ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರವರಿಂದ ಸಾರ್ವಜನಿಕರ ದೂರು ಪರಿಹಾರ ಸಭೆ…!

ಶಿವಮೊಗ್ಗ:ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ. ಎಂ 

ಶಿವಮೊಗ್ಗ : ಜುಲೈ-15, ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ರವರು ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಕಂದಾಯ ವಿಭಾಗದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ. 

ಶಿವಮೊಗ್ಗ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವಂತಹ ಕಂದಾಯ ವಿಭಾಗದಲ್ಲಿ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ.

ಅದರಂತೆಯೇ ಕಂದಾಯ ವಿಭಾಗದಲ್ಲಿನ ಎ ಖಾತ, ಬಿ ಖಾತ, ನೋಂದಣಿ, (ಇ-ಖಾತಾ) ಆಸ್ತಿ ಹಕ್ಕು ವರ್ಗಾವಣೆ, ಕಂದಾಯ ನಿಗದಿಪಡಿಸಿವಿಕೆ, ಹಾಗೂ ಇತರೆ ವಲಯಗಳ ಕಂದಾಯ ಶಾಖೆಗಳಲ್ಲಿನ ಬಾಕಿ ಇರುವಂತಹ ಕಡತಗಳ, ದೂರುಗಳ, ಪರಿಶೀಲನೆಯ ವಿಚಾರವಾಗಿ ಆಯುಕ್ತರಾದ ಮಾಯಣ್ಣ ಗೌಡರವರು ಆಯುಕ್ತರಿಂದ ಖುದ್ದಾಗಿ ವಲಯ ಕಚೇರಿಗಳ ಭೇಟಿ ಎಂಬ, (ಸಾಪ್ತಾಯಿಕ ಕಂದಾಯ ದೂರು ಪರಿಹಾರ ಸಭೆ) ನಡೆಸಲಿದ್ದಾರೆ. 

 ಸಾರ್ವಜನಿಕರು ಕಂದಾಯ ವಿಭಾಗದ ತಮ್ಮ ಆಸ್ತಿ ಹಕ್ಕು ವರ್ಗಾವಣೆ ಹಾಗೂ ಇನ್ನಿತರ ಕಡತಗಳ ವಿಚಾರವಾಗಿ ತಮ್ಮ ದೂರಗಳನ್ನು ಆಯುಕ್ತರ ಬಳಿ ದೂರು ನೀಡುವಂತಹ, ಹಾಗೂ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು. 

ವಿಶೇಷವಾಗಿ ಸಾರ್ವಜನಿಕರ ಪರ ಕರ್ತವ್ಯ ನಿರ್ವಹಿಸಲು, ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರವರು ವಲಯ 1, ವಿನೋಬನಗರ ಪ್ರತಿ ಮಂಗಳವಾರ ಮಧ್ಯಾಹ್ನ 3- 00 ರಿಂದ ಸಂಜೆ 5-00 ಗಂಟೆಯವರೆಗೆ, ವಲಯ 2….. ದೇವರಾಜ್ ಅರಸ್ ವಾಣಿಜ್ಯ ಸಂಕೀರ್ಣ, ಗೋಪಿ ಸರ್ಕಲ್, 

ಪ್ರತಿ ಗುರುವಾರ ಮಧ್ಯಾಹ್ನ 3 ರಿಂದ ಸಂಜೆ 5:00 ವರೆಗೆ. ವಲಯ 3…. ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಕಂದಾಯ ವಿಭಾಗ, ಪ್ರತಿ ಶುಕ್ರವಾರ ಮಧ್ಯಾಹ್ನ 3ರಿಂದ ಸಂಜೆ 5:00 ವರೆಗೆ, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಖುದ್ದಾಗಿ ಆಯುಕ್ತರಾದ ಮಾಯಣ್ಣಗೌಡ ರವರು ಸಾರ್ವಜನಿಕರಿಂದ ದೂರು ಸ್ವೀಕರಿಸಲಿದ್ದಾರೆ. 

ತುರ್ತು ಸಭೆ ಹಾಗೂ ಸರ್ಕಾರಿ ರಜೆಗಳನ್ನು ಹೊರತುಪಡಿಸಿ, ಪ್ರತಿ ವಾರಗಳಲ್ಲಿ ಆಯಾ ದಿನದಂದು ವಲಯಗಳ ಭೇಟಿ ಮಾಡಲಿದ್ದಾರೆ.

 ಅದರಂತೆ ಇಂದು ಮಂಗಳವಾರ, ವಲಯ 1 ವಿನೋಬನಗರ ಶಾಖೆಗೆ ಆಯುಕ್ತರು ಭೇಟಿ ನೀಡಿ ಕಂದಾಯ ವಿಭಾಗದ ಪ್ರತಿಯೊಂದು ಟೇಬಲ್ ನಲ್ಲಿ ಇರುವಂತಹ ಕಡತಗಳನ್ನು ಪರಿಶೀಲಿಸಿ, ಕಡತಗಳನ್ನು ಬಾಕಿ ಇರಿಸಿದಂತೆ ಎಚ್ಚರಿಕೆ ನೀಡಿದರು. 

ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಸಾರ್ವಜನಿಕರ ಪರವಾದಂತಹ ಕರ್ತವ್ಯವನ್ನು ದಕ್ಷ ಆಡಳಿತವನ್ನು ನಿರ್ವಹಿಸಬಹುದು ಎಂಬುದಕ್ಕೆ ತಾಜಾ ಉದಾಹರಣೆ: ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ರವರು.

 

ಶಿವಮೊಗ್ಗ ನಗರದ ಅನೇಕ ಸರ್ಕಾರಿ ಕಚೇರಿಗಳಲ್ಲಿ ಮಾಯಣ್ಣ ಗೌಡರಂತೆ, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಂತಹ ಕರ್ತವ್ಯವನ್ನು ನಿರ್ವಹಿಸಬೇಕು. ಕಾರಣ ಶಿವಮೊಗ್ಗ ನಗರದ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಪರವಾದಂತಹ ಕರ್ತವ್ಯ ನಿರ್ವಹಿಸುವಲ್ಲಿ ಹಲವಾರು ಕಚೇರಿಯ ಸಿಬ್ಬಂದಿಗಳು ವಿಫಲಗೊಂಡಿದ್ದಾರೆ. 

ಆದ್ದರಿಂದ ಸರ್ಕಾರಿ ಕಚೇರಿಗಳ ಮುಖ್ಯ ಅಧಿಕಾರಿಗಳು ಈ ರೀತಿಯಾಗಿ ಪ್ರತಿ ಕಚೇರಿಗಳಲ್ಲೂ, ವಾರಕ್ಕೆ ಒಂದು ಬಾರಿಯಾದರೂ ತಮ್ಮ ಕಚೇರಿಗಳಲ್ಲಿ, ಸಾರ್ವಜನಿಕ ಪರವಾದಂತಹ ಸಭೆ ನಡೆಸಿ, ಅವರಿಂದ ತಮ್ಮ ಸಮಸ್ಯೆಗಳನ್ನು ದೂರಿನ ಮೂಲಕ ಸ್ವೀಕರಿಸಿ, ಸಮಸ್ಯೆಗಳನ್ನು ಬಗೆಹರಿಸುವಂತಹ ಕರ್ತವ್ಯವನ್ನು, ಕಚೇರಿಯ ಅಧಿಕಾರಿಗಳು ನಿರ್ವಹಿಸಬೇಕೆಂಬುದು ಶಿವಮೊಗ್ಗ ನಗರದ ಸಾರ್ವಜನಿಕರ ಪರವಾಗಿ, ಸಿಟಿ ರೌಂಡ್ಸ್ ಪತ್ರಿಕೆಯ ಬಳಗದಿಂದ ಮನವಿ.