ದ ಸಾಲ್ಟ್ ದಾಖಲೆಯನ್ನು ಫಿಲಿಪ್ಸ್ ಮುರಿದಿದ್ದಾರೆ. ಫಿಲಿಪ್ಸ್ ಭಾರತ ವಿರುದ್ಧದ ಸರಣಿಯಲ್ಲಿ ಒಟ್ಟು 341 ರನ್ ಗಳಿಸಿದ್ದು, ಟಿ-20 ಕ್ರಿಕೆಟ್ ನ ದ್ವಿಪಕ್ಷೀಯ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿ ಹೊಸ ಮೈಲಿಗಲ್ಲು ತಲುಪಿದರು.
ಬಲಗೈ (ರೈಟ್ ಹ್ಯಾಂಡ್) ಬ್ಯಾಟರ್ ಫಿಲಿಪ್ಸ್ ಕೊನೆಯ ಪಂದ್ಯದಲ್ಲಿ 38 ಎಸೆತಗಳಲ್ಲಿ ಔಟಾಗದೆ 65 ರನ್ ಗಳಿಸಿ, ನ್ಯೂಝಿಲ್ಯಾಂಡ್ ತಂಡವು ಭಾರತ ನೀಡಿದ್ದ 192 ರನ್ ಗಳ ಗುರಿಯನ್ನು ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟುವಲ್ಲಿ ನೆರವಾದರು.
ಫಿಲಿಪ್ಸ್ ಟಿ-20 ಸರಣಿಯಲ್ಲಿ ಔಟಾಗದೆ 82, 70, 17, 107 ಹಾಗೂ ಔಟಾಗದೆ 65 ರನ್ ಗಳಿಸಿದರು. ಮೂರು ಅರ್ಧಶತಕ ಹಾಗೂ ಒಂದು ಶತಕ ದಾಖಲಿಸಿದರು. ದ್ವಿಪಕ್ಷೀಯ ಟಿ-20 ಸರಣಿಯಲ್ಲಿ ನಾಲ್ಕು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಕೇವಲ ಮೂರನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ ಹಾಗೂ ಜಪಾನ್ ನ ಎಸ್. ರವಿಚಂದ್ರನ್ ಅವರೂ ಇದ್ದಾರೆ.
ಸಾಲ್ಟ್ 2023ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 331 ರನ್ ಗಳಿಸಿದ್ದರು. ಪಾಕಿಸ್ತಾನದ ರಿಝ್ವಾನ್ 2022ರಲ್ಲಿ ಇಂಗ್ಲೆಂಡ್ ವಿರುದ್ಧ 316 ರನ್ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.
ನ್ಯೂಝಿಲ್ಯಾಂಡ್ನ ಬ್ಯಾಟಿಂಗ್ ಅಭಿಯಾನದಲ್ಲಿ ಫಿಲಿಪ್ಸ್ ಅವರ ಸ್ಥಿರ ಪ್ರದರ್ಶನ ಕೇಂದ್ರಬಿಂದುವಾಗಿತ್ತು. ಅವರಿಗೆ ವೇಗದ ಹಾಗೂ ಸ್ಪಿನ್ ಬೌಲಿಂಗ್ ಅನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯವಿದೆ.
ದ್ವಿಪಕ್ಷೀಯ ಟಿ-20 ಸರಣಿಯಲ್ಲಿ ನಾಲ್ಕು 50 ಪ್ಲಸ್ ಸ್ಕೋರ್ ಗಳು
ಮುಹಮ್ಮದ್ ರಿಝ್ವಾನ್, ಇಂಗ್ಲೆಂಡ್ ವಿರುದ್ಧ, 2022 . ಎಸ್. ರವಿಚಂದ್ರನ್ (ಜಪಾನ್), ಮಂಗೋಲಿಯಾ ವಿರುದ್ಧ, 2024 . ಗ್ಲೆನ್ ಫಿಲಿಪ್ಸ್, ಭಾರತ ವಿರುದ್ಧ, 2026.
ದ್ವಿಪಕ್ಷೀಯ ಟಿ-20 ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದವರು
341 – ಗ್ಲೆನ್ ಫಿಲಿಪ್ಸ್, ಭಾರತ ವಿರುದ್ಧ, 2026 . 331 – ಫಿಲ್ ಸಾಲ್ಟ್, ವೆಸ್ಟ್‌ಇಂಡೀಸ್ ವಿರುದ್ಧ, 2023 . 316 – ಮುಹಮ್ಮದ್ ರಿಝ್ವಾನ್, ಇಂಗ್ಲೆಂಡ್ ವಿರುದ್ಧ, 2022 . 297 – ಸಾಹಿಲ್ ಚೌಹಾಣ್ (ಎಸ್ಟೋನಿಯಾ), ಸೈಪ್ರಸ್ ವಿರುದ್ಧ, 2024 . 290 – ಎಂ. ಚಾಪ್ಮನ್, ಪಾಕಿಸ್ತಾನದ ವಿರುದ್ಧ, 2023.


More Stories
153 ಜನರನ್ನು ಬಲಿ ಪಡೆದ “ದಿತ್ವಾ ಚಂಡಮಾರುತ” : ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್…!!
ಚಲಿಸುತ್ತಿದ್ದ ಕಾರು ರಸ್ತೆಯ ಪಕ್ಕದಲ್ಲಿದ್ದ ಡಿವೈಡರಿಗೆ ಡಿಕ್ಕಿ ನಾಲ್ವರು ಭಾರತೀಯ ಮೂಲದವರು ಸಾವು..!
The full story of Thailand’s extraordinary cave rescue