ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಶಿವಮೊಗ್ಗ: ನಗರದ ಪೋಲಿಸ್ ಭವನ ಮುಂಭಾಗದ ಮುಖ್ಯ ರಸ್ತೆ ಮಧ್ಯದಲ್ಲಿ ದೊಡ್ಡ ಗುಂಡಿಯೊಂದು ಬಲಿಗಾಗಿ ಕಾದು ಕುಳಿತಿದೆ.
ನಗರದ ಅನೇಕ ಬಡಾವಣೆಗಳ ರಸ್ತೆಗಳಲ್ಲಿ ಗುಂಡಿಯ ಸಮಸ್ಯೆ ಇದೆ ಎಂದು ಮೊನ್ನೆಯಷ್ಟೇ “ಸಿಟಿ ರೌಂಡ್ಸ್ ನ್ಯೂಸ್ “ವರದಿ ಮಾಡಿತ್ತು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದಲ್ಲಿ ಆಗಿರುವಂತ ಗುಂಡಿಗಳನ್ನು ಸರಿಪಡಿಸುವ ಮೂಲಕ ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾಹುತಗಳು ಆಗದಂತೆ ಹಾಗೂ ಸಮಸ್ಯೆಗಳು ಬಾರದಂತೆ ದುರಸ್ತಿಗೊಂಡಿರುವಂತ ರಸ್ತೆಗಳನ್ನು ಸರಿಪಡಿಸುವ ಮೂಲಕ ಕ್ರಮ ಕೈಗೊಳ್ಳುವಂತೆ ವರದಿ ಮಾಡಲಾಗಿತ್ತು.
ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಾರಣ ಶಿವಮೊಗ್ಗ ನಗರದಲ್ಲಿ ಹಲವಾರು ಇಲಾಖೆಗಳ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲ ಅಧಿಕಾರಿಗಳು ವಿಫಲವಾಗಿರುವುದು ಶೋಚನೀಯವಾಗಿದೆ.
ಜನಪ್ರತಿನಿಧಿಗಳಾಗಲಿ ಅಥವಾ ಸಚಿವರುಗಳಾಗಲಿ ಅಧಿಕಾರಿಗಳನ್ನು ಸಾರ್ವಜನಿಕರ ಪರವಾದಂತಹ ಸೇವೆ ಸಲ್ಲಿಸುವಂತೆ ಆದೇಶಿಸುವಲ್ಲಿ ವಿಫಲರಾಗಿದ್ದಾರೆ. ನಗರದ ಬಸ್ ನಿಲ್ದಾಣದಿಂದ ಸಾಗರ ಮುಖ್ಯರಸ್ತೆ, ಪೊಲೀಸ್ ಠಾಣೆಗಳ ಪಕ್ಕದಲ್ಲಿರುವ ಪೋಲಿಸ್ ಭವನದ ಮುಂಭಾಗದಲ್ಲಿರುವ ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿಯೊಂದು ಬಲಿಗಾಗಿ ಕಾದು ಕುಳಿತಂತಾಗಿದೆ. 
ಇದೇ ರಸ್ತೆಯ ಮೂಲಕ ಪೊಲೀಸ್ ಕ್ವಾರ್ಟರ್ಸ್ ಗಳಿಗೆ ಪೊಲೀಸ್ ಇಲಾಖೆಯ ಕುಟುಂಬದವರು ಹಾಗೂ ಸಾರ್ವಜನಿಕರು ಸಂಚರಿಸುವ ಸಂಪರ್ಕ ಹೊಂದಿರುವ ರಸ್ತೆಯಾಗಿದೆ ಹಾಗೂ ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುವಂತಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಕೆ ಮಿಥುನ್ ಕುಮಾರ್ ಅವರು ಪೊಲೀಸ್ ಭವನ ಮುಂಭಾಗದ ರಸ್ತೆ ಮಧ್ಯದಲ್ಲಿರುವ ಕಂದಕದಂತಿರುವ ಗುಂಡಿಯಿಂದ ಯಾವುದೇ ರೀತಿಯ ಸಾವು ನೋವು ಉಂಟಾಗುವ ಮುನ್ನ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ರಸ್ತೆ ಮಧ್ಯೆ ಇರುವ ಗುಂಡಿಯನ್ನು ಸರಿಪಡಿಸುವಂತೆ ಸೂಚಿಸಬೇಕೆಂದು ಸಾರ್ವಜನಿಕರ ಪರವಾಗಿ “ಸಿಟಿ ರೌಂಡ್ಸ್ ಪತ್ರಿಕಾ” ಬಳಗದಿಂದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ