City Rounds News

Kannada News Website

ರಸ್ತೆ ಪಕ್ಕದ ಹಳ್ಳಕ್ಕೆ ನುಗ್ಗಿದ ಕೆ ಎಸ್ ಆರ್ ಟಿ ಸಿ ಬಸ್‌….!

 

ದಿನಾಂಕ:17-11-2025

 

ಶಿವಮೊಗ್ಗ: ಇತೀಚಿನ ದಿನಗಳಲ್ಲಿ   ಕರ್ನಾಟ ಕ ಸರ್ಕಾರಿ ಬಸ್‌ಗಳ ಅಪಘಾತಗಳು ದಿನೇ ದಿನೇ ಹೇಚ್ಚುತ್ತಿದೆ. ರಾಜ್ಯ ಸರ್ಕಾರ( ಶಕ್ತಿ ಯೋಜನೆ )ಹೆಸರಿನಲ್ಲಿ ರಾಜ್ಯದ ಮಹಿಳೆಯರಿಗೆ  ಕರ್ನಾಟದ ಎಲ್ಲಾ ಜಿಲ್ಲೆಗಳಿಗು ಉಚಿತವಾಗಿ  ಪ್ರಯಾಣ ಮಾಡಲು  ವ್ಯವಸ್ಥೆಯನ್ನು  ಕಲ್ಪಿಸಿದೆ. ಈ ರೀತಿಯ ಉಚಿತ ಪ್ರಯಾಣದಿಂದ  ರಾಜ್ಯ ಸರ್ಕಾರದ ಬೋಕ್ಕಸಕ್ಕೆ ನಷ್ಟಉಂಟಾಗುತ್ತಿದೆ ಎಂಬ ಕೂಗು ವಿರೋದ ಪಕ್ಷದವರಿಂದ ಹಾಹೂ ಕೇಲ ಬುದ್ದಿ ಜೀವಿಗಳಿಂದ  ಉಚಿತ ಪ್ರಯಾಣದ ವಿರುದ್ದ ಅಸಮಾದಾನ ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು ಕೆ ಆರ್‌ ಟಿಸಿ ಬಸ್‌ ಚಾಲಕರಿಗೂ ಹಾಗೂ ಕಂಡ್ ಕ್ಟರ್ಗಳಿಗೂ  ತಿಂಗಳ ಸಂಬಳ  ಸರಿಯಾದಸ ಸಮಯಕ್ಕೆ ಸಂದಾಯವಾಗೂತ್ತಿಲ್ಲವೆಂಬ  ದೂರುಗಳು  ಕಂಡುಬಂದಿದ್ದರು ಹಾಗೂ ಕೇಳಿ ಬಂದಿದ್ದವು. ಈ ವಿಚವಾರವಾಗಿ ಸರ್ಕಾರಿ ಬಸ್‌ ಚಾಲಕರು  ಸರ್ಕಾರದ ವಿರುದ್ದ  ಮುನಿಸಿಕೊಂಡು,  ಮುಷ್ಕರ ಹಾಗು ಪ್ರತಿಭಟನೆ ಎಂದು ಹಅರಾಡಿ ಕೂಗಾಡಿ ಕೊನೇಗೆ ಎಲ್ಲಾ ಕೈಬಿಟ್ಟು  ತಮ್ಮ ಕರ್ತವ್ಯವನ್ನು ಮಾಡುವಲ್ಲಿ ಸಫಲರಾದರು ಆದರೆ  ಸರಿಯಾದ ರೀತಿಯಲ್ಲಿ  ಬಸ್ ಗಳ ನಿರ್ವಾಹಣೆ ಮಾಡದ ಕಾರಣ ಸರ್ಕಾರಿ ಬಸ್‌ಗಳು ಅಪಘಾತಕ್ಕಿಡಾಗುತ್ತಿವೇ ಎಂಬುದು  ಹಲವರ ವಾದವಾಗಿದೆ.

 

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪೆಟ್ಲೂರು ಕ್ರಾಸ್ ಬಳಿ KSRTC ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ನುಗ್ಗಿದ್ದರಿಂದ ಅಪಘಾತ ಸಂಭವಿಸಿದೆ. ಈ ಬಸ್ ಸವದತ್ತಿಯಿಂದ ಮಹಾರಾಷ್ಟ್ರದ ಮಿರಜ್ ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.  ಅಪಘಾತದಲ್ಲಿ ಬಸ್‌ನಲ್ಲಿದ್ದ ವಯೋವೃದ್ಧರು ಮತ್ತು ಪುಟ್ಟ ಮಕ್ಕಳಿಗೆ ಗಾಯಗಳಾಗಿದ್ದು, ಪ್ರಯಾಣಿಕರು ಅಪಘಾತ ಭಯಭೀತರಾಗಿ ಕಿಟಕಿಗಳಿಂದ ಹೊರಬಂದಿದ್ದಾರೆ.    ಪ್ರಸ್ತುತ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಪ್ರಾಣಾಪಾಯದ ಸುದ್ದಿಗಳಿಲ್ಲ.

ಈ ಘಟನೆ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ, ಪ್ರಯೋಜನಕಾರಿ ತಪಾಸಣೆ, ಮತ್ತು ಅಗತ್ಯವಾದ ಪ್ರಥಮ ಚಿಕಿತ್ಸೆ ನೀಡುವ  ಮೂಲಕ  ಹೆಚ್ಚಿನ  ಚಿಕಿತ್ಸೆಯನ್ನು ನೀಡಲಾಗುತಿದೆ.​ಸರ್ಕಾರ ಹಾಗೂ ಸರ್ಕಾರಿ ಬಸ್‌ ಚಾಲಕರ  ನಡುವಿನ ಭಿನ್ನಬಿಪ್ರಾಯದಿಂದ ಸರ್ಕಾರಿ ಬಸ್ಗಳ ಗುಣ ಮಟ್ಟವನ್ನು ಸರಿಯಾದ ರೀತಿಯಲ್ಲಿ ನಿರ್ವಾಹಣೆ ಮಾಡದೆ , ಸರ್ವಾಜನಿಕರ ಪ್ರಾಣದ ಜೋತೆ ಆಟವಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ರಾಜ್ಯ ಸರ್ಕಾರವೆ ತೀಳಿಸ  ಬೆಕೇಂಬುದು ಕೇಲವರ ವಾದವಾಗಿದೆ.