City Rounds News

Kannada News Website

ಚಲಿಸುತ್ತಿದ್ದ ಕಾರು ರಸ್ತೆಯ ಪಕ್ಕದಲ್ಲಿದ್ದ ಡಿವೈಡರಿಗೆ ಡಿಕ್ಕಿ ನಾಲ್ವರು ಭಾರತೀಯ ಮೂಲದವರು ಸಾವು..!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್ 
          ಅಣ್ಣಪ್ಪ ಎಂ

  ಟೆಸ್ಲಾ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾಗಿ ನಂತರ ಅದರ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಭಾರತೀಯರು ಸಾವನ್ನಪ್ಪಿದ ಘಟನೆ ಕೆನಡಾದ ಟೊರೊಂಟೊ ಬಳಿ ನಡೆದಿದೆ.

ಮೃತಪಟ್ಟವರಲ್ಲಿ ಗುಜರಾತ್‌ನ ಗೋಧ್ರಾ ಮೂಲದ ಕೇತಾ ಗೋಹಿಲ್ (30) ಮತ್ತು ನಿಲ್ ಗೋಹಿಲ್ (26) ಸೇರಿದ್ದಾರೆ.

ಇವರು ಇತರ ಇಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡಲು ಹಲವಾರು ಮಂದಿ ಪ್ರಯತ್ನಿಸಿದ್ದಾರೆ. ತಮ್ಮ ಕಾರುಗಳು ನಿಲ್ಲಿಸಿ ಅವಘಡಕ್ಕೀಡಾದ ಕಾರಿನ ಗಾಜುಗಳನ್ನು ಒಡೆಯಲು ಪ್ರಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಮೃತರು ಎಲ್ಲಿಗೆ ಹೋಗುತ್ತಿದ್ದರು ಹಾಗೂ ಅವರ ಟೆಸ್ಲಾ ಸ್ವಯಂ-ಚಾಲನಾ ಮಾದರಿಯಾಗಿದೆಯೇ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.