ಶಿವಮೊಗ್ಗ: ದಿನಾಂಕ: 04-08-2021 ರಂದು ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಅಶೊಕ್ ಕುಮಾರ್ ಪಿಐ ಸಾಗರ ಟೌನ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಾಗರದ ಬಿಹೆಚ್ ರಸ್ತೆಯ ಸದ್ಗುರು ಲೇ ಔಟ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಅವರಿಂದ 1 ಕೆ.ಜಿ 60 ಗ್ರಾಂ ಒಣ ಗಾಂಜಾ ಪದಾರ್ಥ ಮತ್ತು 800/- ರೂ ನಗದು ಹಣ ಮತ್ತು ಗಾಂಜಾ ಮಾರಾಟ ಮಾಡಲು ಬಳಸಿದ ಮಾರುತಿ ಓಮಿನಿ ಕಾರ್ ಅನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0148/2021 ಕಲಂ ಏನ್ ಡಿ ಪಿ ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತಾರೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಸಾಗರ್ ಕರ್ ಪಿಎಸ್ಐ ಸಾಗರ ಟೌನ್ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ.ಎಂ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಮಂಜುನಾಥ ನಾಯಕ
ರವರು ದಿನಾಂಕ: 08-10-2025 ರಂದು ಆರೋಪಿತರಾದ 1) ಇಮ್ರಾನ್ ಖಾನ್, 25 ವರ್ಷ, ಸಾಗರ ಟೌನ್ ಮತ್ತು 2) ಇಮ್ತಿಯಾಜ್, 28 ವರ್ಷ,

ಸಾಗರ ಟೌನ್ ರವರುಗಳಿಗೆ 3 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 25,000/- ರೂ ದಂಡ ವಿಧಿಸಿ, ಆದೇಶಿಸಿರುತ್ತಾರೆ. ಎಂದು ತಿಳಿಸಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ