“ಎನ್ಐಎ ಮನವಿಗೆ ಅಸ್ತು ಎಂದ ಅಂಜು ಬಜಾಜ್ ಚಂದನಾ”
ಶಿವಮೊಗ್ಗ: 19-ನವಂಬರ್: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್‌ಬಾಂಬ್ ಸ್ಪೋಟಕದ ಹಿನ್ನಲೆ ಹಾಗೂ ಇದರ ಮುಖ್ಯ ಉದೇಶ, ಭಾರತೀಯ ನಾಗರಿಕರ ಮನಸ್ಸಿನಲ್ಲಿ ಭಯ ಹುಟ್ಟಿಸುವ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಈ ಸ್ಫೋಟ ನಡೆಸಲಾಗಿದೆ ಎಂದು ಎನ್ಐಎ ನ್ಯಾಯಲಯಕ್ಕೆ ತಿಳಿಸಿದೆ. ಬಾಂಬ್ ಸ್ಪೋಟ ಪ್ರಕರಣದಲ್ಲಿ ಸ್ಫೋಟದ ಮುಖ್ಯ ಆರೋಪಿಗಳಾದ 1.ಆರೋಪಿ ಅಮೀರ್ ರಶೀದ್ ಅಲಿ ಮತ್ತು ಜಾಸಿರ್ ಬಿಲಾಲ್ ವಾನಿ ಎಂಬ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿತು. ಎನ್‌ಐಎ ಮನವಿಯನ್ನು ದೆಹಲಿ ಸೆಷನ್ಸ್ ನ್ಯಾಯಾಧೀಶೆ ಅಂಜು ಬಜಾಜ್ ಚಂದನಾ ಅವರು ಆರೋಪಿಗಳ 10 ದಿನಗಳ ಕಸ್ಟಡಿ ವಿಚಾರಣೆಗೆ ಕೋರಿ ಎನ್‌ಐಎ ಸಲ್ಲಿಸಿದ್ದ ಅರ್ಜಿಗೆ ಅನುಮತಿಗೆ ಅಸ್ತು.
ಯಾರು?..ಜಾಸಿರ್ ಬಿಲಾಲ್ ವಾನಿ
ದೆಹಲಿಯ ಕೆಂಪುಕೋಟೆ ಬಳಿ ನಡೆದ ಬಾಂಬ್ ಸ್ಫೋಟಕ್ಕೂ ಮುನ್ನ ಜಾಸಿರ್ ಬಿಲಾಲ್ ವಾನಿ ಡ್ರೋನ್‌ಗಳನ್ನು ಮಾರ್ಪಡಿಸುವ ಮತ್ತು ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದ ಹಾಗು ಈ ಮೂಲಕ ಭಯೋತ್ಪಾದಕ ದಾಳಿಗಳನ್ನು ನಡೆಸಲು ತಾಂತ್ರಿಕ ಬೆಂಬಲ ನೀಡುತ್ತಿದ್ದ ಎಂದು ಎನ್‌ಐಎ ನ್ಯಾಯಲಯದ ಮುಂದೆ ತಿಳಿಸಿದೆ. ದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಸಿದ್ದ ಎಂಬ ಆರೋಪದ ಮೇಲೆ ಅನಂತ್‌ನಾಗ್‌ನ ಖಾಜಿಗುಂಡ್ ನಿವಾಸಿ ಜಾಸಿರ್ ಬಿಲಾಲ್ ವಾನಿಯನ್ನು ಸೋಮವಾರ ಶ್ರೀನಗರದಲ್ಲಿ ಬಂಧಿಸಲಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. “ಭಯೋತ್ಪಾದಕ ಹತ್ಯಾಕಾಂಡ”ವನ್ನು ಯೋಜಿಸಲು ಉಮರ್ ಉನ್ ನಬಿಯೊಂದಿಗೆ ವಾನಿ ನಿಕಟವಾಗಿ ಕೆಲಸ ಮಾಡಿದ್ದಾನೆ ಎಂದು ಎನ್ಐಎ ನ್ಯಾಯಲಯಕ್ಕೆ ತಿಳಿಸಿದೆ.
ಬಾಂಬ್ ಸ್ಪೋಟದಿಂದ 15 ಜನ ಅಮಾಯಕರ ಸಾವಿಗೆ ಮತ್ತು ಹಲವಾರು ಜನರ ಗಾಯಗೊಂಡ ಮಾರಕ ಕಾರ್ ಬಾಂಬ್ ಸ್ಫೋಟಕದ ಹಿನ್ನಲೆಯ ಆರೋಪಿಗಳನ್ನು ತನಿಖೆ ನಡೆಸಲು ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ದೆಹಲಿಯ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆಯನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಲಾಗಿತ್ತು. ಕಾರ್ ಬಾಂಬ್ ಸ್ಫೋಟಕದ ಹಿನ್ನಲೆಯ ಉದ್ದೆಶ ಹಾಗು ಯಾವ ಉಗ್ರಗಾಮಿ ಸಂಘಟನೆಯ ಕೈವಾಡವಿದೆ ಎಂಬುದರ ಹೆಚ್ಚಿನ ವಿವರ ಮುಂದಿನ ತನಿಖೆಯಿಂದ ತೀಳಿಯಬೇಕಾಗಿದೆ.


More Stories
ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸೋರಿಕೆ… ಅವ್ಯವಸ್ಥೆಯ ನೇರ ಹೊಣೆಗಾರ ಕೇಂದ್ರ ಸರ್ಕಾರ..!!
ಬೇರೆಯವರ ಪರ ಧ್ವನಿ ಎತ್ತುವ ಪತ್ರಕರ್ತರೇ, ನಿಮ್ಮ ಮತ್ತು ನಿಮ್ಮ ಕುಟುಂಬದ ಧ್ವನಿಯಾಗುವವರು ಯಾರು?
ಕೂರಲು ಸ್ಥಳವಿಲ್ಲ, ಊಟ ಮಾಡುವುದು ಪೇಪರ್ ಮೇಲೆ: ಸರ್ಕಾರಿ ಶಾಲೆ ಶಿಕ್ಷಕರ ಅಮಾನವೀಯ ವರ್ತನೆ..!