City Rounds News

Kannada News Website

ಅನ್ನದಾಸೋಹದ ಮೂಲಕ ತಮ್ಮ 68 ನೇ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡಂತಹ ಎಂ. ಜಿ ಜಯಶ್ರೀ ಅಮ್ಮನವರು…!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ.ಎಂ

  1. ಶಿವಮೊಗ್ಗ: ಗಾಂಧಿ ನಗರ ವಾಸಿಗಳ ಸಹ್ಯಾದ್ರಿ ಸ್ನೇಹ ಸಂಘದ ಸದಸ್ಯರು ಅದಂತ ಶ್ರೀ ಯುತ ಎಂ. ಜಿ. ವಿನಯ್ ಇವರ ಮಾತೃ ಶ್ರೀ  ಎಂ ಜಿ ಜಯಶ್ರೀ ಅಮ್ಮನವರ 68 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಎಂ ಜಿ ವಿನಯ್ ಕುಟುಂಬ ವರ್ಗದವರಿಂದ ವಿಶೇಷವಾಗಿ 21/05/2025 ರ ಬುಧವಾರ ಮಧ್ಯಾಹ್ನ 12.45 ಕ್ಕೆ ಅನ್ನದಾಸೋಹದ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

 

ಶಿವಮೊಗ್ಗ ಜಿಲ್ಲಾ ಸರ್ಕಾರಿ ಮೆಗನ್ ಬೋಧನಾ ಆಸ್ಪತ್ರೆಯ ಆವರಣದಲ್ಲಿ ಅಮೃತ ಅನ್ನದಾಸೋಹ ಪ್ರತಿಷ್ಠಾಪನ ಸಮಿತಿಯ ವತಿಯಿಂದ ಮೆಗನ್ ಆಸ್ಪತ್ರೆಯ ಮಕ್ಕಳ ಹಾಗೂ ಹೆರಿಗೆ ಎರಡು ವಾರ್ಡ್ಗಳ ಮುಂಭಾಗದಲ್ಲಿ ಹಸಿದವರಿಗೆ ಅನ್ನದಾಸೋಹ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ದಾನಿಗಳು ನೀಡುವಂತಹ ಸಹಾಯದಿಂದ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಂತಹ ಸಾರ್ವಜನಿಕರಿಗೆ ಅಥವಾ ಹಸಿದವರಿಗೆ ಅನ್ನದಾಸೋಹ ಎಂಬ ಕಾರ್ಯಕ್ರಮದ 71ನೇ ಪ್ರಾಯೋಜಕತ್ವವನ್ನು ಅಚ್ಚುಕಟ್ಟಾಗಿ ಯಾವುದೇ ರೀತಿಯ ಭೇದಭಾವ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಹಸಿದು ಬಂದವರಿಗೆ ಅನ್ನ ದಾಸೋಹ ದ ಮೂಲಕ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುತ್ತಾರೆ.

 

ಅದೇ ರೀತಿಯಲ್ಲಿ 72ನೇ ಅನ್ನದಾಸೋಹ ಪ್ರಯೋಜಕತ್ವದ ಅಂಗವಾಗಿ. ಗಾಂಧಿ ನಗರ ವಾಸಿಗಳ ಸಹ್ಯಾದ್ರಿ ಸ್ನೇಹ ಸಂಘದ ಸದಸ್ಯರು ಅದಂತ ಶ್ರೀ ಯುತ ಎಂ. ಜಿ. ವಿನಯ್ ಇವರ ಮಾತ್ರೃಶ್ರೀ ಎಂ ಜಿ ಜಯಶ್ರೀ ಅಮ್ಮನವರ 68 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಎಂ ಜಿ  ವಿನಯ್ ಕುಟುಂಬ ವರ್ಗದವರಿಂದ ವಿಶೇಷವಾಗಿ ಅನ್ನದಾಸೋಹದ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಇವರ ಕುಟುಂಬಕ್ಕೆ ಅನ್ನದಾಸೋಹ ಪ್ರತಿಷ್ಠಾಪನ ಸಮಿತಿಯ ವತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ.