City Rounds News

Kannada News Website

ಸಂಚಾರ ನಿಯಮ ಉಲ್ಲಂಘನೆ : ಏಪ್ರಿಲ್ ತಿಂಗಳಿನಿಂದ (ITMS) ತಂತ್ರಾಂಶದ ಮೂಲಕ ಇನ್ನಷ್ಟು ಕಟ್ಟು ನಿಟ್ಟು….!!

 

ಶಿವಮೊಗ್ಗ : ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿನ ವಾಹನ ಸಂಚಾರದ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ Intelligent Traffic Management System (ITMS) ಮೂಲಕ ಟ್ರಾಫಿಕ್ ನಿಯಮ ಉಲ್ಲಂಘನೆಗಳ ವಿರುದ್ಧ ಇ-ಚಲನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ.

2026ನೇ ಸಾಲಿನ ಏಪ್ರಿಲ್ ತಿಂಗಳಿನಿಂದ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ಸ್ಥಳದಲ್ಲಿಯೇ ತಡೆದು ದಂಡ ವಿಧಿಸಲಾಗುವುದು. ಇದರ ಜೊತೆಗೆ, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ಪೋಟೊಗಳನ್ನು ಜಿಪಿಎಸ್ ಆಧಾರಿತ ಕ್ಯಾಮೆರಾ ಮೂಲಕ ಸೆರೆಹಿಡಿದು, ಐಟಿಎಂಎಸ್ (ITMS) ತಂತ್ರಾಂಶದ ಮೂಲಕ ಇನ್ನಷ್ಟು ಕಟ್ಟುನಿಟ್ಟಾಗಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್ ಪ್ರಕರಣಗಳನ್ನು ದಾಖಲಿಸಲಾಗುವುದು ಜಿಲ್ಲಾ ಪೊಲೀಸ್ ವತಿಯಿಂದ ತಿಳಿಸಿದ್ದಾರೆ.

 

ಆದ್ದರಿಂದ, ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ತಮ್ಮ ಹಾಗೂ ಇತರರ ಸುರಕ್ಷತೆಯನ್ನು ಕಾಪಾಡುವಂತೆ ಸೂಚಿಸಲಾಗಿದೆ. ಜೊತೆಗೆ ತಮ್ಮ ವಾಹನಗಳ ಮೇಲೆ ಬಾಕಿ ಇರುವ ಇ-ಚಲನ್ ದಂಡಗಳನ್ನು ಈ ಕೆಳಗಿನ ವಿಧಾನಗಳ ಮೂಲಕ ಪಾವತಿಸಬಹುದಾಗಿದೆ.

ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ಸ್ಥಳಗಳು:-

1. ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಂಡವನ್ನು ಪಾವತಿಸಬಹುದಾಗಿದೆ.

2. ಕರ್ತವ್ಯ ನಿರತ ಶಿವಮೊಗ್ಗ ಮತ್ತು ಭದ್ರಾವತಿ ಸಂಚಾರ ಠಾಣೆಯ ಇ-ಚಲನ್ ಪಿಡಿಎ machine

ಹೊಂದಿರುವ ಎಎಸ್ಐ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಬಳಿ ದಂಡವನ್ನು

ಪಾವತಿಸಬಹುದಾಗಿದೆ.

3. ಸಾರ್ವಜನಿಕರು ತಮ್ಮ ವಾಹನಗಳ ಮೇಲೆ ಇರುವ ಇ-ಚಲನ್ಗಳನ್ನು online ಈ ಲಿಂಕ್ https://echallan.parivahan.gov.in/index/accused-challan ಮೂಲಕ ದಂಡದ ವಿವರಗಳನ್ನು ವೀಕ್ಷಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ.

 

 

 

ನಗರದ ಹಲವಾರು ವೃತ್ತಗಳಲ್ಲಿನ ಸಿಗ್ನಲ್‌ಗಳಲ್ಲಿ, ರಸ್ತೆ ದಾಟುವಂತ ಸಾರ್ವಜನಿಕರು ಸಿಗ್ನಲ್‌ಗಳಲ್ಲಿನ ಸೂಚನೆಗಳನ್ನು ಅರಿತುಕೊಂಡು. ರಸ್ತೆ ದಾಟಲು ನಿಂತಿರುವಂತ ಸ್ಥಳದಿಂದ. ಮತ್ತೊಂದಡೆ ರಸ್ತೆಗೆ ಪಾದಚಾರಿಗಳು ಸಂಚರಿಸಲು. ಸಿಗ್ನಲ್‌ಗಳಲ್ಲಿನ ಸೂಚನೆಗಳನ್ನು ಆರಿತುಕೊಂಡು . ರಸ್ತೆಯನ್ನು ದಾಟಬೇಕೆಂದು. ಜಿಲ್ಲಾ ಪೊಲೀಸ್ ವತಿಯಿಂದ ಕಟ್ಟುನಿಟ್ಟಿನ ನಿಯಮ ತರಬೇಕೆಂದು. ಇಲ್ಲವಾದಲ್ಲಿ ಅಂತವರ ವಿರುದ್ಧ ದಂಡ ವಿಧಿಸುವ ಕ್ರಮವನ್ನುಜರುಗಿಸಬೇಕು.

 

ನಗರದ ಪ್ರಮುಖ ವೃತ್ತಗಳಲ್ಲಿನ, ಸಿಗ್ನಲ್‌ಗಳಲ್ಲಿ, ರಸ್ತೆ ದಾಟುವಂತ ಸಾರ್ವಜನಿಕರಿಂಂದ, ವಾಹನ ಸವಾರರಿಗೆ ಹಾಗುತ್ತಿರುವಂತಹ ಸಮಸ್ಯೆಗಳು ದಿನೇ ದಿನೇ ಹೇಚಚಾಗುತ್ತಿದೆ. ವಾಹನ ಸವಾರರು ಸಿಗ್ನಲ್ ಬಿಟ್ಟ ನಂತರ ಸಂಚರಿಸಲು. ಪಾದಾಚಾರಿಗಳು ರಸ್ತೆಗಳ ಮಧ್ಯದಲ್ಲಿ ರಸ್ತೆ ದಾಟಲು ಬರುವುದರಿಂದ ವಾಹನ ಸವಾರರಿಗೆ ಸಮಸ್ಯೆಗಳು ಎದುರಾಗುತ್ತಿದ್ದು. ಹಾಗೂ ಈ ರೀತಿಯ ಪಾದಚಾರಿಗಳಿಂದ ಸಂಚಾರ ನಿಯಮ ಉಲ್ಲಂಘನೆಗಳಾಗುವುದು, ಹಾಗೂ ರಸ್ತೆ ಅಪಘಾತಗಳಾಗುವುದು, ಹಲವಾರು ದುರ್ಘಟನೆಗಳು ನಡೆದಿದೆ. ಆದ್ದರಿಂದ ರಸ್ತೆ ಸಂಚಾರಿ ನಿಯಮಗಳನ್ನು ಕೇವಲ ವಾಹನ ಸವರಾರು ಅಲ್ಲದೆ ರಸ್ತೆಯಲ್ಲಿ ಸಂಚರಿಸುವಂತಹ ಪಾದಚಾರಿಗಳು ಅನುಸರಿಸಬೇಕೆಂಬನಿಯಮವನ್ನು ಜಿಲ್ಲಾ ಪೊಲೀಸ್ ವತಿಯಿಂದ ಸೂಚನೆ ನೀಡಬೇಕೆಂದು.”ಸಿಟಿ ರೌಂಡ್ಸ್‌” ಪತ್ರಿಕೆ ಬಳಗದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ.