City Rounds News

Kannada News Website

ಒಂದು ಬೆಂಕಿಯ ಕಿಡಿ 20ಜನರ ಸಜೀವ ದಹನ: ಕರ್ನೂಲ್ ಬಸ್‌ ದುರಂತ..!

ಹೈದರಾಬಾದ್‌: ಅಕ್ಟೋಬರ್-24 ‌ಶುಕ್ರವಾರ:  ಇಂದು ಕರ್ನೂಲ್ ನಲ್ಲಿ ನಡೆದ ಭೀಕರ ಬಸ್ ಬೆಂಕಿ ದುರಂತದಲ್ಲಿ ಕನಿಷ್ಠ 20 ಮಂದಿ ಸಾವು ಸಂಭವಿಸಿದೆ ಈ ದುರಂತ   ಅಕ್ಟೋಬರ್ 24 ರಂದು ಬೆಳಗಿನ ಜಾವ 3ರ ವೇಳೆಗೆ ನಡೆದಿದೆ.

ಕರ್ನೂಲ್‌ನಿಂದ 20 ಕಿಲೋಮೀಟರ್‌ ದೂರದಲ್ಲಿರುವ ಉಲ್ಲಿಂದಕೊಂಡ  ಕ್ರಾಸ್‌ಬಳಿ ಹೈದರಾಬಾದ್‌ ನಿಂದ ಕಡೆಗೆ ಬೆಂಗಳೂರು ಹೊರಟ್ಟಿದ್ದ  ಕಾವೇರಿ ಟ್ರಾವೆಲ್ಸ್ ಬಸ್‌ನ್ನು ರಸ್ತೆಯಲ್ಲಿ  ಚಲಿಸುತ್ತಿದಂತಹ  ಒಂದು ಬೈಕ್‌ ಢಿಕ್ಕಿ ಹೊಡೆದ ಪರಿಣಾಮ, ಬೈಕ್‌ ಹಾಗೂ ಬಸ್‌ ನಡುವಿನ ಘರ್ಷಣೆಯಿಂದ ಬಸ್‌ ನ   ಇಂಧನದ  ಟ್ಯಾಂಕ್‌ ಹೊಡೆದಾಗ ಬೆಂಕಿಯ ಕಿಡಿಯಿಂದ   ಬೆಂಕಿ ಹತ್ತಿಕೊಂಡಿತು. ಈ ಬೆಂಕಿಯ ಕೀರುನಾಲಿಗೆ ನೋಡನೋಡುತ್ತ  ಬಸ್ ಸಂಪೂರ್ಣ ಬೆಂಕಿಯಿಂದ ಧಗ ಧಗನೆ ಉರಿದಿದೆ. ಈಘಟನೆ ಸಂಭವಿಸಿದ ಸಮಯ ಬೆಳಗಿನ ಜಾವ 3 ರವೇಳೆ ಆದುದರಿಂದ ಬಸ್ ನಲ್ಲಿದ್ದವರಲ್ಲಿ ಹಲವರು ಗಾಢ ನಿದ್ರೆಯಲ್ಲಿ ಮಲಗಿದ್ದ ಪಾರಿಣಾಮ  ಈ ಘಟನೆಯಿಂದ ಎಚ್ಚೆತ್ತುಕೊಳ್ಳುವುದರಲ್ಲಿಯೆ ಬೆಂಕಿಗೆ ಆವುತಿಯಾಗಿದಗ್ದಾರೆ ಎಂದು ತಿಳಿದು ಬಂದಿದೆ.  ಈ ದುರಂತದಲ್ಲಿ ಸುಮಾರು 41 ಮಂದಿ ಪ್ರಯಾಣಿಕರಿದ್ದರು. 20 ಜನರು ಮೃತಪಟ್ಟಿದ್ದು, ಕೆಲವರು  ಗಾಯಗೊಂಡಿದ್ದಾರೆ.. ಸಾವಿಗೀಡಾದವರನ್ನು ಡಿಎನ್ಎ ಪರೀಕ್ಷೆಯಿಂದ ಗುರುತಿಸುವ ಕೆಲಸ ನಡೆಯುತ್ತಿದೆ  ಬಸ್‌ ನಲ್ಲಿ ಇದ್ದ ಕೆಲ ಪ್ರಯಾಣಿಕರು ಬಸ್ ನಿಂದ ಹೊರಗಡೆ ಬರಲು ಸಾಧ್ಯವಾದರೂ, ಅನೇಕರು ಬೆಂಕಿಯ ಜ್ವಾಲೆಗೆ ಸಿಕ್ಕಿ ಆಸ್ಪತ್ರೆಯಲ್ಲಿ ಮರಣ ಹೋದ್ದಿದ್ದಾರೆ ಎಂದು ತಿಳಿದು ಬಂದಿದೆ.

” ರೀಪೆರಿಯಾಗಿದ್ದ  ಬಸ್ ನ ಎಮರ್ಜೆನ್ಸಿ ಬಾಗಿಲುಗಳು”

ಕೆಲ ಪ್ರಯಾಣಿಕರು  ಎಮರ್ಜೆನ್ಸಿ ಬಾಗಿಲುಗಳಿಂದ ಹೊರಬಾರಲು ಪ್ರಯತ್ನಪಟ್ಟಿದ್ದಾರೆ, ಆದರೆ  ಬಸ್ ನ ಎಮರ್ಜೆನ್ಸಿ ಬಾಗಿಲುಗಳು  ಹಾಳಗಿದ್ದರಿಂದ ಹಲವರು ಪ್ರಾಣ ಬೆಂಕಿಗೆ ಆಹುತಿಯಾಗಿದೆ,ಇನ್ನು ಕೆಲವರು  ಕಿಟಕಿಗಳ ಗಾಜನ್ನು ಒಡೆದು ಪಾರಗಲು  ಪ್ರಯತ್ನಿಸಿದ್ಕೆದಾರೆ, ಬಸ್ ನ ಚಾಲಕ ಬೆಂಕಿಯ  ಅವಘಡ ನಡೆದ   ಕ್ಷಣದಲ್ಲಿ ಬಸ್ಸಿನ ಪ್ರಯಾಣಿಕರಿಗೆ ಕೂಗಿ ಎಚ್ಚರಿಕೆ ನಿಡಿದ್ದಾರೆ. ಆದರೆ ಗಾಢ ನಿದರೆಯಲ್ಲಿದ್ದ  ಕಾರಣ ಹೆಚ್ಚು ಜನರು ಸಜೀವ ದಹನಕ್ಕೆ ಒಳಗಾಗಿದ್ದಾರೆ  ಎಂದು ತಿಳಿದುಬಂದಿದೆ.ಈ ಘಟನೆ ನಡೆದ ವೇಳೆ  ಸ್ಥಳೀಯರು ಕೂಡ ಸಹಾಯಕ್ಕೆ ಬಂದಿದ್ದು, ಕೆಲವು ಪ್ರಯಾಣಿಕರನ್ನು ರಕ್ಷಿಸಿದ ಘಟನೆಗಳು ನಡೆದಿಎಂದು ತೀಳಿದು ಬಂದಿದೆ.

 

                                       “ಮರಣೋತ್ತರ ವರದಿ”

ಕರ್ಣೂಲ್ ಬಸ್ ಬೆಂಕಿ ದುರಂತದ ಮರಣೋತ್ತರ ವರದಿ ಪ್ರಕಾರ, ಮೃತಪಟ್ಟವರ ಸಾವಿನ ಪ್ರಮುಖ ಕಾರಣಗಳು “ಹೆಮ್ಮಾರಿಕ್ ಶಾಕ್” (Hemorrhagic shock) ಮತ್ತು “ಆಸ್ಫಿಕ್ಷಿಯಾ” (Asphyxia) ಅಂದರೆ ಉಸಿರುಗಟ್ಟಿನಿಂದ ಉಂಟಾದ ಸಾವು ಎಂದು ಪ್ರಾಥಮಿಕ ವೈದ್ಯಕೀಯ ವರದಿಗಳು ಸೂಚಿಸುತ್ತವೆ. ಬೆಂಕಿಯಿಂದ ಸುಟ್ಟ ಗಾಯಗಳು ಹಾಗೂ ಉಸಿರಾಟದ ಮಾರ್ಗದಲ್ಲಿ ಕಾರ್ಬನ್ ಮತ್ತು ಹೊಗೆ ಸೇರಿಕೆಯಿಂದ ಆಮ್ಲಜನಕದ ಪೂರೈಕೆ ರೋಮಾಂಚಕವಾಗಿ ಕುಂದಿದೆ. ದೇಹದ ತಾಪಮಾನ ತೀವ್ರ ಏರಿಕೆಯಿಂದ ಮತ್ತು ಚರ್ಮದ ವ್ಯಾಪಕ ಸುಡುವಿಕೆಯಿಂದ ಜೀವಸೂತ್ರಗಳು ಕ್ಷಣಾರ್ಧದಲ್ಲಿ ನಿಂತಿವೆ. ಕೆಲವು ಮೃತದೇಹಗಳು ಸಂಪೂರ್ಣ ಸುಟ್ಟಿರುವುದರಿಂದ ಗುರುತು ಪತ್ತೆ ಮಾಡಲು ಡಿಎನ್ಎ ಪರೀಕ್ಷೆಯ ನೆರವನ್ನು ಪಡೆಯಲಾಗುತ್ತಿದೆ.ಸ್ಥಳೀಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ, “ಮೃತದೇಹಗಳಲ್ಲಿ ಬಹುತೇಕವು 90% ಕ್ಕೂ ಹೆಚ್ಚು ಭಾಗ ಸುಟ್ಟಿದ್ದು, ಬೆಂಕಿಯಿಂದ ಉಂಟಾದ ಶಾಕ್ ಹಾಗೂ ಉಸಿರಾಟದ ಅಸಾಧ್ಯತೆಯೇ ನೇರ ಸಾವಿನ ಕಾರಣ” ಎಂದು.ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ.