City Rounds News

Kannada News Website

ಒಸಿ, ಸಿಸಿ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ತೀರ್ಪು …?

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ. ಎಂ

 

ಶಿವಮೊಗ್ಗ: ಜೂಲೈ -18, ಹೊಸಮನೆ ನಿರ್ಮಿಸಿ ವಿದ್ಯುತ್ ಸಂಪರ್ಕ ಪಡೆಯಲು ಸುಪ್ರೀಂಕೋರ್ಟ್ ಒಸಿ ಸಿಸಿ ಪ್ರಮಾಣಪತ್ರಗಳು ಕಡ್ಡಾಯ ಎಂದು ಆದೇಶ ಹೊರಡಿಸಲಾಗಿತ್ತು. ಈ ರೀತಿಯ ಆದೇಶದಿಂದ ರಾಜ್ಯದಲ್ಲಿ ಲಕ್ಷಾಂತರ ನಿವೇಶನಗಳು ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ, ಒಳಚರಂಡಿ ಸಂಪರ್ಕ, ನೀರಿನ ಸಂಪರ್ಕ, ಪಡೆಯಲು ಸಾಧ್ಯವಾಗದೆ ಸಾರ್ವಜನಿಕರು ಸಂಕಷ್ಟದಲ್ಲಿ ಸಿಲುಕಿದ್ದರು.

 ಸುಮಾರು ಎರಡು ಮೂರು ತಿಂಗಳಿಂದ ಸಂಕಷ್ಟದಲ್ಲಿದ್ದಂತಹ ನಿವೇಶನದಾರರಿಗೆ, ಈ ರೀತಿಯ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ, 30 × 40 (1,200 ಚದರಡಿ) ಹಾಗೂ ಅದಕ್ಕಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಓಸಿ ಹಾಗೂ ಸಿಸಿ ಅಗತ್ಯವಿರುವುದಿಲ್ಲ. 1,200 ಚದರಡಿಗಿಂತ ಹೆಚ್ಚಿರುವ ನಿವೇಶನಗಳಿಗೆ ಒಸಿ ಸಿಸಿ ಕಡ್ಡಾಯ ನಿಯಮ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಇನ್ನು ಮುಂದೆ 12 ಚದುರಡಿಗಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಒಸಿ ಸಿಸಿ ಪ್ರಮಾಣ ಪತ್ರ ಅಗತ್ಯವಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಹಾಗೂ ರಾಜ್ಯ ಸರ್ಕಾರ ನಗರಾಭಿವೃದ್ಧಿ ಇಲಾಖೆಯ ನಿರ್ಧಾರಕ್ಕೆ ರಾಜ್ಯದ ಲಕ್ಷಾಂತರ ನಿವೇಶನದಾರರು ನಿಟ್ಟಿಸಿರು ಬಿಟ್ಟಂತಾಗಿದೆ. ಹಾಗೂ ಶೀಘ್ರದಲ್ಲೇ ಆದೇಶ ಹೊರಬೀಳಲಿದೆ.

ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ಇತ್ತೀಚಿಗಷ್ಟೇ ಬಿಬಿಎಂಪಿ, ಮೆಸ್ಕಾಂ, ಪೌರಾಡಳಿತ ನಿರ್ದೇಶನಾಲಯ, ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಗಳ ಜೊತೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವಿನಾಯತಿ ನೀಡುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅಭಿಪ್ರಾಯ ವ್ಯಕ್ತವಾಯಿತು. ಆದರೆ, ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ 2024ರ ಸೆಕ್ಷನ್ (1) ರಲ್ಲಿ ಸರ್ಕಾರ ಯಾವ ಕಟ್ಟಡದ ವರ್ಗವನ್ನು ಸ್ವಾಧೀನ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಬಹುದು ಎಂಬುದನ್ನು ತಿಳಿಸಬಹುದು ಎಂದು ನಿರ್ದಿಷ್ಟ ಪಡಿಸಲಾಗಿದೆ. 

ಆದರೆ, ಈ ಅವಕಾಶ ಬೃಹತ್ ಬೆಂಗಳೂರು ಮಹಾನಗರ ಕಾಯ್ದೆ 2020, ಕರ್ನಾಟಕ ಮಹಾನಗರ, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆಗಳ ಕಾಯ್ದೆ 1964 ರಲ್ಲಿ ಇರುವುದಿಲ್ಲ ಎಂಬುದರ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.

 

 

      ಅತಿ ಶೀಘ್ರದಲ್ಲೇ ನಿಮ್ಮ ಮುಂದೆ