City Rounds News

Kannada News Website

 ದೇವರ ವಿಗ್ರಹವನ್ನು ವಿರೂಪ ಗೊಳಿಸಿದ ಸಂಬಂಧ ದೂರು: 4 ಗಂಟೆ ಅಂತರದಲ್ಲಿ  ಆರೋಪಿಯ ಬಂಧನ…!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ. ಎಂ 

 

ಸೊರಬ: ಸೊರಬ ತಾಲೂಕು ಆನವಟ್ಟಿ ಠಾಣೆ ವ್ಯಾಪ್ತಿಯ ಕುಬಟೂರು ಗ್ರಾಮದಲ್ಲಿ ಇರುವಂತ ಶ್ರೀ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ನರಸಿಂಹಸ್ವಾಮಿ ಮೂರ್ತಿಯನ್ನು ಯಾರೋ ದುಷ್ಕರ್ಮಿಗಳು ವಿರೂಪ ಗೊಳಿಸಿರುತ್ತಾರೆ ಎಂಬ ದೂರಿನ ಮೇರೆಗೆ ಈ ಸಂಬಂಧ ಪೊಲೀಸರು ದೂರು ದಾಖಲಿಸಿ ಕೊಂಡಿರುತ್ತಾರೆ. 

ದಿನಾಂಕ 21-7-2025 ರಂದು ಮಧ್ಯಾಹ್ನ 2 ಗಂಟೆಯ ಇಂದ ಸಂಜೆ 4:00 ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ವಿಗ್ರಹವನ್ನು ವಿರೂಪ ಗೊಳಿಸಿದ್ದಾರೆ ಎಂದು ಬಂದ ದೂರ ಹಿನ್ನಲೆ ದಿನಾಂಕ 22 -07- 2025 ರಂದು ಬೆಳಗ್ಗೆ 10 ಗಂಟೆಗೆ ಮಾಹಿತಿ ಬಂದಿದ್ದು ಕೂಡಲೇ ಸ್ಥಳಕ್ಕೆ ಆನವಟ್ಟಿ ಪೊಲೀಸ್ ಠಾಣೆಯ ಪಿ.ಎಸ್.ಐ ಚಂದನ್ ಹಾಗೂ ಸಿಬ್ಬಂದಿಯವರು ಮತ್ತು ಡಿವೈಎಸ್ಪಿ ಶಿಕಾರಿಪುರ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ. 

 ಎಸ್ಪಿ ಮಿಥುನ್ ಕುಮಾರ್ ಜಿ ಕೆ ರವರ ಮಾರ್ಗದರ್ಶನದಂತೆ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡುವಂತೆ ಪಿ,ಎಸ್,ಐ ರವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿರುತ್ತಾರೆ. ಅದರಂತೆ ಪಿ,ಎಸ್,ಐ ಹಾಗೂ ಸಿಬ್ಬಂದಿಯವರು ವಿಗ್ರಹ ವಿರೂಪ ಗೊಳಿಸಿ ದಂತಹ ಆರೋಪಿಯಾದ ಕೋಟೇಶ್ವರ ಬಿನ್ ಮಹಾಬಲೇಶ್ವರ 32 ವರ್ಷ, ಲಿಂಗಾಯಿತ ಜಾತಿ, ವಾಸ ಗೋಂದಿ ಗ್ರಾಮ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ, ಈತನನ್ನು ಪೊಲೀಸರಿಗೆ ಮಾಹಿತಿ ಬಂದ ನಾಲ್ಕು ಗಂಟೆ ಒಳಗಾಗಿ ಆರೋಪಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿರುತ್ತಾರೆ ಹಾಗೂ ಇತನ ಮೇಲೆ ನಿರ್ದಾಕ್ಷಣವಾಗಿ ಸೂಕ್ತ ಕಾನೂನು ಕ್ರಮವನ್ನು ಜರುಗಿ ಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಆರೋಪಿತ ನನ್ನು ಪತ್ತೆ ಮಾಡಿದ ಪಿ,ಎಸ್,ಐ ಮತ್ತು ತಂಡಕ್ಕೆ ಎಸ್ಪಿ ರವರು ಪ್ರಶಂಸೆಯನ್ನು ತಿಳಿಸಿರುತ್ತಾರೆ.