ಶಿವಮೊಗ್ಗ:ದಿನಾಂಕ-12-10-2025 ಹೇಣ್ಣು ಮಕ್ಕಳೆಂದರೆ ಪ್ರತಿಯೋಬ್ಬ ತಂದೆಗೂ ಅವಳ ಮೇಲೆ ಪ್ರೀತಿ ಹೆಚ್ಚಾಗಿರುತ್ತದೆ. ಒಬ್ಬತಂದೆ ತನ್ನ ಮಗನ ಮೇಲಿನ ಪ್ರೀತಿಗಿಂತಲು ತನ್ನ ಮಗಳ ಮೇಲೆ ಅತಿಯಾದ ಪ್ರೀತಿ ಮಮತೆ ಬಾಂಧವ್ಯ ತೋರುತ್ತಾನೆ. ಹೆಣ್ಣು ಮಗು ತನ್ನ ತಾಯಿಗಿಂತ ತನ್ನ ತಂದೆಯ ಮೇಲೆ ಹೆಚ್ಚಿನ ಪ್ರೀತಿ ತೋರುತ್ತಾಳೆ. ಒಬ್ಬ ತಂದೆ ಹಾಗೂ ಮಗಳ ಸಂಬಂಧ ಮಮತೆ, ಪ್ರೀತಿ ,ನಂಬಿಕೆ, ವಿಶ್ವಾಸ ಹಾಗು ವಾತ್ಸಲ್ಯದಿಂದ ಕೂಡಿರುವಂತಹ ಪವಿತ್ರವಾದಂತಹ ಸಂಬಂಧ ವಾಗಿರುತ್ತದೆ.
ಹರಿದ್ವಾರ: ಮಾನವ ಸಂಬಂಧಗಳಿಗೆ ವಿಶೇಷ ವಾದಂತಹ ಸ್ಥಾನವನ್ನು ನಮ್ಮ ಭಾರತ ದೇಶದಲ್ಲಿ ನೀಡಲಾಗುತ್ತದೆ.ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ,ತಮ್ಮ, ಬಂಧು ಬಳಗ ಎಂದು ಅದರದೆ ಆದಂತಹ ಸ್ಥಾನಗಳನ್ನು ನೀಡಲಾಗಿದೆ ಮತ್ತು ಒಂದು ಹೇಣ್ಣು ತನ್ನ ಗೆಳೆಯನ ಮೇಲಿನ ಪ್ರೀತಿ, ನಂಬಿಕೆ,ವಿಶ್ವಾಸಗಳಿಗೆ ಸೋತು ತನ್ನ ಜೀವನವನ್ನೆ ಧಾರೆ ಎರೆಯುತ್ತಾಳೆ. ಗೆಳೆಯನ ಪ್ರೀತಿ ಕಾಮವಾದಗ, ಜನ್ಮ ಕೊಟ್ಟ ತಂದೆಯೆ ಕಾಮಪಿಶಾಚಿ ಆದಾಗ
ಒಬ್ಬ ಹೆಣ್ಣಿನ ಸ್ಥಿತಿ ಯಾವರೀತಿಯಲ್ಲಿ ಇರಬವುದೆಂಬ ಕಲ್ಪನೆಯು ಅಸಾಧ್ಯವಾದುದ್ದು.ಆದರೆ ಈ ರೀತಿಯಾದಂತಹ ಒಂದು ಘಟನೆ ನಮ್ಮ ದೇಶದಲ್ಲಿಯೆ ನಡೆದಿರುವುದು ಶೋಚನಿಯವಾಗಿದೆ.

ಜನ್ಮ ಕೊಟ್ಟ ತಂದೆ ಹಾಗು ಬಾಲಕಿಯ ಗೆಳಯ ಹಲವು ಬಾರಿ ಅತ್ಯಾಚಾರ ಮಾಡಿ ಬಾಲಕಿಯನ್ನು ತಮ್ಮ ಕಾಮದ ತೃಷೆಗೆ ಬಳಸಿಕೋಡಿರುವಂತಹ ಅಮಾನವೀಯ ಘಟನೆ ಉತ್ತರ ಭಾರತದ ಹರಿದ್ವಾರದ ಕಂಖಾಲ್ ಪ್ರದೇಶದಲ್ಲಿ ನಡೆದಿದ. ಜನ್ಮ ಕೊಟ್ಟ ತಂದೆ ಮತ್ತು ಗೆಳೆಯನಿಂದ ಪದೇ ಪದೇ ಅತ್ಯಾಚಾರಕ್ಕೆ ಒಳಪಟ್ಟು 3 ಬಾರಿ ಗರ್ಭಪಾತವದಂತಹ 17 ವರ್ಷದ ಬಾಲಕಿಗೆ ತಂದೆ ಹಾಗು ಗೆಳೆಯ ಅತ್ಯಾಚಾರ ಮಾಡಿದ ನಂತರ ಪ್ರತಿಭಾರಿ ಗರ್ಭಪಾತದ ಮಾತ್ರೆಗಳನ್ನುನೀಡಿದ್ದಾರೆ ಎಂಬ ವಿಚಾರ ಸಂತ್ರಸ್ತೆಯ ಆರೋಗ್ಯದಲ್ಲಿ ಹಲವಾರು ಸಮಸ್ಯಗಳು ಕಂಡುಬಂದ ನಂತರ ಅತ್ಯಾಚಾರಕ್ಕೆ ಒಳಗಾಗಿದಂತಹ ಸಂತ್ರಸ್ತೆಯ ಸಹೋದರಿ ತನ್ನ ತಂಗಿಯನ್ನುಆಸ್ಪತ್ರೆಗೆ ದಾಖಾಲಿಸಿದಾಗ ಸಂತ್ರಸ್ತೆಯ ಆರೋಗ್ಯದಲ್ಲಿ ಸಮಸ್ಯಗೆ ಕಾರಣ ಹಲವು ಭಾರಿ ಗರ್ಭಪಾತವಾಗಿದೆ ಎಂಬ ವೈದ್ಯರು ಸಂತ್ರಸ್ತೆಯನ್ನು ವೈಧ್ಯಕೀಯ ಪರಿಕ್ಷೇಗೆ ಒಳಪಡಿಸಿದಾಗ ಈ ವಿಚಾರ ತಿಳಿದುಬಂದಿದೆ.
ನಂತರ ಸಂತ್ರಸ್ತೆಯನ್ನು ವಿಚಾರಿಸಿದಾಗ ತನ್ನ ತಂದೆ ಹಾಗೂ ಗೆಳೆಯನಿಂದ ನಡೆದಂತಹ ಅಮಾನವೀಯ ಘಟನೆಯನ್ನು ಸಂತ್ರಸ್ತೆ ಆರೋಗ್ಯದಿಂದ ಕೊಂಚ ಚೇತರಿಸಿ ಕೊಂಡ ನಂತರ ಸಂತ್ರಸ್ತೆ ನಡೆದಂತಹ ಭಯಾನಕ ನರಕ ಯಾತನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಆನಂತರ ಈ ವಿಚಾರವಾಗಿ ತನಿಖೆ ಕೈಗೋಡಂತಹ ಪೋಲಿಸರು ಸಂತ್ರಸ್ತೆ ನೀಡಿದ ಹೇಳಿಕೆಯನ್ನು ದಾಖಾಲಿಸಿಕೊಂಡು.60 ವರ್ಷದ ಸಂತ್ರಸ್ತೆಯ ತಂದೆಯನ್ನು ಹಾಗು ಗೆಳೆಯ ಪ್ರಿಯಾಂಶ್ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮಗಳ ಜೀವನವನ್ನು ಸುಂದರವಾಗಿ ರೂಪಿಸುವಂತಹ ತಂದೆಯೆ ಈ ರೀತಿಯಾಗಿ ತನ್ನ ಮಗಳ ಮೇಲೆ ಅತ್ಯಾಚಾರ ವೆಸಗಿರುವಂತಹ ಘಟನೆ ಇಡಿ ಮಾನವ ಕುಲ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಇಂತಹ ಕಾಮುಕರನ್ನು ನ್ಯಾಯಾಲಯ ಕಠಿಣವಾದಂತಹ ಮರಣ ದಂಡನೆಯಂತಹ ಶೀಕ್ಷೆಯನ್ನು ನೀಡುವ ಮೂಲಕ ಸಂತ್ರಸ್ತೆಗೆ ನ್ಯಾಯ ದೊರಕಬೇಕಾಗಿದೆ…


More Stories
ದೆಹಲಿಯ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್..!!
₹3 ಕೋಟಿ ಲಂಚಕ್ಕೆ ಬೇಡಿಕೆ: ಐಪಿಎಸ್ ಅಧಿಕಾರಿ ಬಂಧನ..!!
ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸೋರಿಕೆ… ಅವ್ಯವಸ್ಥೆಯ ನೇರ ಹೊಣೆಗಾರ ಕೇಂದ್ರ ಸರ್ಕಾರ..!!