ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎಂ
ಶಿವಮೊಗ್ಗ : ಜೂಲೈ – 23, ನಗರದ ಶರಾವತಿನಗರ ವಾರ್ಡಿನ ಚಾನೆಲ್ ಏರಿಯಾದ ಮನೆ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಮೂರರಿಂದ ನಾಲ್ಕು ಜನರಿಗೆ ಗಂಭೀರವಾದ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಿರನ್ ಸಾಬ್ ಎಂಬುವವರ ಮನೆಯ ಅಡುಗೆ ಅನಿಲ ತುಂಬಿರುವ ಸಿಲಿಂಡರ್ ಸ್ಪೋಟಗೊಂಡಿದೆ. ಇಂದು ಸಂಜೆ ಸುಮಾರು 6:30 ರ ಸುಮಾರಿಗೆ ಪೀರನ್ ಸಾಬ್ ರವರ ಹೆಂಡತಿ ಹಾಗೂ ಇವರ ತಾಯಿ ಮನೆಯಲ್ಲಿದ್ದ ಸಮಯದಲ್ಲಿ ಅಡುಗೆಗೆ ಬಳಸುವ ಸಿಲಿಂಡರ್ ಸ್ಪೋಟಗೊಂಡು ಮನೆಯ ಚಾವಣಿ ಹಾಗೂ ಮನೆಯಲ್ಲಿದ್ದ ಅನೇಕ ವಸ್ತುಗಳು ಹಾನಿಗೆ ಒಳಗಾಗಿದ್ದು, ಸಿಲಿಂಡರ್ ಸ್ಪೋಟಗೊಂಡ ರಭಸಕ್ಕೆ ಮನೆಯ ಬಾಗಿಲುಗಳು ಗಾಜಿನ ಕಿಟಕಿಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಗೀಜರ್ ಇನ್ನೂ ಅನೇಕ ರೀತಿಯ ಮನೆ ಬಳಕೆಯ ವಸ್ತುಗಳು ಹಾನಿಯಾಗಿದೆ. ಸಿಲಿಂಡರ್ ಸ್ಫೋಟಕ್ಕೆ ಮನೆಯಲ್ಲಿ ಇದ್ದವರಿಗೆ ಗಂಭೀರವಾದ ಗಾಯಗಳಾಗಿದ್ದು ತಲೆ ಕೈಕಾಲುಗಳಿಗೆ ತೀವ್ರವಾದ ಪೆಟ್ಟು ಗಳಾಗಿದ್ದು ಸ್ಥಳೀಯರ ಸಹಾಯದಿಂದ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಅಡುಗೆಗೆ ಬಳಸುವ ಅನಿಲ ತುಂಬಿದ ಸಿಲಿಂಡರ್ನ ಹಾಗೂ ರೇಗುಲೇಟರ್ಗಳನ್ನು ಪೈಪ್ಗಳನ್ನು ಸರಿಯಾದ ಸಮಯಕ್ಕೆ ಪರೀಕ್ಷಿಸಿ, ಬದಲಾವಣೆ ಮಾಡಿಕೊಂಡರೆ ಈ ರೀತಿಯ ಅನಾಹುತಗಳು ಸಂವಿಸುವುದು ತಡೆಯಬಹುದೆಂದು ಅನೇಕ ಬಾರಿ ಗ್ಯಾಸ್ ಏಜೆನ್ಸಿ ಯವರಾಗಲಿ, ಅಗ್ನಿಶಾಮಕ ದಳದವರು ಆಗಲಿ ಸಾರ್ವಜನರಿಗೆ ತಿಳಿಸಿರುತ್ತಾರೆ. ಆದರೆ ಸಾರ್ವಜನಿಕರ ನಿರ್ಲಕ್ಷದ ಕಾರಣದಿಂದ ಈ ರೀತಿಯ ಸಾವು ನೋವುಗಳು ಉಂಟಾಗುತ್ತಿ ರುವುದ್ದಕ್ಕೆ ಸಿಲಿಂಡರ್ನ ಪೈೈಪ್ ಹಾಗೂ ರೆಗ್ಯುಲೇಟರ್ ಬದಲಾವಣೆೆೆಯಯ ರ್ನಿರ್ಲಕ್ಷವೇ ಕಾರಣ…

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…