ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎಂ
ಶಿವಮೊಗ್ಗ: ಕರ್ನಾಟಕ ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಮೂಲಕ ಎಲ್ ಕೆ ಜಿ, 1 – 8ನೇ ತರಗತಿವರೆಗೆ ಶಿಕ್ಷಣ ನೀಡಲು ಉಚಿತ ಪ್ರವೇಶಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ. ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕನ್ನು ಬಿಡುಗಡೆ ಮಾಡಿದೆ. ಮೇ ತಿಂಗಳ ದಿನಾಂಕ 12ನೇ ತಾರೀಖಿನವರೆಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ 2025 26ನೇ ಸಾಲಿನ (ಆರ್ ಟಿ ಇ ) ಶಿಕ್ಷಣ ಹಕ್ಕು ಕಾಯ್ದೆ ಅಡಿ ಉಚಿತವಾಗಿ ರಾಜ್ಯದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಪ್ರವೇಶ ಪಡೆಯುವ ಸಂಬಂಧ ಇದೀಗ ಆನ್ಲೈನ್ ಅರ್ಜಿ ಲಿಂಕ್ ಅನ್ನು ಬಿಡುಗಡೆ ಮಾಡಿದೆ ಪೋಷಕರು ತಮ್ಮ ಮಕ್ಕಳ ಪರವಾಗಿ ಆರ್‌ಟಿಇ ಶಿಕ್ಷಣ ಪ್ರವೇಶಕ್ಕೆ ಮೇ 12ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
(ಆರ್ ಟಿ ಇ) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರದ ವೆಬ್ಸೈಟ್ ವಿಳಾಸ: www.schooleducation.kar.nic.in ಲಿಂಕ್ ಅನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.
(ಆರ್ ಟಿ ಇ) ಪ್ರವೇಶಕ್ಕೆ ವಿಶೇಷ ಸೂಚನೆ :-
ಎಲ್ ಕೆಜಿ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 4 ವರ್ಷ ಆಗಿರಬೇಕು. ಒಂದನೇ ತರಗತಿ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು ಹಾಗೂ ಗರಿಷ್ಠ 7 ವರ್ಷ ನಿಗದಿ ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
28-04-2025ರಂದು
ದಿ|| ಬನ್ನಿಕೆರೆ ಮೀನಾಕ್ಷಮ್ಮನವರು ಅಪಾರ ಬಂಧು ಬಳಗವನ್ನು ಬಿಟ್ಟು “ಇಹಲೋಕ ತ್ಯಜಿಸಿದ್ದಾರೆ
‘ಸಂತಾಪ ಸೂಚಿಸುವವರು’
“ಬನ್ನಿಕೆರೆ ವಂಶಸ್ಥರು ಶಿವಮೊಗ್ಗ”


More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಪಾವಗಡ ಶಾಸಕರೇ, ಅಧಿಕಾರದ ದರ್ಪ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ: ಜನರೇ ನಿಜವಾದ ಪ್ರಭುಗಳು, ರಾಜಕಾರಣಿಗಳಲ್ಲ!