City Rounds News

Kannada News Website

ಹಿಂದೂ ಮಹಾ ಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಪೊಲೀಸ್ ಬಂದೋಬಸ್ತ್…!

ದಿನಾಂಕ : 06-09-2025 ರಂದು ಶಿವಮೊಗ್ಗ ನಗರದಲ್ಲಿ ನಡೆಯುವ ಹಿಂದೂ ಮಹಾ ಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ (ರಾಜ ಬೀದಿ ಉತ್ಸವ) ಬಂದೋಬಸ್ತ್ ಕರ್ತವ್ಯಕ್ಕೆ 05 ಪೊಲೀಸ್ ಅಧೀಕ್ಷಕರು, 02 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 21 ಪೊಲೀಸ್ ಉಪಾಧೀಕ್ಷಕರು, 58 ಪೋಲಿಸ್ ನಿರೀಕ್ಷಕರು, 65 ಪೊಲೀಸ್ ಉಪ ನಿರೀಕ್ಷಕರು, 198 ತರಬೇತಿಯಲ್ಲಿರುವ ಪೊಲೀಸ್ ಉಪ ನಿರೀಕ್ಷಕರು, 114 ಸಹಾಯಕ ಪೊಲೀಸ್ ನಿರೀಕ್ಷಕರು, 2259 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 692 ಗೃಹರಕ್ಷಕ ದಳ ಸಿಬ್ಬಂದಿಗಳು, 01 RAF ತುಕಡಿ, 01 SAF ತುಕಡಿ 08 DAR ತುಕಡಿ, 01 QRT ತುಕಡಿ ಮತ್ತು 10 KSRP ತುಕಡಿಗಳನ್ನು ನಿಯೋಜಿಸಲಾಗಿರುತ್ತದೆ.

 

    ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಸ್. ಪಿ. ಮಿಥುನ್ ಕುಮಾರ್ ಜಿ.ಕೆ , ರವರ ನೇತೃತ್ವದಲ್ಲಿ ಈ ದಿನ ದಿನಾಂಕಃ 05-09-2025 ರಂದು ಸಂಜೆ ಶಿವಮೊಗ್ಗ ನಗರದ ಜಿಲ್ಲಾ ಸಶಸ್ತ್ರ ಕವಾಯತು ಮೈದಾನದಲ್ಲಿ ಬ್ರೀಫಿಂಗ್ ಸಭೆ ನಡೆಸಿ, ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

   ನಂತರ ಎಸ್. ಪಿ. ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ರವರ ನೇತೃತ್ವದಲ್ಲಿ, ಬಂದೋಬಸ್ತ್ ಗೆ ನೇಮಕವಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಸಶಸ್ತ್ರ ಪೊಲೀಸ್ ಬಲದ ತುಕಡಿಗಳು ಹಾಗೂ ಗೃಹರಕ್ಷಕ ಸಿಬ್ಬಂದಿಗಳ ತಂಡದೊಂದಿಗೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ಅನ್ನು ನಡೆಸಲಾಯಿತು ಎಂದು ತಿಳಿಸಿದರು.

 

  ನಂತರ ಡಾ. ರವಿಕಾಂತೆ ಗೌಡ ಐಪಿಎಸ್ ಮಾನ್ಯ ಐ ಜಿ ಪಿ, ಪೂರ್ವ ವಲಯ ದಾವಣಗೆರೆ ರವರು ಶಿವಮೊಗ್ಗ ಜಿಲ್ಲಾ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಪೊಲೀಸ್ ನಿರೀಕ್ಷಕರು ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿ ಗಳೊಂದಿಗೆ ಸಭೆಯನ್ನು ನಡೆಸಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.