ಶಿವಮೊಗ್ಗ : ಅಕ್ಟೋಬರ್ 24 : ಜಿಲ್ಲೆಯ ರಾಷ್ಟ್ರೀಯ ಬ್ಯಾಂಕುಗಳಲ್ಲಿ, ವಿಮಾಕಂಪನಿಗಳಲ್ಲಿ ಹಾಗೂ
ಮ್ಯೂಚ್ಯುಲ್‌ಫಂಡ್‌ಗಳಲ್ಲಿ ತೊಡಗಿಸಿದ ಹಣದ ಮೂಲ ವ್ಯಕ್ತಿಗಳಿದ್ದಲ್ಲಿ ಅಥವಾ ಅವರ ವಾರಸುದಾರರಿದ್ದಲ್ಲಿ ಸೂಕ್ತ ದಖಲೆಗಳನ್ನು ಸಲ್ಲಿಸಿ, ಹಣ
ಪಡೆದುಕೊಳ್ಳಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದೀರ್ಘಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು,
ವಿಮಾಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನು ಬದ್ದವಾರಸುದಾರರಿಗೆ ಹಸ್ತಾಂತರಿಸುವ ಸಂಬಂಧ
ಏರ್ಪಡಿಸಲಾಗಿದ್ದ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವಿಶೇಷ ಆಂದೋಲನವು ಅಕ್ಟೋಬರ್‌ಯಿಂದ ಆರಂಭಗೊಂಡು ಡಿಸೆಂಬರ್ ಅಂತ್ಯದವರೆಗೆ ನಡೆಯಲಿದೆ. ಜಿಲ್ಲೆಯ
ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಒಟ್ಟು 3.66ಲಕ್ಷ ಖಾತೆಗಳಿದ್ದು ಅವುಗಳಲ್ಲಿನ ಆಯ್ದ (79 ಕೋಟಿ,ವಿಮಾ ಕಂಪನಿಗಳಲ್ಲಿ 1043ಖಾತೆಗಳ ಪೈಕಿ
1.82ಕೋಟಿ) ಮೊತ್ತ ವಾರಸುದಾರರಿಲ್ಲದೆ ಉಳಿದು ಕೊಂಡಿದದೆ. ಜಿಲ್ಲೆಯ ಆಯ್ದ( 08ರಾಷ್ಟ್ರೀಯ ಬ್ಯಾಂಕುಗಳಲ್ಲಿ ತಲಾ 1ಕೋಟಿಗೂ ಹೆಚ್ಚಿನ ಮೊತ್ತ)
ವಾರಸು ದಾರರಿಲ್ಲದೆ ಉಳಿದು ಕೊಂಡಿರುವುದನ್ನು ಗುರುತಿಸಲಾಗಿದೆ. ಶೇ .20ರಷ್ಟು ವಾರಸುದಾರರಿಗೆ ಸದರಿ ಮೊತ್ತವನ್ನು ತಲುಪಿಸಲು ಗುರಿ
ನೀಡಲಾಗಿದೆ ಎಂದ ಅವರು , 34ಮ್ಯೂಚ್ಯುಲ್‌ಫಂಡ್ ತೊಡಗಿಸಲಾಗಿದ್ದ ಹಣವನ್ನು ಸಂಬಂಧಿಸಿದ ವಾರಸುದಾರರಿಗೆ ತಲುಪಿಸಲಾಗಿದೆ
ಎಂದು ಅವರು ತಿಳಿಸಿದರು.

ಎಲ್ಲಾ ಬ್ಯಾಂಕಿಂಗ್, ವಿಮೆ ಮತ್ತು ಇತರ ವಲಯಕ್ಕೆ ಸಂಬಂಧಿಸಿದ ಕಚೇರಿ ಶಾಖೆಗಳಲ್ಲಿ ಡಿಸೆಂಬರ್ ಅಂತ್ಯದವರೆಗೆ ಭಾರತದ ಹಣಕಾಸು
ಸಚಿವಾಲಯದ ಮಾರ್ಗ ಸೂಚಿಗಳ ಪ್ರಕಾರ ನಡೆಯಲಿರುವ ಈ ಶಿಬಿರದಲ್ಲಿ ಖಾತೆದಾರರು ಅಥವಾ ಕಾನೂನುಬದ್ಧ ವಾರಸುದಾರರು ಬ್ಯಾಂಕಿನಲ್ಲಿ ಸತತ
10 ವರ್ಷ ಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಹಣ ಮತ್ತು ಕ್ಲೈಮ್ ಮಾಡದ ಠೇವಣಿಗಳನ್ನು ಹಿಂಪಡೆದು ಕೊಳ್ಳಬಹುದಾಗಿದೆ.
ಬ್ಯಾಂಕಿಂಗ್ ವಲಯ, ವಿಮಾ ವಲಯ, ಹಣಕಾಸು ವಲಯ ಮತ್ತು ಇತರ ವಲಯಗಳ ಅಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಆಸಕ್ತರಿಗೆ ಸಲಹೆ
ನೀಡಲಿದ್ದಾರೆ ಎಂದರು.
ವಾರಸು ದಾರಿಕೆಯನ್ನು ಪ್ರತಿಪಾದಿಸಿ, ಮೊತ್ತವನ್ನು ಪಡೆದು ಕೊಳ್ಳಲಿಚ್ಚಿಸು ವವ್ಯಕ್ತಿಗಳು ಸೂಕ್ತ ಗುರುತಿನ ದಾಖಲೆಗಳು ಮತ್ತು
ಪುರಾವೆಗಳೊಂದಿಗೆ ಶಿಬಿರದಲ್ಲಿ ಭಾಗವಹಿಸಿ, ಸೂಕ್ತ ಸಲಹೆಯನ್ನು ಪಡೆಯಬಹುದು ಮತ್ತು ಹಕ್ಕು ಪಡೆಯದ ಮೊತ್ತವನ್ನು ಮರು ಪಡೆಯಲು ಈ
ಶಿಬಿರವನ್ನು ಬಳಿಸಿಕೊಳ್ಳಬಹುದಾಗಿದೆ ಎಂದವರು ನುಡಿದರು .
ಈ ಸಂದರ್ಭದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಹನುಮಂತಪ್ಪ, ಸಂಯೋಜಕ ಬಿ.ಹೊನ್ನಪ್ಪ ಸೇರಿದಂತೆ ಲೀಡ್ ಬ್ಯಾಂಕ್
ಹಾಗು ಎಲ್ಲ ಬ್ಯಾಂಕುಗಳ ಪ್ರಬಂಧಕರು ಉಪಸ್ಥಿತರಿದ್ದರು.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ