City Rounds News

Kannada News Website

ಪಾವಗಡ ಶಾಸಕರೇ, ಅಧಿಕಾರದ ದರ್ಪ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ: ಜನರೇ ನಿಜವಾದ ಪ್ರಭುಗಳು, ರಾಜಕಾರಣಿಗಳಲ್ಲ!

ಶಿವಮೊಗ್ಗ :  ಮತ ಹಾಕಿದ ಜನರೇ ನಿಮಗೊಂದು ನೆನಪು:

ಪಾವಗಡ ಶಾಸಕರೇ, ಅಧಿಕಾರದ ದರ್ಪ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ!ತುಮಕೂರು: ಚುನಾವಣೆಯ ಸಮಯದಲ್ಲಿ ಜನರ ಕೈಕಾಲು ಹಿಡಿದು, ‘ನಿಮ್ಮ ಮನೆಯ ಮಗ’ ಎಂದು ವೋಟ್ ಕೇಳುವ ರಾಜಕಾರಣಿಗಳು, ಅಧಿಕಾರ ಸಿಕ್ಕ ತಕ್ಷಣ ಬದಲಾಗುವುದು ಹೊಸದೇನಲ್ಲ. ಆದರೆ, ಪಾವಗಡದಲ್ಲಿ ಇತ್ತೀಚೆಗೆ ನಡೆದ ಘಟನೆ ಮಾತ್ರ ಜನಪ್ರತಿನಿಧಿಗಳ ಅಹಂಕಾರದ ಪರಮಾವಧಿಯನ್ನು ತೋರಿಸಿದೆ.

ಸರ್ಕಾರದ ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮದಲ್ಲಿಯೇ ಸಾರ್ವಜನಿಕರ ಮೇಲೆ ದರ್ಪ ತೋರಿದ ಪಾವಗಡ ಶಾಸಕ ಹೆಚ್. ವಿ. ವೆಂಕಟೇಶ್ ಅವರ ನಡೆಗೆ ಈಗ ಕ್ಷೇತ್ರದ ಜನರೇ “ನಿಮಗೆ ಬುದ್ಧಿ ಕಲಿಸುವ ದಿನ ದೂರವಿಲ್ಲ” ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರಜಾಸೇವೆಯೋ? ಅಥವಾ ಪ್ರಭುಗಳ ದರ್ಪವೋ?

ಸರ್ಕಾರ ಈ ಕಾರ್ಯಕ್ರಮಕ್ಕೆ ಇಟ್ಟಿರುವುದು ‘ಪ್ರಜಾಸೇವಾ’ ಆಂದೋಲನ ಎಂದು. ಅಂದರೆ, ಶಾಸಕರು ಮತ್ತು ಅಧಿಕಾರಿಗಳು ಜನರ ಸೇವಕರು ಎಂದು ಅರ್ಥ. ಆದರೆ ವೇದಿಕೆಯಲ್ಲಿದ್ದ ಶಾಸಕ ವೆಂಕಟೇಶ್ ಅವರ ವರ್ತನೆ ನೋಡಿದರೆ, ಅವರು ಜನರ ಸೇವಕರಂತೆ ಕಾಣಲಿಲ್ಲ; ಬದಲಿಗೆ ಬ್ರಿಟಿಷ್ ಕಾಲದ ಸರ್ವಾಧಿಕಾರಿಯಂತೆ ಆಡಿದರು. ವೈ. ಎನ್. ಹೊಸಕೋಟೆಯ ಸಾರ್ವಜನಿಕ ಸಂತೆ ಮೈದಾನ ಒತ್ತುವರಿಯಾಗುತ್ತಿರುವ ಬಗ್ಗೆ ದೂರು ನೀಡಲು ಬಂದ ಸಾರ್ವಜನಿಕರನ್ನು “ಏಯ್, ಅರ್ಜಿ ಕೊಟ್ಟು ಆಚೆ ಹೋಗ್ತಿರಬೇಕು ಅಷ್ಟೇ!” ಎಂದು ಏಕವಚನದಲ್ಲಿ ಗದರಿಸಿ, ಧಮ್ಕಿ ಹಾಕಿರುವುದು ಯಾವ ಸೀಮೆಯ ನ್ಯಾಯ?ಸಾರ್ವಜನಿಕರ ಆಸ್ತಿ ರಕ್ಷಿಸುವುದು ನಿಮ್ಮ ಕರ್ತವ್ಯ, ಉಪಕಾರವಲ್ಲ!ಸರ್ಕಾರಿ ಜಾಗವನ್ನು ಪ್ರಭಾವಿಗಳು ನುಂಗುತ್ತಿದ್ದಾರೆ, ಅದನ್ನು ಉಳಿಸಿಕೊಡಿ ಎಂದು ಜನ ಕೇಳಿದ್ದು ತಮ್ಮ ಸ್ವಂತ ಆಸ್ತಿಯನ್ನಲ್ಲ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಒಬ್ಬ ಶಾಸಕನಾಗಿ ವೆಂಕಟೇಶ್ ಅವರ ಕರ್ತವ್ಯ.

ಜನರೇನು ಶಾಸಕರ ಮನೆ ಬಾಗಿಲಿಗೆ ಹೋಗಿ ಭಿಕ್ಷೆ ಕೇಳುತ್ತಿರಲಿಲ್ಲ. ಪ್ರಜಾಪ್ರಭುತ್ವದ ವೇದಿಕೆಯಲ್ಲಿ ನಿಂತು, ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಶಾಸಕರು, ಜನರಿಗೇ ಹೆದರಿಸುವ ಧೈರ್ಯ ಎಲ್ಲಿಂದ ಬಂತು? ನೆನಪಿರಲಿ, ರಾಜಕಾರಣಿಗಳಿಗೆ ಐದು ವರ್ಷಗಳ ಕಾಲ ಅಧಿಕಾರ ಕೊಡುವುದು ಜನರ ಸಮಸ್ಯೆಗಳನ್ನು ಬಗೆಹರಿಸಲು, ಜನರ ಮೇಲೆಯೇ ಸವಾರಿ ಮಾಡಲು ಅಲ್ಲ.

ಜನರೇ ನಿಜವಾದ ಪ್ರಭುಗಳು, ರಾಜಕಾರಣಿಗಳಲ್ಲ!

ಅರ್ಜಿ ಹಿಡಿದು ಬಂದವರನ್ನು ಸಿಬ್ಬಂದಿ ಮೂಲಕ ಆಚೆ ತಳ್ಳಿಸಿದ ಶಾಸಕ ವೆಂಕಟೇಶ್ ಅವರಿಗೆ ಕ್ಷೇತ್ರದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿಯೇ ಎಚ್ಚರಿಕೆ ನೀಡುತ್ತಿದ್ದಾರೆ. “ಇಂದು ಅರ್ಜಿ ಹಿಡಿದು ಬಂದ ಜನರನ್ನು ಆಚೆ ಕಳುಹಿಸಿದ್ದೀರಿ, ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಕ್ಷೇತ್ರದ ಜನ ಆಚೆ ಕಳುಹಿಸುವ ದಿನಗಳು ದೂರವಿಲ್ಲ “ಲೇ ವೆಂಕಟೇಶ  ನಿನಿಗ್ ಸಂಬಳ ಕೊಡ್ತಿರೋದು ನಾವ್ ಕಣೋ”  ಸಾರ್ವಜನಿಕರ ತೆರಿಗೆ ಹಣದಿಂದ  ನಿನಗೆ ಓಡಾಡಲು ಕಾರು ಅದಕ್ಕೆ ಪೆಟ್ರೋಲ್,  ಸಾರ್ವಜನಿಕರ ಕೆಲಸದ ಮೇಲೆ ಹೊರ ಊರಿಗಳಿಗೆ ಹೋದಾಗ ನಿನಗೆ ತಿನ್ನಲು ಅನ್ನ, ಕುಡಿಯಲು ನೀರು, ಕೋಲ್ಡ್ ನೀರು ಬಾಟಲ್, ಎಸಿ, ಎಲ್ಲವನ್ನು ಉಚಿತ ಕೊಡುತ್ತಿರುವುದು ಸಾರ್ವಜನಿಕರು ಕಟ್ಟುತ್ತಿರುವ ತೆರಿಗೆ ಹಣದಿಂದ ಮರೆತುಬಿಟ್ಟೆನೋ  ವೆಂಕಟೇಶ.  ಹಿಂದಿಂದೆಲ್ಲಾ ಮರೆತುಬಿಟ್ಟೆನೋ ವೆಂಕಟೇಶ  ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಏನ್ರೀ  ನಿಮ್ಮಕಡೆಯವರ ಹವಾ…!