City Rounds News

Kannada News Website

 ಶಿವಮೊಗ್ಗ ಮಹಾನಗರ ಪಾಲಿಕೆಯ ಕುರುಡು ಆಡಳಿತಕ್ಕೆ ಮತ್ತೊಂದು ಸಾಕ್ಷಿ…?

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ. ಎಂ

 

 

ಶಿವಮೊಗ್ಗ : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಹಲವಾರು ಸಮಸ್ಯೆಗಳು ಕಂಡುಬಂದಿದ್ದು, ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರ ದೂರು.

ಶಿವಮೊಗ್ಗ ನಗರದಲ್ಲಿ ಅನೇಕ ಬಡಾವಣೆಯಲ್ಲಿ ಉದ್ಯಾನವನಗಳು, ರಸ್ತೆಗಳು, ಬೀದಿ ದೀಪಗಳು, ಮುಖ್ಯ ರಸ್ತೆಯಲ್ಲಿ ಉಂಟಾಗಿರುವಂತ ದೊಡ್ಡ ದೊಡ್ಡ ಗುಂಡಿಗಳು, ಪಾರ್ಕಿಂಗ್ ವ್ಯವಸ್ಥೆ, ಕನ್ಸರ್ವೆನ್ಸಿ ಸ್ವಚ್ಛತೆ, ಹಲವಾರು ರೀತಿಯ ದುರಸ್ತಿ ಕಾರ್ಯಗಳು ಶಿವಮೊಗ್ಗ ನಗರದ ತುಂಬೆಲ್ಲ ಕಂಡುಬಂದಿದ್ದರು ಸಾರ್ವಜನಿಕರು ಅನೇಕ ಬಾರಿ ಈ ವಿಚಾರವಾಗಿ ದೂರು ನೀಡಿದರು ಯಾವುದಕ್ಕೂ ಪ್ರತಿಕ್ರಿಯೆಸದೆ ಯಾರೇ ಕೂಗಾಡಲಿ ಎಮ್ಮೆ ನಿನಗೆ ಸಾಟಿ ಇಲ್ಲ ಎಂಬ ಗಾದೆ ಮಾತಿನಂತೆ ಮಹಾನಗರ ಪಾಲಿಕೆಯ ಆಯುಕ್ತರ ಜೊತೆಗೂಡಿ ಕೆಲವು ಅಧಿಕಾರಿಗಳು ಸಹ ಸಾರ್ವಜನಿಕರ ಕರೆಗೆ ಪ್ರತಿಕ್ರಿಯಿಸದೆ ಸಾರ್ವಜನಿಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸದೆ ತಿಂಗಳ ಸಂಬಳವನ್ನು ಸರಿಯಾದ ಸಮಯದಲ್ಲಿ ಎಣಿಸಿಕೊಂಡು ಹಾಯಾಗಿರುವಂತ ಮಹಾನಗರ ಪಾಲಿಕೆಯ ಕೆಲ ನೌಕರರು ಹಾಗೂ ಆಯುಕ್ತರು. ಸಾರ್ವಜನಿಕರ ಸಮಸ್ಯೆಗಳ ಪರವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಇನ್ಯಾವ ಕರ್ತವದಲ್ಲಿ ನಿರತರಾಗಿದ್ದಾರೆ ಎಂಬುದು  ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಮಹಾ ನಗರ ಪಾಲಿಕೆಯ ಆಯುಕ್ತರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 

ಮಹಾನಗರ ಪಾಲಿಕೆ ಆಯುಕ್ತರ ನಿರ್ಲಕ್ಷತೆ ಎಷ್ಟಿದೆ ಎಂಬುದರ ಉದಾರಣೆ, ಶಿವಮೊಗ್ಗ ನಗರದ ಗೋಪಾಳ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಐ ಟೆನ್ಶನ್ ವಿದ್ಯುತ್ ಸರಬರಾಜು ಲೈನ್ ಹೋಗಿರುವಂತ ಸ್ಥಳದಲ್ಲಿ ಬಲ ಹಾಗೂ ಎಡ ಭಾಗದಲ್ಲಿ ಕಬ್ಬಿಣದ ಬೇಲಿಯನ್ನು ಹಾಕಿರುತ್ತಾರೆ.

ಆದರೆ ಈ ಕಬ್ಬಿಣದ ಬೇಲಿಯು ಬಿದ್ದು ಹೋಗಿ ಸುಮಾರು ಏಳು – ಎಂಟು ದಿನಗಳು ಕಳೆದರೂ ಇದರ ದುರಸ್ತಿಯ ವಿಚಾರವಾಗಿ ಸಂಬಂಧಪಟ್ಟ ಮಹಾನಗರ ಪಾಲಿಕೆಯ ಅಧಿಕಾರಿಗಳಾಗಲಿ ಅಥವಾ ಆಯುಕ್ತರಾಗಲಿ ದುರಸ್ತಿಯನ್ನು ಪರಿಹರಿಸದೆ ಸಾವು ನೋವಿಗೆ ಎಡೆ ಮಾಡಿಕೊಟ್ಟಂತಾಗಿದೆ.

ಈ ಹಿಂದೆ ಇದೇ ಸ್ಥಳದಲ್ಲಿ ಲೋಕಾಯುಕ್ತ ಅಧಿಕಾರಿಗಳೇ ಖುದ್ದಾಗಿ ಬಂದು ಐ ಟೆನ್ಶನ್ ವಿದ್ಯುತ್ ಸರಬರಾಜು ಲೈನ್ ಹೋಗಿರುವಂತ ಸ್ಥಳದಲ್ಲಿ ಸ್ವಚ್ಛತೆಯನ್ನು ಮಾಡುತ್ತಿರುತ್ತಾರೆ. ಆದರೆ ಮತ್ತದೇ ಜಾಗದಲ್ಲಿ ಕಬ್ಬಿಣದ ಬೇಲಿಯು ಮುರಿದುಬಿದ್ದು ಯಾವುದೇ ರೀತಿಯ ಅಪಾಯಕ್ಕೆ ದಾರಿ ಮಾಡಿಕೊಡುವ ಮೊದಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆಯ ಆಯುಕ್ತರಿಗೆ ಈ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಗೋಪಾಲ ಬಡಾವಣೆಯ ಸುತ್ತಮುತ್ತಲಿನ ಸಾರ್ವಜನಿಕರು ಸಿಟಿ ರೌಂಡ್ಸ್ ಪತ್ರಿಕೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.