ಪೊಲೀಸ್ ಇಲಾಖೆ ವತಿಯಿಂದ ಮಹಿಳಾ ಪದವಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ…!

ಶಿವಮೊಗ್ಗ :ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ ಎಂ.

ಶಿವಮೊಗ್ಗ : ಈ ದಿನ ದಿನಾಂಕಃ 22-04-2025 ರಂದು ಸಿಇಎನ್ ಪೊಲೀಸ್ ಠಾಣೆಯ , ಪೊಲೀಸ್ ಉಪಾಧೀಕ್ಷಕರಾದ ಕೃಷ್ಣಮೂರ್ತಿ, ರವರು ಶಿವಮೊಗ್ಗ ನಗರದ ಬಿ ಹೆಚ್ ರಸ್ತೆ ಮಹಿಳಾ ಪದವಿ ಕಾಲೇಜಿನಲ್ಲಿ, ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

 1) ಸೈಬರ್ ವಂಚಕರು ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಮಾಡಿಕೊಡುವುದಾಗಿ ಹೇಳಿ, ಸುಲಭವಾಗಿ ನಿಮ್ಮನ್ನು ನಂಬಿಸಿ, ಮೋಸದ ಬಲೆಗೆ ಬೀಳಿಸಲಿದ್ದು ಎಚ್ಚರಿದಿಂದಿರಿ.

2) ಯಾವುದೇ ಕಾರಣಕ್ಕೂ ಇತರರಿಗೆ ಒಟಿಪಿ ನೀಡಬೇಡಿ, ಒಂದು ವೇಳೆ ತಾನು ಬ್ಯಾಂಕ್ ನ ಅಧಿಕಾರಿ ಎಂದು ಹೇಳಿಕೊಂಡು ನಿಮಗೆ ಕರೆ ಮಾಡಿದರೂ ಸಹಾ ಹತ್ತಿರ ಬ್ಯಾಂಕ್ ನ ಶಾಖೆಗೆ ಹೋಗಿ ಖಚಿತ ಪಡಿಸಿಕೊಳ್ಳಿ. ಎಂದು ತಿಳಿಸಿದರು.

3) ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರದಿಂದಿರಿ. ಆನ್ ಲೈನ್ ನಲ್ಲಿ ಬರುವ ಎಲ್ಲಾ ವಿಚಾರವನ್ನು ನಂಬಬೇಡಿ. ಸತ್ಯಾಸತ್ಯತೆ ತಿಳಿದ ನಂತರವೇ ಪ್ರತಿಕ್ರಿಯಿಸಿ. ಎಂದು ತಿಳಿಸಿದರು.

4) ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವಾಗ / ಎಪಿಕೆ ಫೈಲ್ ಗಳನ್ನು ಡೌನ್ ಲೋಡ್ ಮಾಡುವಾಗ ಎಚ್ಚರಿಕೆ ವಹಿಸಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.