City Rounds News

Kannada News Website

ರೈತರ ಪರ ಕಾಳಜಿ ಇಲ್ಲದ ಸಂಸದ ಬಿ. ವೈ ರಾಘವೇಂದ್ರ ರವರು: ಸಚಿವ ಮಧು ಬಂಗಾರಪ್ಪ ವಾಗ್ದಾಳಿ..!

 

ಶಿವಮೊಗ್ಗ: ಆಗಸ್ಟ್ 02: ಇಂದು ಶಿವಮೊಗ್ಗ ಉಸ್ತುವಾರಿ ಸಚಿವರಾಗಿರುವ ಮಧುಬಂಗಾರಪ್ಪನವರು ಶಿವಮೊಗ್ಗ ನಗರದಲ್ಲಿರುವ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಪ್ರಾರಂಭದಲ್ಲಿ ಗೌರಿ ಗಣೇಶ ಹಬ್ಬದ ಶುಭಾಷಯಗಳನ್ನು ಜನತೆಗೆ ಕೋರಿದರು, ಅವರು ಈ ಬಾರಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಯನ್ನು ಜನರು ವಿಜೃಂಬಣೆಯಿಂದ ಆಚರಿಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತಕ್ಕೆ ಗಣೇಶ ಚತುರ್ಥಿ ಹಾಗೂ ಈದ್‌ ಮಿಲಾದ್‌ ಹಬ್ಬದ ಸಂಭಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಈಗಾಗಲೇ ಸೂಚಿಸಿದ್ದು ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. 

ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜಡಿಮಳೆಯು ಆಗುತ್ತಿದ್ದು ಇದರ ಹಿನ್ನಲೆ ಜಿಲ್ಲೆಯ ರೈತರಿಗೆ ಸಾಕಷ್ಟು ಹಾನಿಯುಂಟಾಗಿದೆ. ಒಂದು ಅಂದಾಜಿನ ಪ್ರಾಕಾರ ಒಟ್ಟು ಒಂದು ಎಕ್ಕರಿಗೆ 1500 ಪ್ರಕಾರ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರ ಘೋಷಿಸಿರುವುದು ರೈತರಿಗೆ ತಮಗಾಗಿರುವ ನಷ್ಟದ ಪರಿಹಾರವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ಪರಿಹಾರದ ಹಣ ಹೆಚ್ಚಿಸಬೇಕೆಂಬ ವಿಚಾರವಾಗಿ ಎಲ್ಲ ಪಕ್ಷಗಳು ಒಂದಾಗಿ ರೈತರಿಗಾಗಿರುವ ನಷ್ಟವನ್ನು ನಷ್ಟದ ಪರಿವಾರವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ತಿಳಿಸಿದರು. ಈ ವಿಷಯವಾಗಿ ನಾನು ಮುಖ್ಯ ಮಂತ್ರಿಗಳ ಬಳಿ ನಾನು ಮಾತನಾಡಿದ್ದು ಆದಸ್ಟು ಶೀಘ್ರದಲ್ಲಿ ಪರಿಹಾರ ನೀಡುವುದಾಗಿ ಬರವಸೆ ನೀಡಿದ್ದಾರೆ. 

ಅದರಲ್ಲೂ ಸಣ್ಣ ಇಡುವಳಿ ರೈತರಿಗೆ ಪರಿಹಾರ ಪ್ರಮಾಣವನ್ನು ಹೆಚ್ಚಿಸುವಂತೆ ಜೊತೆಯಲ್ಲಿ ತುರ್ತಾಗಿ ಪರಿಹಾರ ಬಿಡುಗಡೆ ಮಾಡುವಂತೆ ಚರ್ಚಿಸಲಾಗಿದೆ. ಮಾತು ಮುಂದುವರೆಸಿ ಸಚಿವ ಮಧುಬಂಗಾರಪ್ಪ ಬಿ.ಜೆ.ಪಿ ಪಕ್ಷದ ಮೇಲೆ ಮಾತಿನ ಛಾಟಿ ಪ್ರಾರಂಬಿಸಿದರು, ಈ ಪಕ್ಷವು ಮಂಗಾ ಮೊಸರು ತಿಂದ ಮೇಕೆಯ ಬಾಯಿಗೆ ಒರಿಸಿತ್ತು ಎಂಬ ಗಾದೆಯಂತೆ ಅಡಿಕೆ ಕೊಳೆರೋಗದ ವಿಚಾರವಾಗಿ, ಶಿವಮೊಗ್ಗ ಸಂಸದರಾಗಿರುವ ಬಿ.ವೈ ರಾಘವೇಂದ್ರರವರು ಕೇವಲ ಕೇಂದ್ರದ ನಾಯಕರೊಂದಿಗೆ ಪೋಟೋ ತೆಗಿಸಿಕೊಳ್ಳುವುದು ಬಿಟ್ಟರೆ ಬೇರೆನೂ ಕೆಲಸ ಮಾಡಿಲ್ಲ. ಇದರಿಂದ ಶಿವಮೊಗ್ಗ ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರದಿಂದ ವಂಚಿಸಿದಂತಾಗಿದೆ. ಜಿಲ್ಲೆಯಲ್ಲಿ ತೆಂಗು ಅಭಿವೃದ್ದಿ ಬೋರ್ಡ್‌ ಸ್ಥಾಪಿಸುವಂತೆ ಮುಖ್ಯ ಮಂತ್ರಿಗಳ ಬಳಿಯಲ್ಲಿ ಈಗಾಗಲೆ ಚರ್ಚೆ ನಡೆಸಲಾಗಿದೆ. 

ಶಿವಮೊಗ್ಗ ಜಿಲ್ಲೆಯ ಎಲ್ಲಾ 26 ತಲ್ಲೂಕುಗಳ ರಸ್ತೆಗಳ ದುರಸ್ತಿಗಾಗಿ ರಾಜ್ಯ ಸರ್ಕಾರ 50 ಕೋಟಿ ಮೀಸಲಿಡಲಾಗಿದೆ. ಎಂದು ಸಚಿವರು ಹೇಳಿದರು. ನಂತರ 800 ಕೆ.ಪಿ.ಎಸ್‌ (ಕರ್ನಾಟಕ ಪಬ್ಲಿಕ್‌ ಶಾಲೆ) ಸ್ಥಾಪಿಸಲು ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗಾಗಿ ಅಕ್ಟೋಬರ್‌ ತಿಂಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಇತರೆ ನಾಯಕರೊಂದಿಗೆ ಶಂಕುಸ್ಥಾಪನೆ ಮಾಡಲಾಗುವುದು, ನನ್ನ ಅವಧಿಯಲ್ಲಿ ಶಿವಮೊಗ್ಗ ನಗರದ ಜೊತೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುವುದು. ಇನ್ನು ಶಿವಮೊಗ್ಗ ಸಂಸದರು ಕೇವಲ ಮೋದಿಯವರನ್ನು ಶೇರ್ ಎಂದು ಬಿಂಬಿಸುವ ಕೆಲಸದಲ್ಲಿ ತೊಡಗಿದ್ದು ಬೇಟಿ ಬಚಾವೊ ಬೇಟಿ ಪಡಾವೊ ಎಂದು ಹೇಳಿಕೊಂಡು ಓಡಾಡುತ್ತಾರೆ. ಆದರೆ ಇದು ಕೇವಲ ಘೋಷಣೆಯಾಗಿ ಉಳಿದಿದ್ದು ಇದನ್ನು ಕಾರ್ಯರೂಪದಲ್ಲಿ ತರುವುದಕ್ಕೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲಾ. ಇವರು ಪ್ರಚಾರಕ್ಕಾಗಿ ಮಾತ್ರ ಘೋಷಣೆಗಳಾಗಿದೆ ಎಂದು ಟೀಕಿಸಿದರು.

 

 ನಮ್ಮ ಪಕ್ಷದ ಪ್ರಮುಖರಾಗಿರುವ ರಾಹುಲ್‌ ಗಾಂಧಿ ಯವರು ತಮ್ಮ ಅಜ್ಜಿ ಹಾಗೂ ತಂದೆಯನ್ನು ದೇಶಕ್ಕಾಗಿ ಕಳೆದುಕೊಂಡಿದ್ದಾರೆ, ಇವರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ(ಪಪ್ಪು-ಪೆದ್ದಾ ಇನ್ನಿತರೆ ಪದಗಳಿಂದ) ಲೇವಡಿ ಮಾಡುತ್ತಾ ನಮ್ಮ ನಾಯಕನನ್ನು ಟೀಕಿಸುವುದು ಸರಿಯಲ್ಲಾ, ಆದರೆ ಬಿ.ಜೆ.ಪಿ ಮತ ಕಳ್ಳತನದ ಬಗ್ಗೆ ಚುನಾವಣಾ ಆಯೋಗದ ಸಮರ್ಥನೆಗೆ ನಿಂತಿರೋದು ಎಷ್ಟು ಸರಿ..? ಇದರ ಬಗ್ಗೆ ನಮ್ಮ ನಾಯಕರು ದೂರು ನೀಡಿದರೆ ಚುನಾವಣಾ ಆಯೋಗ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ. ಬಿ.ಜೆ.ಪಿ ಪಕ್ಷದ ಕೈ ಗೊಂಬೆಯತ್ತೆ ವರ್ತಿಸುತ್ತಿದೆ. ಈ ವಿಷಯವಾಗಿ ದೇಶದ ಜನರು ಬಿ.ಜೆ.ಪಿ ಪಕ್ಷದ ವಿರುದ್ಧ ಅಸಮಧಾನ ಪ್ರಾರಂಭವಾಗಿದೆ.

 

ಇನ್ನು ಕೆ.ಎಸ್‌ ಈಶ್ವರಪ್ಪನವರು ಧರ್ಮಸ್ಥಳದ ಪರ ಹೋರಾಟದಲ್ಲಿ ಮುಂದಾಗಿದ್ದು ಇದಕ್ಕೆ ನನ್ನ ವಿರೋಧವಿಲ್ಲ ಆದರೆ ಜೆ.ಡಿ.ಎಸ್‌ ಪಕ್ಷದ ನಿಕಿಲ್‌ ಕುಮಾರ ಸ್ಥಾಮಿ ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದಕ್ಕೆ ಕಾರಣ ತಮ್ಮದೇ ಕುಟುಂಬದ ಪ್ರಜ್ವಲ್‌ ರೇವಣ್ಣ ಸಾವಿರಾರು ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಜೀವನ ಹಾಳುಮಾಡಿದ್ದು ಈ ವಿಷಯವಾಗಿ ಯಾವುದೇ ಹೋರಾಟವಾಗಲಿ ಅಥವ ದ್ವನಿಯನ್ನು ಎತ್ತಿಲ್ಲಾ. ಕೇವಲ ರಾಜಕೀಯ ಲಾಭಕ್ಕಾಗಿ ಸೌಜನ್ಯ ವಿಷಯನ್ನು ಮುದಿಡುತ್ತಿರೋದು ಎಷ್ಟು ಸರಿ ಎಂದು ಪ್ರಶ್ನೆಮಾಡಿದರು. ಜೆ.ಡಿ.ಎಸ್‌ ಪಕ್ಷದ ಬಗ್ಗೆ ನನಗೆ ಸರಿಯಾಗಿ ಗೊತ್ತಿದೆ ಏಕೆಂದರೆ ನಾನೂ ಕೂಡ ಅಲ್ಲೇ ಇದ್ದುಬಂದವನು ಈ ಕಾರಣ ನನಗೆ ಅಲ್ಲಿನ ಒಳಮರ್ಮ ನನಗೆ ಗೊತ್ತಿದೆ ಎಂದು ಜೆ.ಡಿ,ಎಸ್‌ ಪಕ್ಷವನ್ನು ಟೀಕಿಸಿದರು. 

 

ಇನ್ನು ಬಿ.ಜೆ.ಪಿ ಪಕ್ಷ ಕೇವಲ ಧರ್ಮದ ವಿಷಯದಲ್ಲಿ ಮಾತ್ರವೇ ರಾಜಕೀಯ ಮಾಡುತ್ತಾರೆ. ಸಂಸದರು ಕಲ್ಯಾಣ ಕರ್ನಾಟಕದಲ್ಲಿ ಉಪನ್ಯಾಸಕರ ಕೊರತೆ ಇದೆ ಎಂದು ತಿಳಿದಿದ್ದರೂ ಸಹಿತ ದ್ವನಿಯತ್ತುತಿಲ್ಲ. ಕೇಂದ್ರದಿಂದ ಬರುವಂತಹ ಅನುದಾನವನ್ನು ತರುವಲ್ಲಿ ವಿಪಲರಾಗಿದ್ದಾರೆ, ನಾನು ನನ್ನ ಕಾರ್ಯಾವದಿಯಲ್ಲಿ 18 ಸಾವಿರ ಶಿಕ್ಷಕರ ಭರ್ತಿಕೆಲಸವನ್ನು ಪೂರೈಸಿದ್ದೇನೆ. ಎಂದು ಸಂಸದರ ವಿರುದ್ದ ಮಾತಿನ ಛಾಟಿ ಬೀಸಿದರು.

ಇನ್ನು ಈ ಪತ್ರಿಕಾಗೋಷ್ಠಿಯಲ್ಲಿ ಸಚಿವರ ಜೊತೆಗೆ ಪಕ್ಷದ ಜಿಲ್ಲಾಧ್ಯಕ್ಷರಾದ ಆರ್‌.ಪ್ರಸನ್ನ ಕುಮಾರ್‌, ಕಲಗೋಡು ರತ್ನಾಕರ್‌, ಶೀನಿವಾಸ್‌ ಕರಿಯಣ್ಣ, ಬಲ್ಕಿಶ್‌ ಬಾನು, ಮತ್ತು ಕಾಂಗ್ರೆಸ್‌ ಪಕ್ಷದ ಪ್ರಮುಖರು ಉಪಸ್ತಿತರಿದ್ದರು.

ಅಣ್ಣಪ್ಪ.ಎಂ ಸಿಟಿರೌಡ್ಸ್‌ ಪತ್ರಿಕೆ ಶಿವಮೊಗ್ಗ.