City Rounds News

Kannada News Website

ನಾಗರೀಕ ಬಂದೂಕು ತರಬೇತಿ ಶಿಬಿರದ ಅರ್ಹತಾ ಪತ್ರ ವಿತರಣ ಕಾರ್ಯಕ್ರಮದ ಪ್ರಯುಕ್ತ : ನಗರದ ಪೊಲೀಸ್ ಭವನದಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…!

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ ಎಂ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಶಿವಮೊಗ್ಗ ನಗರದಲ್ಲಿ ದಿನಾಂಕ: 18-04-2025 ರಿಂದ 27-04-2025 ರ ವರೆಗೆ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು . ದಿನಾಂಕಃ 28-04-2025 ರಂದು ಸಂಜೆ ಶಿವಮೊಗ್ಗ ನಗರದ ಪೊಲೀಸ್ ಸಭಾ ಭವನದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ ಐಪಿಎಸ್, ರವರು ವಹಿಸಿದ್ದು, ನಾಗರೀಕ ಬಂದೂಕು ತರಬೇತಿ ಶಿಬಿರದಲ್ಲಿ ತರಬೇತಿ ಪೂರ್ಣಗೊಳಿಸಿದ ಒಟ್ಟು 320 ಜನ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

ಮಿಥುನ್ ಕುಮಾರ್ ಜಿ. ಕೆ. ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದ ಕುರಿತು ಈ ಕೆಳಕಂಡಂತೆ ಮಾತನಾಡಿದರು.

ಪೊಲೀಸ್ ಇಲಾಖೆಯೊಂದಿಗೆ ಯಾರು ನೇರವಾಗಿ ಹಾಗೂ ಹೆಚ್ಚಿನ ಒಡನಾಟವನ್ನು ಹೊಂದಿರುತ್ತಾರೋ ಅವರಿಗೆ ಪೊಲೀಸ್ ಇಲಾಖೆಯ ಮೇಲೆ ಒಳ್ಳೆಯ ಮತ್ತು ಧನಾತ್ಮಕವಾದ ಅಭಿಪ್ರಾಯವಿರುತ್ತದೆ.  ನೀವು ಸಮಾಜದಲ್ಲಿ ಉತ್ತಮ ನಾಗರೀಕರಾಗಿ, ಜವಾಬ್ದಾರಿಯುತವಾದ ಜೀವನ ಸಾಗಿಸುತ್ತೀರ ಎಂದಾದರೆ, ನೀವು ಪೊಲೀಸ್ ಇಲಾಖೆಗೆ ನೇರವಾಗಿ ಸಹಕಾರ ನೀಡಿದಂತಾಗಿರುತ್ತದೆ. ಒಬ್ಬ ವ್ಯಕ್ತಿಯು ತನ್ನ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಆತನ ಕರ್ತವ್ಯವನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದಾನೆ ಎಂದಾರೆ, ಆ ವ್ಯಕ್ತಿಯು ನಿಜವಾಗಿಯೂ ದೇಶಕ್ಕೆ ಸೇವೆಸಲ್ಲಿಸುತ್ತಿದ್ದಾನೆ ಎಂದು ಅರ್ಥ ಎಂದು ತಿಳಿಸಿದರು.

ಕಾನೂನಿಗೆ ಗೌರವ ಕೊಡುವುದು, ಸಂಚಾರ ನಿಯಮಗಳನ್ನು ತಪ್ಪದೇ ಪಾಲನೆ ಮಾಡುವುದು ಹಾಗೂ ತಪ್ಪನ್ನು ಧೈರ್ಯವಾಗಿ ವಿರೋಧಿಸುವುದು ಈ ಎಲ್ಲಾ ಕಾರ್ಯಗಳನ್ನು ಶಿಸ್ತಿನಿಂದ ನಿರ್ವಹಿಸುವುದು ಒಬ್ಬ ಜವಾಭ್ದಾರಿಯುತ ನಾಗರೀಕನ ಲಕ್ಷಣವಾಗಿರುತ್ತದೆ ಹಾಗೂ ಆಧ್ಯ ಕರ್ತವ್ಯವಾಗಿರುತ್ತದೆ. ಎಂದು ಹೇಳಿದರು.

ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಪ್ರಶಿಕ್ಷಣಾರ್ಥಿಗಳು ತಮ್ಮ ತಮ್ಮ ಕರ್ತವ್ಯವನ್ನು ಅರಿತು, ಅವುಗಳನ್ನು ಪಾಲನೆ ಮಾಡಿದ್ದಲ್ಲಿ, ಈ ಕಾರ್ಯಾಗಾರಕ್ಕೆ ಸಾರ್ಥಕತೆ ದೊರಕುತ್ತದೆ. ತರಬೇತಿಯ ಸಂದರ್ಭದಲ್ಲಿ ನಿಮಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಾಗೂ ದೈಹಿಕ ಸ್ವಾಸ್ಥ್ಯದ ಸಮತೋಲನ ಕಾಪಾಡಿಕೊಳ್ಳುವ ಮತ್ತು ಮಾನಸಿಕ ಸ್ಥಿಮಿತ ಸಾಧಿಸುವ ಕುರಿತು ತಿಳಿಸಿಕೊಡಲಾಗಿರುತ್ತದೆ. ನಿಮ್ಮ ಜೀವನದುದ್ದಕ್ಕೂ ಇದೇ ರೀತಿಯ ಶಿಸ್ತನ್ನು ಪಾಲಿಸಿ, ನಿಮಗೆ ತರಬೇತಿಯಲ್ಲಿ ಹೇಳಿಕೊಡಲಾದ ದೈಹಿಕ ವ್ಯಾಯಾಮಗಳನ್ನು ಜೀವನದುದ್ದಕ್ಕೂ ಪಾಲನೆ ಮಾಡಿದ್ದಲ್ಲಿ, ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳ ಬಹುದಾಗಿರುತ್ತದೆ ಎಂದು ತಿಳಿಸಿದರು.

ಆಯುಧವೆಂಬುದು ಒಂದು ಪರಿಕರವಷ್ಟೆ ಆಗಿರುತ್ತದೆ. ನೀವು ಅದನ್ನು ಹೇಗೆ ಬಳಸುತ್ತೀರೋ ಅದು ಆ ರೀತಿ ಕೆಲಸ ಮಾಡಿರುತ್ತದೆ. ತರಬೇತಿ ನಂತರ ನಿಮ್ಮ ಹೊಣೆಗಾರಿಕೆಯೂ ಸಹಾ ಹೆಚ್ಚುತ್ತದೆ. ಆಯುಧಗಳನ್ನು ಯಾವ ರೀತಿ ಬೇಕಾದರೂ ಬಳಸಬಹುದಾಗಿರುತ್ತದೆ. ಆದ್ದರಿಂದ ಆಯುಧಗಳನ್ನು ನಿಮ್ಮ, ಕುಟುಂಭದ, ಆಸ್ಥಿಯ ರಕ್ಷಣೆಗಾಗಿ ಮಾತ್ರ ಬಳಸಿ, ಆಯುಧಗಳನ್ನು ಯಾವುದೇ ಕಾನೂನು ಬಾಹೀರ ಚಟುವಟಿಕೆಗಳಿಗೆ ಬಳಸಬೇಡಿ, ಒಂದು ವೇಳೆ ಬಳಸಿದಲ್ಲಿ ನಿಮ್ಮ ಬಳಿ ಪರವಾನಿಗೆ ಇರುವ ಆಯುಧ ಇದ್ದರೂ ಸಹಾ ಅದು ಕಾನೂನು ರೀತ್ಯಾ ಅಪರಾಧವಾಗಿರುತ್ತದೆ. ನೀವು ಸಮಾಜಕ್ಕೆ ಹಾಗೂ ಇತರರಿಗೆ ಮಾದರಿಯಾಗಿರಬೇಕು. ಆದ್ದರಿಂದ ತರಬೇತಿಯಲ್ಲಿ ಕಲಿಸಿದಂತಹ ಶಿಸ್ತನ್ನು ಪಾಲಿಸಿ ಕ್ರಮಬದ್ದವಾಗಿ ಆಯುಧಗಳನ್ನು ಬಳಸಿ ಎಂದು ಹೇಳಿದರು.

ಈ ತರಬೇತಿಯ ಸಮಯದಲ್ಲಿ ಪೊಲೀಸ್ ಇಲಾಖೆಯು ವಾಸ್ತವವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನಿಮ್ಮೆಲ್ಲರಿಗೂ ತಿಳಿದುಬಂದಿರುತ್ತದೆ ಹಾಗೂ ಇದರಿಂದ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಯಾವ ರೀತಿಯ ಒಡನಾಟವನ್ನು ಇಟ್ಟುಕೊಳ್ಳಬೇಕು ಎಂಬುದೂ ಸಹಾ ತಿಳಿದು ಬಂದಿರುತ್ತದೆ ಎಂದು ತಿಳಿಸಿದರು.

ನೇರವಾಗಿ ಹಾಗೂ ಪರೋಕ್ಷವಾಗಿ ಸಾರ್ವಜನಿಕರು ಪೊಲೀಸ್ ಇಲಾಖೆಯ ಸಹಾಯಕ್ಕೆ ನಿಲ್ಲುತ್ತಾರೆ ಎಂದರೆ, ಅದು ತುಂಬಾ ಸ್ವಾಗತಾರ್ಹ ವಾಗಿರುತ್ತದೆ. ಗಣೇಶ / ಈದ್ ಮಿಲಾದ್ ಹಾಗೂ ಪ್ರಮುಖ ಬಂದೋಬಸ್ತ್ ಸಂದರ್ಭದಲ್ಲಿ, ಈ ಹಿಂದೆ ನಾಗರೀಕ ಬಂದೂಕು ತರಬೇತಿ ಶಿಭಿರದಲ್ಲಿ ಭಾಗವಹಿಸಿದ್ದವರು ಸ್ವಯಂ ಸೇವಕರಾಗಿ ಪೊಲೀಸ್ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸಿದ್ದು, ಆಹಾರ ಪೊಟ್ಟಣಗಳ ಹಂಚಿಕೆ, ಮೆರವಣಿಗೆ ಬಂದೋಬಸ್ತ್, ಮುಂಗಡ ಮಾಹಿತಿ ನೀಡುವುದು ಈ ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಅಗತ್ಯ ಸಂದರ್ಭಗಳಲ್ಲಿ, ನಿಮ್ಮ ಸೇವೆಯನ್ನು ಪಡೆಯಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅನಿಲ್ ಕುಮಾರ್ ಭೂಮರಡ್ಡಿ, – 1, ಕಾರಿಯಪ್ಪ ಎ. ಜಿ. ದಿಲೀಪ್,ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ ಮತ್ತು ನಾಗರೀಕ ಬಂದೂಕು ತರಬೇತುದಾರಾದ ಪ್ರವೀಣ್ , ಲಕ್ಷ್ಮಿಕಾಂತ್, ಮಂಜುನಾಥ್ ಹಾಗೂ ಶಿಬಿರದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.