City Rounds News

Kannada News Website

ಯುವಕರ ಮೇಲೆ ಮಾರಕಸ್ತ್ರಗಳಿಂದ ಹಲ್ಲೆ : ಇಬ್ಬರಲ್ಲಿ ಒಬ್ಬ ಉಳಿಯುವುದೇ ಡೌಟ್…?

ಶಿವಮೊಗ್ಗ: ದಿನಾಂಕ:02-10-2025 ರಂದು ಶಿವಮೊಗ್ಗ ನಗರದ ಆರ್. ಎಂ. ಎಲ್ ಬಡಾವಣೆಯ ನಿವಾಸಿಯಾದ ಅಮ್ಜದ್ ಎಂಬುವನ ಮೇಲೆ ಹಾಗೂ ಆತನ ಸ್ನೇಹಿತನ ಮೇಲೆ ಯುವಕರ ಗುಂಪೊಂದು ಮಾರಕಸ್ತ್ರಗಳಿಂದ ಹಲ್ಲೆ ಮಾಡಿದ್ದು ಅಮ್ಜದ್ ಎಂಬಾತನಿಗೆ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದು ಹಾಗೂ ಬಲಗೈ, ಎಡಗೈ ಬೆರಳುಗಳಿಗೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

 ಇಂದು ರಾತ್ರಿ ಸುಮಾರು 9:00 ಗಂಟೆ ಸಮಯದಲ್ಲಿ ಆರ್ ಎಂ ಎಲ್ ನಗರದ ರಸ್ತೆ ಬದಿಯಲ್ಲಿ ನಿಂತಿದ್ದ ಅಮ್ಜದ್ ಹಾಗೂ ಸ್ನೇಹಿತನ ಮೇಲೆ ಗುಂಪೊಂದು ಏಕಾಏಕಿ ದಾಳಿ ಮಾಡಿದ್ದು, ಅಮ್ಜದ್ ಹಾಗೂ ಆತನ ಸ್ನೇಹಿತನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಮ್ಜದ್ ಬದುಕುವುದು ಕಷ್ಟ ಎಂದು ತಿಳಿದುಬಂದಿದೆ. ಅಮ್ಜದ್ ಮೇಲೆ ದಾಳಿ ಮಾಡಿದ ಗುಂಪು ಯಾರು? ಇದರ ಹಿಂದಿನ ಉದ್ದೇಶವೇನು ಎಂಬುದು ಪೊಲೀಸರ ತನಿಖೆಯಿಂದ ಮಾಹಿತಿ ತಿಳಿಯಬೇಕಾಗಿದೆ….!