ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
“ಬಿ ಜಿ ಎಸ್ ಗುರುಪುರದ ಆಂಗ್ಲ ಮಾಧ್ಯಮ ಶಾಲೆಯ ಅವಳಿ ಸಹೋದರರು ಪವನ್ ಮತ್ತು ಪುನೀತ್ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ
ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಅವಳಿ ಸಹೋದರರಾದ ಪುನೀತ್.ಎಸ್. ಮತ್ತು ಪವನ್.ಎಸ್. ಷಟಲ್ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭೆಗಳು.
ಈ ಪ್ರತಿಭಾನ್ವಿತರು 2024 – 25 ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ರಾಮನಗರ ಜಿಲ್ಲೆ, ಕನಕಪುರದ ಟೌನ್ ಹಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲಾ ಬಾಲಕರ ಬೆಂಗಳೂರು ವಿಭಾಗ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಭಾಗವಹಿಸಿ, ಚಾಕ ಚಕ್ಕತೆಯ ಆಟದ ಪ್ರದರ್ಶನ ನೀಡಿ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು.
ರಾಮನಗರ ಜಿಲ್ಲೆಯಲ್ಲಿ ಅಕ್ಟೋಬರ್ 21ರಂದು ಕನಕಪುರ ಟೌನ್ ಹಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಷಟಲ್ ಬ್ಯಾಡ್ಮಿಂಟನ್ ಲೀಗ್ ಮಾದರಿಯ ಪಂದ್ಯಾವಳಿಯಲ್ಲಿ ಗುರುಪುರದ ಬಿ ಜಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾನ್ವಿತ ಅವಳಿ ಸಹೋದರರಾದ ಪುನೀತ್ ಎಸ್ ಮತ್ತು ಪವನ್ ಎಸ್ ಲೀಗ್ ಮಾದರಿಯ ಎಲ್ಲಾ ಪಂದ್ಯಾವಳಿಗಳಲ್ಲಿ ಕಲಬುರ್ಗಿ ವಿಭಾಗ, ಬೆಳಗಾವಿ ವಿಭಾಗ, ಮೈಸೂರು ವಿಭಾಗಗಳ ಮಧ್ಯೆ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ಹಾಗೂ ಬಿರುಸಿನ ಹೊಡೆತ ಮತ್ತು ಅಷ್ಟೇ ರಕ್ಷಣಾತ್ಮಕ ಆಟದ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಹಾಗೂ ಅತ್ಯಾಕರ್ಷಕ ಪಾರಿತೋಷಕ ಮತ್ತು ಬಂಗಾರದ ಪದಕವನ್ನು ಸಂಸ್ಥೆಯ ಮಡಿಲಿಗೆ ತಂದು ಕೊಟ್ಟಿರುತ್ತಾರೆ.
ಈ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಬಂಗಾರದ ಪದಕ ಪಡೆದು, ಮಧ್ಯಪ್ರದೇಶ ದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ “ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
17 ವರ್ಷ ವಯೋಮಿತಿಯೊಳಗಿನ ಷಟಲ್ ರ‌್ಯಾಂಕಿಂಗ್ ನಲ್ಲಿ 2ನೇ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷ.
ಈ ಪ್ರತಿಭೆಗಳು ಶಿವಮೊಗ್ಗದ ಪುರಲೆಯ ವೆಂಕಟೇಶ ನಗರದಲ್ಲಿ ವಾಸವಿರುವ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರ ರಾಗಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ಶ್ರೀ ಮುನೀರ್ ಅವರ ಗರಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಕ್ರೀಡೆಯ ಜೊತೆಗೆ ಓದಿನಲ್ಲೂ ಪ್ರತಿಭಾನ್ವಿತ ರಾಗಿರುತ್ತಾರೆ.
ಈ ಕ್ರೀಡಾ ಪ್ರತಿಭೆಗಳು ರಾಷ್ಟ ಮತ್ತು ಅಂತರ್ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು,ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಹಾಗೂ ಅಧ್ಯಾಪಕ ವೃಂದದವರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ
More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!