City Rounds News

Kannada News Website

ರಾಜಪ್ಪ ಅಂಡ್‌ ಪ್ರೇಂಡ್ಸ್‌ : ಪಡಿತರ ಅಕ್ಕಿ ದಂಧೆಕೋರರು ಹಾಗು ಮಾರಾಟಗಾರರು..?

ಬೇಲಿಯೇ ಎದ್ದು ಹೊಲ ಮೇಯುತ್ತಿದೆ: ಆಹಾರ ಇಲಾಖೆಯ ಅಧಿಕಾರಿಗಳೆ ಮಧ್ಯರ್ವತಿಗಳೇ…?

ಶಿವಮೊಗ್ಗ : ದಿ-01-06-2026 : ಪಡಿತರ ಅಂಗಡಿಗಳಲ್ಲಿ ದೊರೆಯುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ಮಾಡುತ್ತಿರುವಂತ ಬಡವರಿಗಾಗಿ, ಬಡವರಿಗೋಸ್ಕರ ಪಡಿತರ ಅಕ್ಕಿಯನ್ನು ಪ್ರತಿ ತಿಂಗಳು ಕುಟುಂಬದ ಒಬ್ಬ ಸದಸ್ಯನಿಗೆ 10 ಕೆಜಿಯಂತೆ ಪಡಿತರ ಅಕ್ಕಿಯನ್ನು ನೀಡುತ್ತಿದ್ದು. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗುವಂತಹ ಕಾರ್ಯವನ್ನು ದೇಶದ ಪ್ರತಿಯೊಬ್ಬ ಪ್ರಜೆಯು ಶ್ಲಾಘಿಸಬೇಕು.

ದೇಶದ ಪ್ರತಿಯೊಬ್ಬ ಪ್ರಜೆಯ ತೆರಿಗೆ ಹಣದಿಂದ ನೀಡುತ್ತಿರುವಂತ ಪಡಿತರ ಅಕ್ಕಿಯನ್ನು ಪಡೆಯುವಂಥ ಸಾರ್ವಜನಿಕರು. ತಮ್ಮ ಕುಟುಂಬದ ಸದಸ್ಯರಿಗೆ ನೀಡುವಂತ ಅಕ್ಕಿಯನ್ನು ತಮಗೆ ಬೇಕಾದಷ್ಟನ್ನು ಬಳಸಿಕೊಂಡು ಮಿಕ್ಕಿದ ಉಳಿದಂತಹ ಅಕ್ಕಿಯನ್ನು ಮಧ್ಯವರ್ತಿಗಳ ಮೂಲಕ. ಆಟೋ, ಬೋಲೇರೋ, ಟಾಟಾ ಎಸಿ, ಹಾಗೂ ಇನ್ನೂ ಹಲವಾರು ರೀತಿಯ ವಾಹನಗಳಲ್ಲಿ ಮನೆ ಬಾಗಿಲಿಗೆ ಬಂದು ಅಕ್ಕಿಯನ್ನು ಒಂದು ಕೆಜಿಗೆ 16 -18 ರೂಪಾಯಿಗಳಿಗೆ ಖರೀದಿ ಮಾಡಿಕೊಂಡು ದೊಡ್ಡ ದೊಡ್ಡ ಮಾರಾಟಗಾರರಿಗೆ ಇಪ್ಪತ್ತು ರೂಪಾಯಿಗಳ ಬೆಲೆಗಿಂತ ಹೆಚ್ಚಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಈ ರೀತಿಯಾದಂತಹ ಸಣ್ಣ ಸಣ್ಣ ಖರೀದಿದಾರರಿಂದ ಖರೀದಿ ಮಾಡಿದಂತಹ ಪಡಿತರ ಅಕ್ಕಿಚೀಲಗಳನ್ನು ತಮ್ಮದೇ ಆದಂತಹ ಗೋಧಾಮಗಳಲ್ಲಿ ವ್ಯವಸ್ಥಿತವಾಗಿ ಶೇಖರಣೆ ಮಾಡಿಕೊಂಡು. ಅಂತಹ ಪಡಿತರ ಅಕ್ಕಿಯನ್ನು ದುಬಾರಿ ಬೆಲೆಗೆ ದಂಧೆಕೋರರು , 40 ರಿಂದ 50 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕಲಬುರಗಿ, ಗದಗ, ಚಾಮರಾಜನಗರ, ಬಳ್ಳಾರಿ, ಹುಬ್ಬಳ್ಳಿ, ಉಡುಪಿ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಕ್ವಿಂಟಾಲ್‌ ಅಕ್ರಮ ಮಾರಾಟದ ಅಕ್ಕಿ ಜಪ್ತಿ ಮಾಡಲಾಗಿದೆ. ಕಲಬುರಗಿಯಲ್ಲಿ 515 ಕ್ವಿಂಟಾಲ್‌, ಬಳ್ಳಾರಿ 251, ಗದಗ 219 ಹಾಗೂ ಬೀದರ್‌ನಲ್ಲಿ 117 ಕ್ವಿಂಟಾಲ್‌ ಅಕ್ರಮ ಅಕ್ಕಿ ಸಿಕ್ಕಿದೆ. ಇವೆಲ್ಲ ರಹಸ್ಯವಾಗಿ ಸಂಗ್ರಹಿಸಿ, ಸಾಗಣೆ ಮಾಡುವಾಗ ಆಕಸ್ಮಿಕವಾಗಿ ಸಿಕ್ಕಿಬಿದ್ದ ಪ್ರಕರಣಗಳಷ್ಟೆ. ಗಡಿ ಜಿಲ್ಲೆಗಳಲ್ಲಿ ಈ ಅಕ್ಕಿ ನೆರೆ ರಾಜ್ಯಗಳ ಪಾಲಾಗುತ್ತಿದೆ ಎಂಬ ಮಾಹಿತಿಯೂ ಇದೆ.

ಪಡಿತರ ಅಕ್ಕಿ ಅಕ್ರಮ ದಂಧೆಗಳಿಗೆ ಅಧಿಕಾರಿಗಳ ಕ್ರಮವೇನು..?

annabhagya

ಅಹಾರ ಇಲಾಖೆಯ ಅಧಿಕಾರಿಗಳು ಸರ್ಕಾರಾದ ಆದೇಶದಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರಯೇ…? ಹಾಗಿದ್ದರೆ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಿರುದ್ದ ಕಾನೂನಿನ ನಿಯಮದಂತೆ ಕ್ರಮ ಕೈಗೋಳ್ಳುತ್ತಿಲ್ಲವೇಕೆ, ಪಡಿತರ ಅಕ್ರಮ ದಂಧೆಕೋರರ ಭಯವೇ..? ಅಥಾವ ರಾಜಕಾರಣಿಗಳಿಂದ ಒತ್ತಡವೇ..? ಪಡಿತರ ಅಕ್ರಮ ದಂಧೆಕೋರರು ನೀಡುತ್ತಿರುವ ಗರಿಗರಿ ನೋಟಿಗೆ (ಲಂಚಕ್ಕೆ) ಶರಣಾಗಿದ್ದಾರಯೆ. ಹಾಗದಾರೆ ಯಾವ ಕಾರಣಣಕ್ಕಾಗಿ ಅಹಾರ ಇಲಾಖೆ ಅಧಿಕಾರಿಗಳು, ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ದ ಸಾರ್ವಜನಿಕರಿಂದ ಹಾಗು ಮಾಧ್ಯಮಗಳಿಂದ ಹಲವು ಬಾರಿ ದೂರು ನೀಡಿದರು.ಅಕ್ರಮ ದಂಧೆಕೋರರ ವಿರುದ್ದ ಕ್ರಮ ಕೈಗೊಂಡು ಕೇಸು ದಾಖಾಲಿಸಿ ತಪ್ಪಿತಸ್ಥರನ್ನು ಕಾನೂನಿನ ಕೈಗೆ ಒಪ್ಪಿಸುತ್ತಿಲವೇಕೆ. ಅಧಿಕಾರಿಗಳು ಪಡಿತರ ಅಕ್ಕಿ ಅಕ್ರಮ ದಂಧೆಯಲ್ಲಿ ತೋಡಗಿದ್ದಾರಯೆ..?

ಸಾರ್ವಜನಿಕರ ದೂರಿಗೆ ಡೊಂಟ್‌ಕೇರೆ ಫುಡ್‌ಇನ್‌ಸ್ಪೆಕ್ಟರ್‌ ರಾಜಪ್ಪ..

ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಸಾಗಿಸುತಿದ್ದಾರೆ ಎಂದು ಶಿವಮೊಗ್ಗ ನಗರದ ಜನತೆ ಹಾಗು ಕೆಲಸ ಸಾರ್ವಜನಿಕರು ದೂರು ನೀಡಿದರು ಕ್ಯಾರೇ ಎನ್ನದ, ಫುಡ್‌ಇನ್‌ಸ್ಪೆಕ್ಟರ್‌ ರಾಜಪ್ಪ. ಇವರೆ ನೋಡಿ ಸ್ವಾಮಿ ಶಿವಮೊಗ್ಗದ ಹಲವಾರು ದೊಡ್ಡ ದೊಡ್ಡ ಅಕ್ಕಿ ಮಾರಾಟ (ಪಡಿತರ ಅಕ್ಕಿ) ದಂಧೆಕೊರರ ಜೋತೆಗೂಡಿ ಅಕ್ರಮ ದಂಧೆಯಲ್ಲಿ ಇವರ ಹೆಸರು ಕೇಳಿಬರುತ್ತಿದೆ ಇದು ಸತ್ಯವೇ..? ಹಾಗಾದರೆ ಪಡಿತರ ಅಕ್ರಮ ಅಕ್ಕಿ ದಂಧೆಯ ವಿಚಾರವಾಗಿ ಸಾರ್ಜಜನಿಕರು ಫುಡ್‌ಇನ್‌ಸ್ಪೆಕ್ಟರ್‌ ರಾಜಪ್ಪರವರಿಗೆ ದೂರವಾಣಿ ಮೂಲಕ ಹಾಗು ಖುದ್ದಾಗಿ ಬೇಟಿ ಮಾಡಿ ದೂರು ನೀಡಿದರು ಪಡಿತರ ಅಕ್ಕಿ ದಂಧೆಕೋರರ ಗೋದಾಮುಗಳ ಮೇಲೆ ಹಾಗೂ ಭಾರಿವಾಹನಗಳಲ್ಲಿ ಪಡಿತರ ಅಕ್ಕಿಗಳನ್ನು ಸಾಗಾಟ ಮಾಡುತ್ತಿರುವಂತಹ ಅಡ್ಡೆಗಳ ಮೇಲೆ ದಾಳಿಮಾಡಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೋಳ್ಳುತ್ತಿಲ್ಲವೇಕೆ ಎಂಬುದು ಸರಾವಜನಿಕರ ಪ್ರಶ್ನೆಯಾಗಿದೆ. ದಂಧಕೋರರ ಜೋತೆಗೂಡಿ ಅಕ್ರಮದಲ್ಲಿ ಪಾಲುದಾರರಾಗಿ ಲಂಚಕ್ಕಾಗಿ, ಸರ್ಕಾರದ ಕೆಲಸ ದೇವರ ಕೆಲಸ ಎಂಬ ವಾಕ್ಯವನ್ನು ಸರ್ಕಾರದ ಕೆಲಸ ಲಂಚನೀಡುವವರ ಕೆಲಸ ಎಂಬಂತೆ. ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಂತಹ ಮತ್ತು ಅಕ್ರಮ ದಂಧೆಕೋರರ ಪರವಾಗಿ, ಹಾಗೂ ಅವರು ನೀಡುತ್ಲಂತಿರುವಂತಹ ಲಂಚದ ಎಂಜಲು ಆಸೆಗಾಗಿ. ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ನೀಡುತ್ತಿರುವುದು ವ್ಯರ್ಥ. ಹಾಗಾಗಿ ಇಂತಹ ಅಧಿಕಾರಿಗಳನ್ನು ಕಾನೂನಿನ ನಿಯಮದಂತೆ ಕಠಿಣ ಶಿಕ್ಷೆ ನೀಡುವಂತೆ ಸರ್ವಾಜನಿಕರ ದೂರು.

ಅಕ್ಕಿ ಮಾರಾಟ ಮಾಡುವವರ ಪಡಿತರ ಚೀಟಿ ರದ್ದುಪಡಿಸಿ, ಖರೀದಿ ಮಾಡಿದವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಜರುಗಿಸ ಬೇಕು. ಪಡಿತರ ಅಕ್ಕಿ ನಿಡುವಂತಹ ಹಲವಾರು ರೇಷನ್‌ ಅಂಗಡಿಗಳಲ್ಲಿ ಪಡಿತರ ಅಕ್ಕಿಯನ್ನು, ಹೋಟಲ್‌, ರೋಟ್ಟಿ ಮಾರಾಟ ಮಳಿಗೆ, ಹಾಗೂ ಅನೇಕ ರೀತಿಯ ಖಾದ್ಯ ತಯಾರಿಕ ಘಟಕಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೇ. ಇಷ್ಟೇಲ್ಲ ಅಕ್ರಮವಾಗಿ ಹಲವು ಬಗೆಯ ಅಕ್ರಮ ದಾರಿಗಳಲ್ಲಿ ಕಾನೂನು ಬಾಹಿರವಾಗಿ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದರು. ಕಣ್ಣುಮುಚ್ಚಿ ಕುಳಿತಿರುವಂತಹ ಅಹಾರ ಇಲಾಖೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿ,ಕರ್ತವ್ಯ ಲೋಪವೇಸಗಿದಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕನೂನುಕ್ರಮ ಕೈಗೊಂಡು. ಶಿವಮೊಗ್ಗ ನಗರದಲ್ಲಿ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವಂತಹ ಅಕ್ರಮ ಪಡಿತರ ದಂಧೆಯನ್ನು ಮಟ್ಟಹಾಕುವಂತೆ ಸರ್ವಾಜನಿಕರ ಪರವಾಗಿ ಹಾಗು ತೆರಿಗೆದಾರರಪರವಾಗಿ ಸಿಟಿರೌಂಡ್ಸ್‌ ಪತ್ರಿಕೆ ಬಳಗದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿವಮೊಗ್ಗ ಲೋಕಾಯುಕ್ತ ಪೋಲಿಸರಿಗೆ ಮನವಿ..