City Rounds News

Kannada News Website

ಕಾಂಗ್ರೆಸ್ಸಿನ ಗೂಂಡಾ ವರ್ತನೆ ಕೊನೆಯಾಗಬೇಕು: ಶಾಸಕರಾದ ಡಿ.ಎಸ್.ಅರುಣ್ ….!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ. ಎಂ 

 

 

ಶಿವಮೊಗ್ಗ: ಛಲವಾದಿ ನಾರಾಯಣಸ್ವಾಮಿ ಮೇಲೆ ಕಾಂಗ್ರೆಸ್ ನ ಗುಂಡಾಗಳು ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪವನ್ನು , ಶಾಸಕರಾದ ಡಿ.ಎಸ್.ಅರುಣ್.ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಮೇಲಿನ ಹಲ್ಲೇಯ ಪ್ರಯತ್ನ ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರೆ ಜೀವಕ್ಕೆ ಕುತ್ತು ಬರುತ್ತಿತ್ತು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಕಾಂಗ್ರೆಸ್ ನಲ್ಲಿನ ಗುಂಡಾಗಳು ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ರೀತಿಯ ಪ್ರವೃತ್ತಿ ನಡೆಯುತ್ತಿದೆ.ಸಿಟಿ ರವಿಯವರ ವಿಷಯದಲ್ಲೂ ಸಹ ಇದೆ ರೀತಿ ಆಯ್ತು ಎಂದು ಹೇಳಿದರು. ಬಿಜೆಪಿಯ 18 ಶಾಸಕರನ್ನ ಅಮಾನತ್ತು ಮಾಡಿ ಅವರ ಸವಲತ್ತುಗಳನ್ನು ಕಡಿತ ಮಾಡಿದ್ದಾರೆ‌ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಗುಂಡಾ ಸಂಸ್ಕಾರ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಗೂಂಡವರ್ತನೆ ಕಾರ್ಯಕರ್ತರಿಗೂ ಬಂದಿದೆ.ಛಲವಾದಿ ನಾರಾಯಣ ಸ್ವಾಮಿ ರವರು ಕಾಂಗ್ರೆಸ್ ನಾಯಕರ ವಿರುದ್ದ ಸದನದಲ್ಲಿ ಕಾಂಗ್ರೆಸ್ ಸರ್ಕಾರದ ಅಕ್ರಮಗಳನ್ನು ಹಾಗೂ ನಡೆದಂತ ಹಗರಣಗಳನ್ನು ಹಾಗೂ ಪ್ರಿಯಾಂಕ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಹಗರಣಗಳನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದಾರೆ.

ಬಿಜೆಪಿ ಸರ್ಕಾರ ಛಲವಾದಿ ನಾರಾಯಣ ಸ್ವಾಮಿ ರವರ ಪರವಾಗಿ ಇದ್ದೆವೆ.ಛಲವಾದಿ ನಾರಾಯಣ ಸ್ವಾಮಿ ರವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೂಡಲೇ ಸೂಕ್ತ ರಕ್ಷಣೆ ನೀಡಬೇಕು ಎಂದು ಹೇಳಿದರು.

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರ ಬಗ್ಗೆ ಖರ್ಗೆಯವರು ಎಷ್ಟು ಬಾರೀ ವಿಷಸರ್ಪ, ನಾಟಕದ ಮನುಷ್ಯ ಹಾಗೆ ಹೀಗೆ ಎಂದು ಅನೇಕ ರೀತಿಯ ಪದಗಳಲ್ಲಿ ನಿಂದಿಸಿದ್ದಾರೆ. ಚಲವಾದಿ ನಾರಾಯಣ್ ಅವರ ಮೇಲಿನ ಹಲ್ಲೆಯ ಪ್ರಯತ್ನದ ವಿಚಾರವಾಗಿ ನಿನ್ನೆಯ ಘಟನೆಯನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ನ ಗುಂಡಾಗಳು ಬಿಜೆಪಿ ಪಕ್ಷದವರ ಹೋರಾಟವನ್ನು ಹತ್ತಿಕ್ಕೂವ ಕೆಲಸ ಮಾಡುತ್ತಿದ್ದಾರೆ. ಛಲವಾದಿ ನಾರಾಯಣ ಸ್ವಾಮಿಯವರ ಮೇಲೆ ಹಲ್ಲೆಗೆ ಮುಂದಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.ಕಾಂಗ್ರೆಸ್ ಬುದ್ದಿ ಕಲಿಯದೆ ಹೋದರೆ ನಮ್ಮ ಹೋರಾಟ ಬೇರೆ ರೀತಿಯಲ್ಲಿ ಇರುತ್ತದೆ ಎಂದು ಹೇಳಿದರು.