City Rounds News

Kannada News Website

ಸಂಚಾರಿ ದಂಡ ಶೇಕಡಾ 50% ಪಾವತಿ ಅಭಿಯಾನ: ಶಿವಮೊಗ್ಗ ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆ…!

ಶಿವಮೊಗ್ಗ: ಆಗಸ್ಟ್ 29 : ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಸಂಖ್ಯೆ 27 ಟಿಡಿಓ 2023 ಬೆಂಗಳೂರು ದಿನಾಂಕಃ 21-08-2025 ರ ರೀತ್ಯಾ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇಕಡಾ 50% ರಷ್ಟು ರಿಯಾಯಿತಿಯನ್ನು ನೀಡಿ ಆದೇಶಿಸಿರುತ್ತದೆ. 

ಶಿವಮೊಗ್ಗ ಜಿಲ್ಲೆಯ ಸಂಚಾರ ಪೊಲೀಸರಿಂದ ದಿನಾಂಕಃ 23-08-2025 ರಿಂದ ಈ ವರೆಗೆ ಒಟ್ಟು 5709 ಇ-ಚಲನ್ ಗಳನ್ನು ಮುಕ್ತಾಯ ಮಾಡಿ ಒಟ್ಟು ₹ 23,49,450/- ದಂಡದ ಹಣವನ್ನು ಸಂಗ್ರಹಿಸಲಾಗಿದೆ.  

ಸಾರ್ವಜನಿಕರಿಂದ ಈ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ದೊರತಿದ್ದು, ಈ ಆದೇಶವು ದಿನಾಂಕಃ 23-08-2025 ರಿಂದ 12-09-2025 ರವರೆಗೆ ಜಾರಿಯಲ್ಲಿರಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಿದೆ.