

“ಸಿಟಿ ರೌಂಡ್ಸ್ ನ್ಯೂಸ್ ವೆಬ್‌ಪೋರ್ಟಲ್ ನಲ್ಲಿ ಬಿತ್ತರಿಸಲಾಗಿದ್ದ ಸುದ್ದಿ, ಮರಳು ಮಾಫಿಯಾ..!! “ಹಣದ ದಾಹಕ್ಕಾಗಿ ನನ್ನ ಒಡಲನ್ನು ಕೊರೆದು, ನನ್ನನ್ನು ಬಲಿ ಕೊಡುತ್ತಿದ್ದಾರೆ.. ದಯಮಾಡಿ ಕಾಪಾಡಿ ನನ್ನನ್ನು : ಉಳಿಸಿ ಜೀವ ಜಲದ ಮೂಲವನ್ನು” ಎಂಬ ಶೀರ್ಷಿಕೆಯಡಿ ಮೇ 15 ರಂದು ತುಂಗಾ ನದಿ ಮರಳು ಮಾಫಿಯಾ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಬರುವಂತೆ ಸುದ್ದಿಯನ್ನು :ಸಿಟಿ ರೌಂಡ್ಸ್ ನ್ಯೂಸ್ ವೆಬ್ ಪೋರ್ಟಲ್ ನಲ್ಲಿ, ಡಿಜಿಟಲ್ ಅಂಕಣದಲ್ಲಿ ಪ್ರಸಾರ ಮಾಡಲಾಗಿತ್ತು.

ಶಿವಮೊಗ್ಗ : 31-05-2026 ಮಾಧ್ಯಮ ವರದಿ ಅನುಸಾರ ಸ್ವಯಂ ಪ್ರೇರಿತರಿ ದಾಖಲಿಸಿಕೊಂಡ ಲೋಕಾಯುಕ್ತರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳ ಕಚೇರಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಶಿವಮೊಗ್ಗ, ಮತ್ತು ಭದ್ರಾವತಿ ತಾಲೂಕುಗಳಲ್ಲಿ. ತುಂಗಾ ಶರಾವತಿ, ತುಂಗಭದ್ರಾ ನದಿ, ಪಾತ್ರದಲ್ಲಿ ಅಕ್ರಮ ಮರಳು ಕ್ವಾರಿಗಳ ಸ್ಥಳ ಪರಿಶೀಲಿಸುವಂತೆ ಸೂಚನೆ ನೀಡಿದ್ದರು.

ಇದರ ಅನ್ವಯ ಶಿವಮೊಗ್ಗ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ 15 ತಂಡಗಳು ದಿನಾಂಕ-30-05-2026ರ ಶನಿವಾರ ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಅಕ್ರಮ ಸಾಗಣೆ ಮತ್ತು 125 ಮರಳು ಅಡ್ಡಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿ 52 ವಾಹನಗಳನ್ನು, ಹಾಗೂ 17000 ಸಾವಿರ ಟನ್ ಮರಳನ್ನುಹಾಗೂ ಅಕ್ರಮ ಮರಳು ದಂಧೆಗೆ ಬಳಸಲಾದ ಜೆಸಿಬಿ,ಹಿಟಾಚಿ,ಲಾರಿ,ಟ್ರ್ಯಾಕ್ಟರ್,ಬೋಟ್‌ಗಳು ಮತ್ತು ಮರಳು ಫಿಲ್ಟರ್ ಮಫಿನ್‌ಗಳನನ್ನು ವಶಕ್ಕೆ ಪಡೆದು. ಸಂಬಂಧಪಟ್ಟಂತಹ ಇಲಾಖೆಗಳಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಪೊಲೀಸ್, ಆರ್ ಟಿ ಓ, ಅರಣ್ಯ, ಸಹಾಯಕ ಭೂ ದಾಖಲಾತಿ ಇಲಾಖೆ,ಮಾಲಿನ್ಯ ನಿಯಂತ್ರಣ ಮಂಡಳಿ, ಮತ್ತು ಲೋಕಾಪಯೋಗಿ ಇಲಾಖೆಗಳಿಗೆ ಕಾನೂನು ಅನ್ವಯ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಇಲಾಖೆ ಸೂಚನೆ ನೀಡಿದರು.

ಅಕ್ರಮ ಮರಳುಗಾರಿಕೆ. ತುಂಗಾ ನದಿಯ ಒಡಲನ್ನು ಕೊರೆದು ಮರಳು ಲೂಟಿ ಮಾಡುತ್ತಿರುವವರಿಗೆ. ದಾರಿ ದೀಪವಾಗಿ ..?ಸಹಾಯದ ಹಸ್ತ ಹಾಗೂ ಕಾನೂನಿನ ನಿಯಮಗಳನ್ನು ಉಲ್ಲಂಘಿಸಲು..? ದಾರಿ ಮಾಡಿಕೊಟ್ಟಿರಬವುದೆ ಎಂಬ ಸಂಶಯದ ಮೇರೆಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪಾತ್ರ ಎಷ್ಟಿದೆ ಎಂಬುದನ್ನು ತನಿಖೆ ನಡೆಸಲು ಲೋಕಾಯುಕ್ತ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯಲ್ಲಿನ ದಾಖಲಾತಿಗಳನ್ನು ಪರಿಶೀಲನೆಗೆಂದು ಮುಂದಿನ ತನಿಖೆಯನ್ನು ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಲು ತನಿಖೆ ಮುಂದುವರಿಸಿದ್ದಾರೆ.
ಮರಳು ಮಾಫಿಯ ,ಅಕ್ರಮ ಕೆರೆ ಮಣ್ಣು, ಹಾಗೂ ಕಲ್ಲು ಗಣಿಗಾರಿಕೆ ಇನ್ನಿತರ ಹಲವು ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲಿದೇಯೆ ಲೋಕಾಯುಕ್ತ ಇಲಾಖೆ. ಕಾದು ನೊಡೋಣ…
ವರದಿ: ಅಣ್ಣಪ್ಪ. ಎಂ ಸಂಪಾದಕರು – ಪ್ರಕಾಶಕ-


More Stories
ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ : (ಎಂ ಎಸ್ ಪಿ) ಜಾರಿಗೋಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಸರ್ಕಾರಕ್ಕೆ ಒತ್ತಾಯ..!!
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?