City Rounds News

Kannada News Website

ಶಿವಮೊಗ್ಗದಲ್ಲಿ ತಾಂಡವ ವಾಡುತ್ತಿದೆ ಅಕ್ರಮ ದಂಧೆಕೋರರ ದಂಡು….!!

ಸಿಟಿರೌಂಡ್ಸ್‌ ನ್ಯೂಸ್‌:

ಕಾನೂನಿನ ಭಯವಿಲ್ಲ , ಅಧಿಕಾರಿಗಳ ಕ್ರಮವಿಲ್ಲ , ಅಕ್ರಮ ದಂಧೆ ಕೋರರಿಗೆ ಯಾವುದೇ ಅಡೆತಡೆ ಇಲ್ಲ ….

ಶಿವಮೊಗ್ಗ ನಗರದಲ್ಲಿ ಅಕ್ರಮ ದಂಧೆ ಕೋರರ ಹಾವಳಿ ಹೆಚ್ಚಾಗಿದ್ದು ಕಾನೂನು ನಿಯಮಗಳನ್ನು ಮೀರಿ ಹಲವಾರು ದಂಧೆಗಳು ನಿರಂತರವಾಗಿ ಹೆಗ್ಗಿಲ್ಲದೆ ಹಗಲು ರಾತ್ರಿ ಎನ್ನದೆ ನಿರಂತರವಾಗಿ ಲೂಟಿ ಮಾಡುತ್ತಿರುವುದು ಕಂಡುಬಂದಿದ್ದ. ಇಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಕೈಕಟ್ಟಿ ಕೂತಿರುವುದು ಎಷ್ಟರಮಟ್ಟಿಗೆ ಸರಿ ಎನ್ನುತ್ತಿದ್ದಾರೆ ಶಿವಮೊಗ್ಗ ನಗರದ ಸಾರ್ವಜನಿಕರು..

ಅಕ್ರಮ ಮರಳು ದಂದೆ, ಕೆರೆ ಮಣ್ಣ ಲೂಟಿ, ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ,ನಗರದ ಹೊರ ಭಾಗಗಳಲ್ಲಿ ಜೂಜಾಟ, ಮಾದಕ ವಸ್ತು ಮಾರಾಟ, ಹೀಗೆ ಇನ್ನು ಹಲವಾರು ರೀತಿಯ ಅಕ್ರಮ ದಂಧೆಗಳು ನಡೆಯುತ್ತಿವೆ.

ಅಕ್ರಮ ದಂಧೆಗಳ ವಿಚಾರವಾಗಿ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಸಾರ್ವಜನಿಕರು ಹಾಗೂ ಸಂಘಟನೆಗಳು ದೂರು ನೀಡಿದರೆ ಅಧಿಕಾರಿಗಳು ಕ್ರಮ ಕೈಗೋಳ್ಳುತ್ತಿಲ್ಲವೇಕೆ..? ಎಂಬುದು ಅನೇಕರ ಪ್ರಶ್ನೇಯಾಗಿದೆ.

ಶಿವಮೊಗ್ಗ ಅಧಿಕಾರಿಗಳಿಗೆ ಅಕ್ರಮ ದಂಧೆಗಳ ವಿಚಾರವಾಗಿ ದೂರು ನೀಡಲು ಕಚೇರಿಗೆ ಬಂದಂತಹ ಸಾರ್ವಜನಿಕ ಹಾಗೂ ಇನ್ನಿತರ ಸಂಘಟನೆಗಳ ಹಾಗೂ ಪತ್ರಕರ್ತರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ . ಈ ರೀತಿಯ ಅಧಿಕಾರಿಗಳ ನಿರ್ಲಕ್ಷತನಕ್ಕೆ ಕಾರಣವೇನೆಂಬುದು ತಿಳಿಯದಂತಾಗಿದೆ.

ಶಿವಮೊಗ್ಗ ಜಿಲ್ಲೆಯ ಹಲವು ತಾಲ್ಲೂಕು ಹಾಗೂ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ,ಕಲ್ಲು ಗಣಿಗಾರಿಕೆ , ಕೆರೆ ಮಣ್ಣು ಮಾರಾಟ , ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ, ಹೀಗೆ ಇನ್ನು ಅನೇಕ ರೀತಿಯ ಅಕ್ರಮ ದಂಧೆಗಳು ನಡೆಯುತ್ತಿದ್ದರು ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿಗಳಿಗೆ ಅಕ್ರಮ ದಂಧೆ ಕೋರರಿಂದ ಸಿಗುತ್ತಿರುವ ಹಣದ ಪೆಟ್ಟಿಗೆಗಳು ಎಷ್ಟರಮಟ್ಟಿಗೆ ಕೆಲಸ ಮಾಡುತ್ತಿದೆ ಎಂದರೆ, ಹಗಲು ರಾತ್ರಿ ಎನ್ನದೆ ಅಕ್ರಮ ದಂಧೆ ಕೋರರ ಕಳ್ಳ ಸಾಗಾಣಿಕೆಗಳಿಗೆ, ಕೆಲ ಪೊಲೀಸ್ ಇಲಾಖೆಯ ಅಧಿಕಾರಿಗಳು, ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲ ಅಧಿಕಾರಿಗಳು ,ಹಾಗೂ ತಾಲ್ಲೂಕು ಕಚೇರಿಯ ಕೆಲ ಅಧಿಕಾರಿಗಳು ,ಜಿಲ್ಲಾಧಿಕಾರಿ ಕಚೇರಿಯ ಕೆಲ ಅಧಿಕಾರಿಗಳು, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕಚೇರಿಯ ಕೆಲ ಅಧಿಕಾರಿಗಳು. ಅಕ್ರಮ ದಂಧೆ ಕೋರರ ಜೊತೆ ಶಾಮಿಲ್ ಆಗಿರಬಹುದೆ..? ಇದಕ್ಕೆ ಕಾರಣ ಹಲವಾರು ಸಂಘಟನೆಗಳು ಹಾಗೂ ಪತ್ರಕರ್ತರು, ಸಾರ್ವಜನಿಕರು, ನೀಡಿದ ದೂರುಗಳನ್ನು ನಿರ್ಲಕ್ಷಿಸಿ. ಅಕ್ರಮ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರುವುದೇ ಸಾಕ್ಷಿಯಾಗಿದೆ ಎನ್ನುತ್ತಾರೆ. ಅಕ್ರಮ ದಂಧೆ ಕೋರರ ವಿರುದ್ಧ ದೂರು ನೀಡಲು ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗೆ ಅಲೆದಾಡಿ ನ್ಯಾಯಸಿಗದೇ ಕಂಗಾಲಾಗಿರುವಂತವರು.

ಸಾರ್ವಜನಿಕರ ತೆರಿಗೆ ಹಣದಿಂದ, ಸರ್ಕಾರಿ ಅಧಿಕಾರಿಗಳಿಗೆ ನೀಡುತ್ತಿರುವಂತ ಸಂಬಳ, ಹಾಗೂ ಸೌಲಭ್ಯಗಳನ್ನು ಪಡೆದುಕೊಂಡಂತಹ ಕೆಲ ಅಧಿಕಾರಿಗಳು ಹಾಯಾಗಿ ತಮ್ಮ ಕಚೇರಿಗಳಲ್ಲಿ ಎಸಿ ಆನ್ ಮಾಡಿಕೊಂಡು. ಅಕ್ರಮ ದಂಧೆಕೋರರಿಂದ ತಿಂಗಳಿಗೆ ಬರುತ್ತಿರುವ ಲಂಚದ ಹಣವನ್ನು ತೆಗೆದುಕೊಂಡು, ಅಕ್ರಮ ದಂಧೆಕೋರರಿಗೆ ಶ್ರೀ ರಕ್ಷೆಯಾಗಿ, ಅಕ್ರಮ ದಂಧೆ ಕೋರರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿರುವಂತ ಕೆಲ ಅಧಿಕಾರಿಗಳ ಹಾಗೂ ಕೆಲ ಸಿಬ್ಬಂದಿಗಳ ವಿರುದ್ಧ . ಜಿಲ್ಲಾಡಳಿತ ಸೂಕ್ತ ಕ್ರಮ ಕೈ ಕೈಗೊಳ್ಳುವಂತೆ,  ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರೇ ಸರ್ಕಾರಿ ಅಧಿಕಾರಿಗಳಿಗೆ ಸಾರ್ವಜನಿಕಪರವಾದಂತಹ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕೃತಿಯ ಒಡಲನ್ನು ಕೊರೆದು ಲೂಟಿ ಮಾಡುತ್ತಿರುವ ಅಕ್ರಮ ದಂಧೆ ಕೋರರನ್ನು ಸದೆಬಡೆಯುವಂತೆ , ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಬೇಕೆಂದು ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರ ಪರವಾಗಿ (ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ ) ಸಂಘಟನೆ ವತಿಯಿಂದ ದೂರು …

ಸಿಟಿರೌಂಡ್ಸ್‌ ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ,ಶಿವಮೊಗ್ಗದಲ್ಲಿ ನಡೆಯುತ್ತಿರುವಂತಹ ಅಕ್ರಮ ದಂಧೆಕೋರರ ಹಾಗೂ ಕೆಲ ಸರ್ಕಾರಿ ಅಧಿಕಾರಿಗಳ ಹೆಸರು ಮತ್ತು ನಡೆಯುತ್ತಿರುವಂತಹ ಅಕ್ರಮ ದಂಧೆಗಳ ಪೂರ್ಣ ವಿವರ….