ನವದೆಹಲಿ: 09-15-2026 : ಮರಾಷ್ಟ್ರ ರಾಜಧಾನಿಯ ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ಮಂಗಳವಾರ ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬೆದರಿಕೆ ಕರೆ ಬಂದ ಶಾಲೆಗಳಲ್ಲಿ ಚಾಣಕ್ಯಪುರಿಯ ಬ್ರಿಟಿಷ್ ಶಾಲೆ (The British School), ಲೋಧಿ ಎಸ್ಟೇಟ್ನ ಸರ್ದಾರ್ ಪಟೇಲ್ ವಿದ್ಯಾಲಯಬೆದರಿಕೆ ಇಮೇಲ್ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಶಾಲಾ ಆಡಳಿತ ಮಂಡಳಿಗಳು ಪೊಲೀಸರಿಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಆವರಣದಿಂದ ಹೊರಗೆ ಕರೆತಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ದೆಹಲಿ ಪೊಲೀಸ್, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDS), ಶ್ವಾನ ದಳ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಡೀ ಶಾಲಾ ಆವರಣಗಳಲ್ಲಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. ಪ್ರಸ್ತುತ ಶೋಧ ಕಾರ್ಯದಲ್ಲಿ ಯಾವುದೇ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಭದ್ರತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪೋಷಕರಿಗೆ ಮಾಹಿತಿ ನೀಡಿದ ಶಾಲಾ ಆಡಳಿತ ಮಂಡಳಿಘಟನೆಗೆ ಸಂಬಂಧಿಸಿದಂತೆ ಸರ್ದಾರ್ ಪಟೇಲ್ ವಿದ್ಯಾಲಯವು ಪೋಷಕರಿಗೆ ತುರ್ತು ಸಂದೇಶ ರವಾನಿಸಿದೆ.
“ಶಾಲೆಗೆ ಭದ್ರತಾ ಬೆದರಿಕೆ ಬಂದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಶಾಲಾ ಆವರಣದಿಂದ ಹೊರಗೆ ಕರೆತರಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಅಗತ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಶಾಲೆ ಸುರಕ್ಷಿತವಾಗಿದೆ ಎಂದು ಪೊಲೀಸರು ಘೋಷಿಸಿದ ಬಳಿಕವೇ ತರಗತಿಗಳು ಪುನರಾರಂಭಗೊಳ್ಳಲಿವೆ” ಎಂದು ತಿಳಿಸಿದೆ. ಈ ವೇಳೆ ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದವು ಎಂದು ಪೋಷಕರು ತಿಳಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ದೆಹಲಿ ಪೊಲೀಸರುನವದೆಹಲಿ ಜಿಲ್ಲೆಯ ಶಾಲಾ ಆವರಣಗಳಲ್ಲಿ ಬೆಳಿಗ್ಗೆ 10:30 ರಿಂದ 10:45 ರ ನಡುವೆ ಈ ಬೆದರಿಕೆ ಇಮೇಲ್ಗಳು ಬಂದಿರುವುದು ವರದಿಯಾಗಿದೆ. ದೆಹಲಿ ಪೊಲೀಸರ ಸೈಬರ್ ಕ್ರೈಮ್ ವಿಭಾಗವು ತನಿಖೆಯನ್ನು ಚುರುಕುಗೊಳಿಸಿದ್ದು, ಈ ಇಮೇಲ್ಗಳ ಮೂಲ ಹಾಗೂ ಐಪಿ ವಿಳಾಸವನ್ನು ಪತ್ತೆಹಚ್ಚಲು ತಜ್ಞರ ಸಹಾಯ ಪಡೆದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ಕಿಡಿಗೇಡಿಗಳು ಮಾಡಿರುವ ನಕಲಿ (ಹೋಕ್ಸ್) ಇಮೇಲ್ ಇರಬಹುದು ಎಂದು ಶಂಕಿಸಲಾಗಿದೆ. ಪೋಷಕರು ಹಾಗೂ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ಅಪಪ್ರಚಾರ ಅಥವಾ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಶಾಂತತೆ ಕಾಪಾಡಿಕೊಳ್ಳಬೇಕು ಎಂದು ದೆಹಲಿ ಪೊಲೀಸ್ ಇಲಾಖೆ ಮನವಿ ಮಾಡಿದೆ.


More Stories
₹3 ಕೋಟಿ ಲಂಚಕ್ಕೆ ಬೇಡಿಕೆ: ಐಪಿಎಸ್ ಅಧಿಕಾರಿ ಬಂಧನ..!!
ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸೋರಿಕೆ… ಅವ್ಯವಸ್ಥೆಯ ನೇರ ಹೊಣೆಗಾರ ಕೇಂದ್ರ ಸರ್ಕಾರ..!!
ಬೇರೆಯವರ ಪರ ಧ್ವನಿ ಎತ್ತುವ ಪತ್ರಕರ್ತರೇ, ನಿಮ್ಮ ಮತ್ತು ನಿಮ್ಮ ಕುಟುಂಬದ ಧ್ವನಿಯಾಗುವವರು ಯಾರು?