ಶಿವಮೊಗ್ಗ : ಸರ್ಕಾರಿ ಕಚೇರಿಗಳ ಕಂಪ್ಯೂಟರ್ ಲಾಗಿನ್ ಹಾಗೂ ಉಪಯೋಗವನ್ನು ಸಂಬಂಧಪಟ್ಟ ಸರ್ಕಾರಿ ನೌಕರನೆ ಉಪಯೋಗಿಸಬೇಕೆಂಬುದು ಸರ್ಕಾರದ ನಿಯಮಗಳು ಹಾಗೂ ಷರತ್ತುಗಳು ಹೊಂದಿರುತ್ತವೆ. ಸಾರ್ವಜನಿಕರಿಗೆ ಸಂಬಂಧಪಟ್ಟಂತ ದಾಖಲಾತಿಗಳು ಸರ್ಕಾರಿ ಕಚೇರಿಗಳ ಕಂಪ್ಯೂಟರ್ಗಳಲ್ಲಿ ದಾಖಲಾಗಿರುತ್ತವೆ.

ಸರ್ಕಾರದ ನಿಯಮದಂತೆ ಯಾವುದೇ ರೀತಿಯಲ್ಲಿ ಸಾರ್ವಜನಿಕರ ಕಡತಗಳ ಹಾಗೂ ಇಲಾಖೆಯ ಸಂಬಂಧ ಪಟ್ಟ ದಾಖಲಾತಿಗಳನ್ನು ಖಾಸಗಿ ವ್ಯಕ್ತಿಗೆ ಬದಲಾವಣೆ ಮಾಡಲು ಅಥವಾ ತಿದ್ದುಪಡಿ ಮಾಡಲು ಯಾವುದೇ ರೀತಿಯ ಹಕ್ಕುಗಳು ಇರುವುದಿಲ್ಲ.
ಆದರೆ ಶಿವಮೊಗ್ಗ ತಾಲೂಕು ಕಚೇರಿಯ ಸರ್ವೆ ವಿಭಾಗದಲ್ಲಿ ಸರ್ಕಾರಿ ನೌಕರನ ಆಸನದಲ್ಲಿ. ಖಾಸಗಿ ವ್ಯಕ್ತಿ ಕುಳಿತುಕೊಂಡು ತನಗೆ ಇಷ್ಟ ಬಂದಂತೆ ತನ್ನ ಕಡತಗಳನ್ನು ಬದಲಾವಣೆ ಮಾಡಿಕೊಂಡು ಕಂಪ್ಯೂಟರ್ನಲ್ಲಿ ತನಗೆ ಬೇಕಾದಂತಹ ದಾಖಲಾತಿಗಳನ್ನು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾನೆ ಎಂದು ಕಚೇರಿಗೆ ಬಂದಂತ ಸಾರ್ವಜನಿಕರ ದೂರಾಗಿದೆ.

ಸರ್ಕಾರದ ನಿಯಮದ ಪ್ರಕಾರ ಸರ್ಕಾರಿ ಕಚೇರಿಗಳ ಸರ್ಕಾರಿ ನೌಕರರ ಹೊರತುಪಡಿಸಿ ಖಾಸಗಿ ವ್ಯಕ್ತಿಗಳು ಸರ್ಕಾರದ ಸಂಬಂಧಪಟ್ಟ ಸರ್ಕಾರಿ ಇಲಾಖೆಯ ದಾಖಲಾತಿಗಳನ್ನು ಹಾಗೂ ಕಂಪ್ಯೂಟರ್ಗಳ ಪರಿಶೀಲನೆ ಅಥವಾ ಶೋಧನೆ ಮಾಡುವ ಹಕ್ಕನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿರುವುದಿಲ್ಲ.
ಶಿವಮೊಗ್ಗ ತಾಲೂಕು ಕಚೇರಿಯ ಸರ್ವೆ ವಿಭಾಗದಲ್ಲಿ ಈ ರೀತಿಯಾದ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಆಗುತ್ತಿದ್ದರು ಸಂಬಂಧ ಪಟ್ಟಂತಹ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ. ಖಾಸಗಿ ವ್ಯಕ್ತಿಗಳಿಗೆ ಸರ್ಕಾರವನ್ನೇ ಅಥವಾ ಸರ್ಕಾರದ ಕಚೇರಿಯನ್ನೇ ಮಾರಾಟ ಮಾಡಿದ್ದಾರೆ ಎಂಬುವ ಸಂಶಯ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಶಿವಮೊಗ್ಗ ತಾಲೂಕು ಕಚೇರಿಯ ಎ ಡಿ ಎಲ್ ಆರ್. ಸರ್ವೆ ವಿಭಾಗದಲ್ಲಿ ಖಾಸಗಿ ವ್ಯಕ್ತಿ ಸರ್ಕಾರಿ ಕಚೇರಿಯ ಸರ್ಕಾರಿ ನೌಕರರ ಜಾಗದಲ್ಲಿ ಕುಳಿತುಕೊಂಡು , ಕಂಪ್ಯೂಟರ್ನಲ್ಲಿ ತನಗೆ ಬೇಕಾದ ರೀತಿಯಲ್ಲಿ ದಾಖಲಾತಿಗಳನ್ನು ತಿದ್ದುಪಡಿ ಮಾಡಿಕೊಂಡಿರುವುದನ್ನು ಕಚೇರಿಗೆ ಬಂದಂತಹ ಸಾರ್ವಜನಿಕರು, ದೃಶ್ಯ ಸೆರೆಹಿಡಿದು, ( ಸಿಟಿ ರೌಂಡ್ಸ್) ಪತ್ರಿಕೆಯ ಸಂಪಾದಕರಿಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ರೀತಿಯ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿರುವ ಸರ್ಕಾರಿ ನೌಕರನ ಮೇಲೆ ಹಾಗೂ ಖಾಸಗಿ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ…!


More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…