- ಶಿವಮೊಗ್ಗ:ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ . ಎಂ
ಶಿವಮೊಗ್ಗ : ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಎನ್. ಕೆ . ಜಗದೀಶ್ ರವರು. ಕಲಬುರ್ಗಿಯಲ್ಲಿ ನಡೆದ ರಿಪಬ್ಲಿಕ್ ಆಫ್ ವಿಚಾರವಾಗಿ ಹಾಗೂ ವಿರೋಧ ಪಕ್ಷದ ನಾಯಕರಾದ ಚಲುವಾದಿ ನಾರಾಯಣರವರನ್ನು ಅವಮಾನಿಸಿದನ್ನು ಖಂಡಿಸಿ ಮತ್ತು ಖರ್ಗೆ ಕುಟುಂಬದವರು ಹಾಗೂ ಕಾಂಗ್ರೆಸ್ ಪಕ್ಷದವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಹಗರಣಗಳ ವಿರುದ್ಧ ಹಾಗೂ ಖರ್ಗೆ ಕುಟುಂಬದವರ ಅಕ್ರಮಗಳ ವಿರುದ್ಧ ಮಾತನಾಡಿದವರನ್ನು ಖರ್ಗೆ ಕುಟುಂಬದವರು ಹಾಗೂ ಕಾಂಗ್ರೆಸ್ಸಿನ ನಾಯಕರುಗಳು ಹಾಗೂ ಕಾರ್ಯಕರ್ತರು ಹಲ್ಲೇ ಮಾಡುವುದು ಹಾಗೂ ಧಮ್ಕಿ ಹಾಕುವುದು ಮಾಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಕಾಂಗ್ರೆಸ್ ಪಕ್ಷ ಹಾಗೂ ಖರ್ಗೆ ಕುಟುಂಬದವರದ್ದು, ಹಿಂದಿನಿಂದಲೂ ನಡೆದು ಬಂದಿದೆ ಎಂದು ಹೇಳಿದರು. ಚಲುವಾದಿನಾರಾಯಣರವರನ್ನು ಸತತ ಐದು ಗಂಟೆಗಳ ಕಾಲ ಕೂಡಿ ಹಾಕುವಂಥ ಕೆಲಸ ಕಾಂಗ್ರೆಸ್ಸಿನ ಹಾಗೂ ಪ್ರಿಯಾಂಕ ಖರ್ಗೆಯ ಬೆಂಬಲಿಗರು ಮಾಡಿದ್ದಾರೆ.
ಖರ್ಗೆ ಕುಟುಂಬದವರು ಹಿಂದುಳಿದ ವರ್ಗಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಖರ್ಗೆ ಕುಟುಂಬದವರು ಹಾಗೂ ಕಾಂಗ್ರೆಸ್ಸಿನ ನಾಯಕರುಗಳು ಪೊಲೀಸ್ ಅಧಿಕಾರಿಗಳನ್ನು ಬೆದರಿಸುವಂತಹ ಹಾಗೂ ಭಯಪಡಿಸುವಂತಹ ರಾಜಕಾರಣವನ್ನು ಮಾಡುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ಈ ರೀತಿಯ ಒತ್ತಡಕ್ಕೆ ಮಣಿಯದೆ ತಮ್ಮ ಕರ್ತವ್ಯವನ್ನು ಕಾನೂನಿನ ಪರವಾಗಿ ಹಾಗೂ ನ್ಯಾಯವಾದ ರೀತಿಯಲ್ಲಿ ನಿರ್ವಹಿಸಬೇಕು ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಯವರು ಸಂವಿಧಾನದ ವಿಚಾರವಾಗಿ ಮಾತನಾಡುವವರು ಮಾನ್ಯ ಪ್ರಧಾನ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿಜಿ ಅವರನ್ನು ಅನೇಕ ಬಾರಿ ಅವಮಾನ ಮಾಡಿದ್ದಾರೆ ಹಾಗೂ ನಿಂದಿಸಿದ್ದಾರೆ ಆದರೆ ಖರ್ಗೆಯವರ ವಿರುದ್ಧ ಸಂತ್ಯಾಂಶವಾಗಿ ಯಾರಾದರೂ ನುಡಿದರೆ ಅದರಲ್ಲೂ ಬಿಜೆಪಿ ಪಕ್ಷದವರು ಮಾತನಾಡಿದರೆ ಉರಿದುಕೊಳ್ಳುತ್ತಾರೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ರವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಾಗೂ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮನವೊಲಿಸಲು ಇತರರನ್ನು ಅವಮಾನಗೊಳಿಸುವುದು ಹಲ್ಲೆ ಮಾಡಲು ತಮ್ಮ ಬೆಂಬಲಿಗರಿಗೆ ಪ್ರಚೋರಿಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಈ ರೀತಿಯ ಮನವೊಲಿಕೆ ಮಾಡಿಸುವುದು ಒಳ್ಳೆಯದಲ್ಲ ಎಂದು ಹೇಳಿದರು. 
ದಿನಾಂಕ: 24-05-2025 ರಂದು ಬಿಜೆಪಿಯ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ರವರ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಖರ್ಗೆ ಕೊಡಲು ಕುಟುಂಬದವರ ನಡತೆಯನ್ನು ಮತ್ತು ಚಲುವಾದಿ ನಾರಾಯಣರವರ ಮೇಲಿನ ಆರೋಪ ಹಾಗೂ ಹಲ್ಲೆಗೆ ಯತ್ನಿಸಿದ ವಿಚಾರವನ್ನು ಖಂಡಿಸಿ “ಕಲಬುರಗಿ ಚೆಲೋ “ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್. ಎನ್. ಚನ್ನಬಸಪ್ಪ ಶಾಸಕರು ಶಿವಮೊಗ್ಗ ನಗರ, ರಾಜ್ಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್. ಅರುಣ್, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ, ಎಸ್. ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…