City Rounds News

Kannada News Website

ಶಿವಮೊಗ್ಗ ನಗರದ ಉಷಾ ವೃತ್ತದಲ್ಲಿ ಹೆಚ್ಚಿದ ಸಂಚಾರ ದಟ್ಟಣೆ: ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಕೆ…!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ. ಎಂ 

ಶಿವಮೊಗ್ಗ : ಜೂಲೈ-16, ಇಂದು ನಗರದ ಉಷಾ ವೃತ್ತದಲ್ಲಿ, ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು ಹಾಗೂ ಸದರಿ ಸ್ಥಳದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸದೇ ಇದ್ದ ಕಾರಣ ವಾಹನ ಸಂಚಾರ ದಟ್ಟಣೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅನ್ನು ಈ ದಿನ ಅಳವಡಿಸಲಾಗಿದೆ.

 ಟ್ರಾಫಿಕ್ ಸಿಗ್ನಲ್ ಗೆ ಚಾಲನೆ ನೀಡಿದ ಎಸ್. ಪಿ. ಮಿಥುನ್ ಕುಮಾರ್ ಜಿ. ಕೆ. ರವರು ಸಂಚಾರಿ ನಿಯಮಗಳ ವಿಚಾರವಾಗಿ ಈ ಕೆಳಕಂಡಂತೆ ಮಾತನಾಡಿದರು. ಸಂಚಾರ ದಟ್ಟಣೆಯ ನಿಯಂತ್ರಣದ ಸಂಬಂಧ ಉಷಾ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅನ್ನು ಅಳವಡಿಸಲಾಗಿರುತ್ತದೆ. ಈ ಸ್ಥಳದಲ್ಲಿ ಸಿಗ್ನಲ್ ಲೈಟ್ ನ ಅಳವಡಿಕೆಯ ಅವಶ್ಯಕತೆ ತುಂಬಾ ಇದ್ದು, ಸಾರ್ವಜನಿಕರು, ಜನಪ್ರತಿನಿಧಿಗಳು, ಮುಖಂಡರು ಗಳ ಸಹಾ ಸಿಗ್ನಲ್ ಲೈಟ್ ಅಳವಡಿಕೆ ಮಾಡುವಂತೆ ಕೋರಿಕೆ ಸಲ್ಲಿಸಿದ್ದು, ಈ ಸಂಬಂಧ ಟ್ರಾಫಿಕ್ ಲೈಟ್ ಅನ್ನು ಅಳವಡಿಕೆ ಮಾಡಲಾಗಿರುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಒಳ್ಳೆಯ ಕೆಲಸವಾಗುತ್ತದೆ ಎಂಬುದಕ್ಕೆ, ಇದೇ ಒಂದು ಉತ್ತಮ ಉದಾಹರಣೆಯಾಗಿರುತ್ತದೆ. ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದಾರೆ, ಸಂಚಾರಿ ಟ್ರಾಫಿಕ್ ಸಿಗ್ನಲ್ ಇದೆ ಎಂದು ಮಾತ್ರ ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲನೆ ಮಾಡಿರಿ ಹಾಗೂ ನಿಮ್ಮ ಕುಟುಂಬ, ಸ್ನೇಹಿತರು, ಅವಲಂಬಿತರು ಮತ್ತು ನಿಮ್ಮ ಜೀವದ ಸುರಕ್ಷತೆಯ ಹಿನ್ನೆಲೆಯಲ್ಲಿ ಸಂಚಾರ ನಿಯಮ ಪಾಲನೆ ಅವಶ್ಯಕವಿರುತ್ತದೆ ಎಂದು ಹೇಳಿದರು.

ಕೇವಲ ಸೀಟ್ ಬೆಲ್ಟ್, ಹೆಲ್ಮೇಟ್ ಧರಿಸುವುದರಿಂದಲೇ ಎಷ್ಟೋ ಬಾರಿ ಮಾರಣಾಂತಿಕ ಅಪಘಾತ ತಡೆದು, ಪ್ರಾಣವನ್ನು ರಕ್ಷಿಸಲು ಸಾಧ್ಯವಿರುತ್ತದೆ. ಅಪಘಾತದಲ್ಲಿ ಹೆಚ್ಚಿನ ಸಂದರ್ಭ ಯುವಕರೇ ಪ್ರಾಣ ಕಳೆದುಕೊಳ್ಳುತ್ತಾರೆ, ಸಾಮಾನ್ಯ ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ಇದ್ದ ಸಂದರ್ಭದಲ್ಲಿ ಈ ರೀತಿಯ ಸಣ್ಣ ಪುಟ್ಟ ಅಪಘಾತಗಳು ಸಹಾ ಮಾರಣಾಂತಿಕ ಅಪಘಾತಗಳಾಗಿ ಪರಿಣಮಿಸುತ್ತವೆ. ಅಪಘಾತದಲ್ಲಿ ಕೇವಲ ಗಾಯಾಳುವಲ್ಲದೇ ಆತನ ಅವಲಂಬಿತರೂ ಸಹಾ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ , ಎಸ್.ಪಿ. ಮಿಥುನ್ ಕುಮಾರ್ ಜಿ. ಕೆ, ಶಿವಮೊಗ್ಗ ಸಂಚಾರ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ತಿರುಮಲೇಶ್, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ನವೀನ್ ಎಂ, ಪಿಎಸ್ಐ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ರವರು ಹಾಗೂ ಮುಖಂಡರುಗಳಾದ ಸಂತೋಷ್ ಬಳ್ಕೆರೆ, ಯೋಗೇಶ್, ಉದಯ್ ದಾಸ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.