City Rounds News

Kannada News Website

ನಗರದ ಸುತ್ತಮುತ್ತಲಿನಲ್ಲಿರುವ ಮರಗಳಲ್ಲಿನ ಒಣಗಿದ ರೆಂಬೆ ಕೊಂಬೆಗಳು ಬಲಿಗಾಗಿ ಕಾಯುತ್ತಿವೆ ಎಚ್ಚರಿಕೆ…!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ ಎಂ.

 

ಶಿವಮೊಗ್ಗ: ಮಳೆಗಾಲ ಸಮೀಪಿಸುತ್ತಿದ್ದು ಈಗಾಗಲೇ ಕೆಲವು ದಿನಗಳಿಂದ ಜೋರಾದ ಗಾಳಿ ಮಳೆ ಆರ್ಭಟ ಶುರುವಾಗಿದ್ದು. ನಗರದಲ್ಲಿ ಅನೇಕ ಮರಗಳಲ್ಲಿ ಒಣಗಿದ ರಂಬೆ ಕೊಂಬೆಗಳು ಬಲಿಗಾಗಿ ಕಾದು ಕುಳಿತಿವೆ. ಆದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಗಣಿಸಿ, ನಗರದ ಸುತ್ತಮುತ್ತಲಿರುವ ಮರಗಳಲ್ಲಿ ಜೋತು ಬಿದ್ದಿರುವ ಹಾಗೂ ಒಣಗಿರುವಂತ ರಂಬೆ ಕೊಂಬೆಗಳನ್ನು ತೆರವುಗೊಳಿಸುವ ಮೂಲಕ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗಾಗಲಿ, ವಾಹನಗಳಿಗಾಗಲಿ, ಅಥವಾ ಪಾದಚಾರಿಗಳಿಗಾಗಲಿ ಯಾರಿಗೂ ಯಾವುದೇ ರೀತಿಯ ಅನಾಹುತ ಬಾರದಂತೆ  ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ.

ಹಾಗೂ ಯಾವುದೇ ರೀತಿಯ ಪ್ರಾಣ ಹಾನಿ ಹಾಗೂ ದುರ್ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಸಾವು ನೋವಿಗೆ ಅವಕಾಶ ನೀಡದಂತೆ ಮರದಲ್ಲಿ ಒಣಗಿರುವಂತಹ ರಂಬೆ ಕೊಂಬೆಗಳನ್ನು ತೆರವು ಗೊಳಿಸಬೇಕೆಂದು ಸಾರ್ವಜನಿಕರ ಪರವಾಗಿ ಸಿಟಿ ರೌಂಡ್ಸ್ ಪತ್ರಿಕೆಯ ಬಳಗದಿಂದ ಸಂಬಂಧಪಟ್ಟಂತ ಇಲಾಖೆಯ ಅಧಿಕಾರಿಗಳಲ್ಲಿ ಮನವಿ..

ವರದಿ: ಅಣ್ಣಪ್ಪ ಎಂ.