ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ
ಅಣ್ಣಪ್ಪ ಎಂ
(ಅ.25): ಕಳೆದ 2014ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ದಲಿತರು ಹಾಗೂ ಸವರ್ಣೀಯರ ನಡುವಿನ ಗಲಾಟೆ ಪ್ರಕರಣದ 98 ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಇನ್ನು ಶಿಕ್ಷೆ ಪ್ರಕಟ ಸುದ್ದಿ ಕೇಳುತ್ತಿದ್ದಂತೆಯೇ ಅಪರಾಧಿ ರಾಮಪ್ಪ ಭೋವಿ (44) ಸಾವನ್ನಪ್ಪಿದ್ದಾರೆ.ಹೌದು, ಕಳೆದ 10 ವರ್ಷಗಳ ಹಿಂದೆ ಮರಕುಂಬಿ ಗ್ರಾಮದಲ್ಲಿ ನಡೆದಿದ್ ಗಲಾಟೆ ಪ್ರಕರಣವು ಇಡೀ ರಾಜ್ಯಕ್ಕೆ ಕಪ್ಪು ಚುಕ್ಕೆಯಂತಾಗಿತ್ತು. ಸಂವಿಧಾನ ಜಾರಿಗೆ ಬಂದು ಸುಮಾರು 60 ವರ್ಷಗಳು ಕಳೆದಿದ್ದರೂ ಅಸ್ಪೃಶ್ಯತೆ ಆಚರಣೆ ಮಾಡಲಾಗಿತ್ತು. ಗಂಗಾವತಿ ಪಟ್ಟಣದ ಸಿನಿಮಾ ಮಂದಿರದಲ್ಲಿ ಟಿಕೆಟ್ ವಿಚಾರಕ್ಕೆ ಆರಂಭವಾದ ಜಗಳ ಮರಕುಂಬಿ ಗ್ರಾಮದಲ್ಲಿ ಸಮುದಾಯಗಳ ನಡುವಿನ ಕಲಹಕ್ಕೆ ವಿಸ್ತರಣೆಗೊಂಡಿತ್ತು. ಇನ್ನು ಗ್ರಾಮದಲ್ಲಿ ದಲಿತರ ಮೇಲೆ ಅಸ್ಪೃಶ್ಯತೆ ಮಾಡುತ್ತಾ ದಲಿತರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲು ಆರಂಭಿಸಿದರು. ಅಸ್ಪೃಶ್ಯತೆಯನ್ನು ವಿರೋಧಿಸಿದ ದಲಿತರ ಮನೆಗಳು ಹಾಗೂ ಗುಡಿಸಲುಗಳನ್ನು ಸವರ್ಣೀಯರು ಸುಟ್ಟು ಹಾಕಿ ವಿಕೃತಿ ಮೆರೆದಿದ್ದರು. ಕಳೆದ 10 ವರ್ಷಗಳ ಹಿಂದೆ ಮರಕುಂಬಿ ಗ್ರಾಮದಲ್ಲಿ ನಡೆದಿದ್ ಗಲಾಟೆ ಪ್ರಕರಣವು ಇಡೀ ರಾಜ್ಯಕ್ಕೆ ಕಪ್ಪು ಚುಕ್ಕೆಯಂತಾಗಿತ್ತು. ಸಂವಿಧಾನ ಜಾರಿಗೆ ಬಂದು ಸುಮಾರು 60 ವರ್ಷಗಳು ಕಳೆದಿದ್ದರೂ ಅಸ್ಪೃಶ್ಯತೆ ಆಚರಣೆ ಮಾಡಲಾಗಿತ್ತು. ಗಂಗಾವತಿ ಪಟ್ಟಣದ ಸಿನಿಮಾ ಮಂದಿರದಲ್ಲಿ ಟಿಕೆಟ್ ವಿಚಾರಕ್ಕೆ ಆರಂಭವಾದ ಜಗಳ ಮರಕುಂಬಿ ಗ್ರಾಮದಲ್ಲಿ ಸಮುದಾಯಗಳ ನಡುವಿನ ಕಲಹಕ್ಕೆ ವಿಸ್ತರಣೆಗೊಂಡಿತ್ತು. ಇನ್ನು ಗ್ರಾಮದಲ್ಲಿ ದಲಿತರ ಮೇಲೆ ಅಸ್ಪೃಶ್ಯತೆ ಮಾಡುತ್ತಾ ದಲಿತರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲು ಆರಂಭಿಸಿದರು. ಅಸ್ಪೃಶ್ಯತೆಯನ್ನು ವಿರೋಧಿಸಿದ ದಲಿತರ ಮನೆಗಳು ಹಾಗೂ ಗುಡಿಸಲುಗಳನ್ನು ಸವರ್ಣೀಯರು ಸುಟ್ಟು ಹಾಕಿ ವಿಕೃತಿ ಮೆರೆದಿದ್ದರ ಈ ಪ್ರಕರಣದ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಸರ್ಕಾರದಿಂದ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗಟ್ಟುವಂತೆ ಸೂಚಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ವರದಿ ಸಲ್ಲಿಕೆ ಮಾಡಿತ್ತು. ಇದೀಗ 10 ವರ್ಷಗಳ ಅಂತರದಲ್ಲಿ ನ್ಯಾಯಾಲಯದಲ್ಲಿ ಮರಕುಂಬಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟ ಮಾಡಲಾಗಿದೆ. ಈ ಕೇಸಿನಲ್ಲಿ ಒಟ್ಟು 117 ಆರೋಪಿಗಳಿದ್ದರು. 117 ಜನರ ಪೈಕಿ 101 ಜನರಿಗೆ ಇದೀಗ ಶಿಕ್ಷೆ ಪ್ರಕಟವಾಗಿದೆ. ಇನ್ನುಳಿದ 16 ಜನರಲ್ಲಿ ಕೆಲವರು ಮೃತಪಟ್ಟಿದ್ದು, ಇನ್ನು ಕೆಲವರ ಹೆಸರುಗಳು ಪುನರಾವರ್ತನೆ ಆಗಿದ್ದವು. ಹೀಗಾಗಿ ಸದ್ಯ 101 ಜನ ಅಪರಾಧಿಗಳಿಗೆ ಇದೀಗ ಶಿಕ್ಷೆಯಾಗಿದೆ. ಅದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5,000 ರೂ. ದಂಡ ವಿಧಿಸಲಾಗಿದೆ. ಬಾಕಿ ಮೂವರು ಅಪರಾಧಿಗಳು ಎಸ್‌ಸಿ, ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ಜಾತಿನಿಂದನೆ ಕಾಯ್ದೆ ಅನ್ವಯವಾಗಿರಲಿಲ್ಲ. ಹೀಗಾಗಿ, ಕೊಲೆ ಯತ್ನ ಸೇರಿದಂತೆ ಇತರ ಸೆಕ್ಷನ್ ಅಡಿಯಲ್ಲಿ 5 ವರ್ಷಗಳ ಶಿಕ್ಷೆ ಹಾಗೂ ತಲಾ 2,000 ರೂ. ದಂಡವನ್ನು ವಿಧಿಸಲಾಗಿದೆ.
ಮರಕುಂಬಿ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಮಪ್ಪ ಭೋವಿ (44) ಅವರನ್ನು ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿಯೇ ಇರಿಸಲಾಗಿತ್ತು. ಇನ್ನು ಕೋರ್ಟ್‌ನಲ್ಲಿ ಶಿಕ್ಷೆ ಪ್ರಕಟ ಆಗುತ್ತಿದ್ದಂತೆ ಈ ವಿಚಾರ ತಿಳಿದ ರಾಮಪ್ಪನಿಗೆ ಭಾರೀ ಚಿಂತೆಗೀಡಾಗಿದ್ದು, ನಿನ್ನೆ ತಡರಾತ್ರಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಅಪರಾಧಿಯನ್ನು ಕೂಡಲೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಮಪ್ಪ ಸಾವಿಗೀಡಾಗಿದ್ದಾನೆ.
More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!