
ಬೆಂಗಳೂರು: 03-11-2025 : ಸ್ಯಾಂಡಲ್ ವುಡ್ ಕಿಂಗ್, ಡಿಬಾಸ್, ಲಕ್ಷಂತಾರ ಅಭಿಮಾನಿಗಳ ನೆಚ್ಚಿನ ಚಲನಚಿತ್ರ ನಾಯಕ ನಟ ದರ್ಶನ ತೂಗುದೀಪರವರನ್ನು ಇಂದು ಬೆಳಿಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.ಈ ಸಂದರ್ಭದಲ್ಲಿ ನ್ಯಾಯಾಲಯ ಆವರಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಡಿಬಾಸ್ ನೋಡಲು ಕಾತುರದಿಂದ ಕಾಯುತ್ತಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಾಣದಲ್ಲಿ ಬಂಧಿತನಾದ ದರ್ಶನ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವ ಸಮಯದಲ್ಲಿ ನ್ಯಾಯಾಲಯದ ಸುತ್ತಮುತ್ತಲಿನ ಪ್ರದೇಶದ ತುಂಬೆಲ್ಲಾ ದರ್ಶನ್ ಅಭಿಮಾನಿಗಳು ಕಿಕ್ಕಿರಿದು, ದರ್ಶನ್ ನನ್ನು ಕರೆತರುವಂತಹ ಮಾರ್ಗವೆಲ್ಲ ಅಭಿಮಾನಿಗಳಿಂದ ಕೂಡಿಕೊಂಡಿತ್ತು. ಪೋಲಿಸರು ಹರಸಾಹಸದಿಂದ ದರ್ಶನ್ನನ್ನು ನ್ಯಾಯಲಯಕ್ಕೆ ಕರೆತರುವಂತಾಯಿತು. ದರ್ಶನ್ ನ್ಯಾಯಲಯಕ್ಕೆ ಬರುತಾರೆ ಎಂಬ ವಿಷಯತಿಳಿದ ಅಭಿಮಾನಿಗಳು ತಮ್ಮನೆಚ್ಚಿನ ನಟನನ್ನು ನೋಡಲು ನೂರಾರು ಕಿಲೋಮಿಟರ್‌ದೂರದಿಂದ ಬಂದಂತಹ ಅಭಿಮಾನಿಗಳು ದರ್ಶನ್‌ನನ್ನು ಕಂಡಕೂಡಲೆ “ಡಿಬಾಸ್ ” ಎಂಬ ಘೋಷಣೆಗಳೊಂದಿಗೆ ತಮ್ಮ ನೆಚ್ಚಿನ ನಟ ಡಿಬಾಸ್‌ರನ್ನು ಬರಮಾಡಿಕೊಂಡರು. ಎಂದು ತಿಳಿದುಬಂದಿದೆ
ಅಭಿಮಾನಿಗಳ ಜನಸಾಗರ : ಪೋಲಿಸರಿಗೆ ಪಿಕಾಲಾಟ….
ದರ್ಶನರನ್ನು ಕಾರಗೃಹದಿಂದ ವಿಚಾರಣೆಗಾಗಿ ನ್ಯಾಯಾಲಯಕ್ದ ಹಾಜರುಪಡಿಸಿದ ಸಮಯದಲ್ಲಿ ಅನಿರೀಕ್ಷಿತ ಜನಸಮೂಹದಿಂದಾಗಿ ಕೆಲ ಸಮಯ ಉಂಟಾದ ರಸ್ತೆ ಸಂಚಾರದ ಸಮಸ್ಯಗೆ ಸ್ಹೆಥಳಿಯ ಪೋಲಿಸರು ಹೆಚ್ಚುವರಿ ಭದ್ರತೆ ಒದಗಿಸಿ, ಸಂಚಾರಿ ನಿಯಂತ್ರಣಕ್ಕಾಗಿ ನಗರದ ಕೆಲವು ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಯಿತು.
” ಬಾವುಕರಾದ ಅಭಿಮಾನಿಗಳು”
ನ್ಯಾಯಾಲಯಕ್ಕೆ ಕರೆತಂದಂತಹ ದರ್ಶನ್‌ರನ್ನು ವಿಚಾರಣೆಯ ಬಳಿಕ ಮರಳಿ ಕಾರಗೃಹಕ್ಕೆ ವಾಪಾಸ್ (ಪೊಲೀಸ್ ಎಸ್ಕರ್ಟ್ ತಂಡ) ಕರೆದುಕೊಂಡು ಹೋಗುವ ಸಮಯದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಡಿಬಾಸ್ರನ್ನು ಕಂಡು ಕೇಕೆ ಹಾಕುತ್ತಾ, ಚಪ್ಪಾಳೆ,ಶೀಟಿ ಹೊಡೆಯುತ್ತಾ, ಡಿಬಾಸ್ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಅಭಿಮಾನದ ಭಾವನೆಯನ್ನು ವ್ಯಕ್ತಪಡಿಸಿದರು. ಕೆಲವರು ಕಣ್ಣೀರಿನಲ್ಲಿ ಮುಳುಗಿದರೆ, ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿಯಲು ಯತ್ನಿಸಿದರು.
ಮುಂದಿನ ವಿಚಾರಣೆಯ ದಿನಾಂಕ ಶೀಘ್ರದಲ್ಲೇ…..
ರೇಣುಕಸ್ವಾಮಿ ಕೋಲೆ ಪ್ರಕರಣದಲ್ಲಿ ಬಂಧಿತನಾದ ದರ್ಶನ್‌ರನ್ನ ನ್ಯಾಯಾಲಯದ ವಿಚಾರಣೆ ಬಳಿಕ ದರ್ಶನನನ್ನು ಮತ್ತೆ ಪೊಲೀಸರು ಪೊಲೀಸ್ ಎಸ್ಕರ್ಟ್ ತಂಡದ ಕಸ್ಟಡಿಯಲ್ಲೇ ಹಿಂದಿರುಗಿಸಿದರು. ಪ್ರಕರಣದ ಮುಂದಿನ ವಿಚಾರಣೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಮೂಲಗಳು ತಿಳಿಸಿವೆ.
ದರ್ಶನ್‌ನನ್ನು ರೇಣುಕಾಸ್ವಾಮಿ ಕೋಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಕಾರಗೃಹಕ್ಕೆ ಕರೆದುಕೊಂಡು ಹೋಗುವಂತಹ ಮಾರ್ಗವನ್ನು. ಪೊಲೀಸ್ ಎಸ್ಕರ್ಟ್ ತಂಡ ಯಾವುದೇ ರೀತಿಯ ಆಹಿತರ ಘಟನೆ ನಡೆಯದಂತೆ ಸಮಾಜದ ಶಾಂತಿ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದದ್ದರು…
More Stories
ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ : (ಎಂ ಎಸ್ ಪಿ) ಜಾರಿಗೋಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಸರ್ಕಾರಕ್ಕೆ ಒತ್ತಾಯ..!!
ಸಿಟಿರೌಂಡ್ಸ್ ನ್ಯೂಸ್ ಬಿಗ್ ಇಂಫ್ಯಾಕ್ಟ್ 125 ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ದಾಳಿ 52 ವಾಹನಗಳು ವಶಕ್ಕೆ ..!!
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …