City Rounds News

Kannada News Website

ಲೋಕಾಯುಕ್ತ ಬಲಗೆ ಬಿದ್ದ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಎ.ಪಿ …..!

ಶಿವಮೊಗ್ಗ: ಆಗಸ್ಟ್ 29:   ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾ ಅಧಿಕಾರಿ ಶಶಿಧರ್ ರವರು ಆಶ್ರಯ ಬಡಾವಣೆಯ ಮನೆಯೋಂದರ ಖಾತೆ ಬದಲಾವಣೆ ಮಾಡಿಕೊಡಲು 10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ ಮಹಮ್ಮದ್ ಆಸಿಫ್ ಉಲ್ಲಾ ಸನ್ ಆಫ್ ಅಬ್ದುಲ್ ಮಜಿದ್ ಎಂಬ ವ್ಯಕ್ತಿ ನೀಡಿದ ದೂರಿನ ಅನ್ವಯ.

 

ಲೋಕಾಯುಕ್ತ ಪೊಲೀಸ್ ಅಧಿಕಾರಿ ಇಂದು ದಿನಾಂಕ: 29- 8 -2025 ರ ಸಂಜೆ 4 :15 ಗಂಟೆಗೆ ಶಿವಮೊಗ್ಗ ನಗರದ ನೆಹರು ರಸ್ತೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿರುವ ಆಶ್ರಯ ಕಚೇರಿಯಲ್ಲಿ ಶಶಿಧರ್ ರವರು ಮೊಹಮ್ಮದ್ ಆಸಿಫ್ ಉಲ್ಲಾ ರವರಿಂದ 10,000 ಲಂಚ ಸ್ವೀಕರಿಸುವ ವೇಳೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿತ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಎಪಿ ಅವರಿಂದ ಲಂಚದ ಹಣವನ್ನು ವಶಪಡಿಸಿಕೊಂಡು ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಎ.ಪಿ. ಅವರನ್ನು ಹೆಚ್ಚಿನ ತನಿಖೆಗಾಗಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ಕಾರ್ಯಾಚರಣೆಯನ್ನು ಪೊಲೀಸ್ ಅಧಿಕಾರಿಯಾದ ಮಂಜುನಾಥ್ ಚೌದರಿ, ಪೊಲೀಸ್ ಉಪಾಧ್ಯಕ್ಷಕರಾದ ಬಿಪಿ ಚಂದ್ರಶೇಖರ್, ಇನ್ಸ್ಪೆಕ್ಟರ್ ರುದ್ರೇಶ್ ಕೆಪಿ, ಗುರುರಾಜ್ ಎಂ ಮೈಲಾರ, ವೀರಬಸಪ್ಪ ಎಲ್ ಕುಸಲಾಪುರ, ಯೋಗೇಶ್ ಜಿಸಿ ಪ್ರಶಾಂತ್ ಕುಮಾರ್ ಟೀಕಪ್ಪ ಸಿ.ಎಚ್. ಸಿ. ಹಾಗೂ ಮುಂತಾದ ಸಿಬ್ಬಂದಿಗಳು ಲೋಕಾಯುಕ್ತ ದಾಳಿಯಲ್ಲಿ ಹಾಜರಿದ್ದರು ಎಂದು ತಿಳಿದುಬಂದಿದೆ.