
ಶಿವಮೊಗ್ಗ: 27-03-2026: ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿರುವಂತ ಭೂತಪ್ಪ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ “ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ ” ಸಂಘಟನೆ ವತಿಯಿಂದ “ಪಾನಕ ಕೋಸಂಬರಿ “ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಇಂದು ಸಾರ್ವಜನಿಕವಾಗಿ ಪ್ರಸಾದವನ್ನು ವಿತರಣೆ ಮಾಡಲಾಯಿತು.

ಶಿವಮೊಗ್ಗ ನಗರದ ಹಲವಾರು ದೇವಸ್ಥಾನಗಳಲ್ಲಿ ಹಾಗೂ ಸಂಘಟನೆ ಸಂಸ್ಥೆಗಳ ವತಿಯಿಂದ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಪಾನಕ ಕೋಸಂಬರಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.ಅದರಂತೆ ಶಿವಮೊಗ್ಗ ನಗರದ ಹಳೆ ಜೈಲು ಆವರಣದ ಮುಂಭಾಗದಲ್ಲಿರುವಂತ ಶ್ರೀ ಭೂತಪ್ಪ ದೇವಸ್ಥಾನದಲ್ಲಿ “ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ” ಸಂಘಟನೆ ವತಿಯಿಂದ ಶ್ರೀ ರಾಮನ ಆಶೀರ್ವಾದದೊಂದಿಗೆ ಸಾವಿರಾರು ಭಕ್ತರಿಗೆ ಪಾನಕ ಕೋಸಂಬರಿ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ದೇವತಾ ಕಾರ್ಯಕ್ರಮದಲ್ಲಿ “ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ ” ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಸಂಸ್ಥಾಪಕರಾದ ಅಣ್ಣಪ್ಪ. ಎಂ, ಉಪಾಧ್ಯಕ್ಷರಾದ ಗಣೇಶ್. ವಿ , ಕಾರ್ಯದರ್ಶಿಗಳಾದ ಬಸವರಾಜ ಎಂ.ಆರ್, ಸಹ ಕಾರ್ಯದರ್ಶಿಗಳಾದ ಆಂಜನೇಯ, ಖಜಾಂಚಿ ರಾಕೇಶ್ ಎಸ್ ಎನ್, ಸಂಘಟನಾ ಕಾರ್ಯದರ್ಶಿ ಪಾಲಾಕ್ಷ್. ಕೆ , ಸದಸ್ಯರುಗಳಾದ ಶ್ರೀಕಾಂತ್ , ಕಿರಣ್ ಕುಮಾರ್ , ಸುರೇಶ್ ಸಿಂಗ್, ಚನ್ನಪ್ಪ ಸ್ವಾಮಿ, ಸುರೇಶ್,ಸತೀಶ್, ನಾರಾಯಣ್ ಪಾಟೀಲ್, ಮುಂತಾದವರು ಈ ಪುಣ್ಯದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ನಕಲಿ ಔಷಧ ಅಡ್ಡೆಗಳ ಮೇಲೆ ಇ ಡಿ ದಾಳಿ!!
ಟ್ರಾಫಿಕ್ ಚಲನ್ಗಳಿಗೆ ಶೇ. 50 ರಿಯಾಯಿತಿ: ದಂಡ ಪಾವತಿಗೆ ಅವಕಾಶ!