ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಶಿವಮೊಗ್ಗ : ಶ್ರೀ ಕೋಟೆ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಇಂದು ದಿನಾಂಕ 05 -04 -2025 ಈ ದಿನದ ವಿಶೇಷ ಅಲಂಕಾರ ಶ್ರೀರಾಮ ದೇವರಿಗೆ “ದರ್ಬೆ ಶಯನ” ಅಲಂಕಾರವನ್ನು ಏರ್ಪಡಿಸಲಾಗಿತ್ತು.
ದಿನಾಂಕ 06-04-2025 ಭಾನುವಾರ ಬೆಳಿಗ್ಗೆ, ಶ್ರೀ ರಾಮನವಮಿ ಉತ್ಸವದ ಪ್ರಯುಕ್ತ ಬೆಳಗ್ಗೆ 8.30ಕ್ಕೆ ಕಳಶ ಸ್ಥಾಪನೆ ಪೂಜಾ ವಿಧಿ ವಿಧಾನಗಳು ನೆರವೇರಲಿದ್ದು ನಂತರ ಸುಮಾರು 12 ಗಂಟೆ 30 ನಿಮಿಷಕ್ಕೆ ಅರಿಶಿನ ಅಲಂಕಾರ ಹಾಗೂ ಮಧ್ಯಾಹ್ನ 4:00ಗೆ ಶ್ರೀರಾಮ ದೇವರಿಗೆ ಪಟ್ಟಾಭಿಷೇಕ ಅಲಂಕಾರ, ಸಾಯಂಕಾಲ 5.30ರ ಸಮಯಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಇರುತ್ತದೆ.
ದಿನಾಂಕ 07-04-2025 ನೇ ಸೋಮವಾರದಂದು ಸಂಜೆ “ಬೆಳ್ಳಿ ಮಂಟಪ ಉತ್ಸವ ಕಾರ್ಯಕ್ರಮ” ಏರ್ಪಡಿಸಲಾಗಿರುತ್ತದೆ. ಎಲ್ಲಾ ಕಾರ್ಯಕ್ರಮಕ್ಕೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿವಮೊಗ್ಗ ನಗರದ ಶ್ರೀ ಕೋಟೆ ಸೀತಾರಾಮಾಆಂಜನೇಯ ಸ್ವಾಮಿ ದೇವಸ್ಥಾನದ “ರಾಮನವಮಿ ಉತ್ಸವದ” ಪ್ರಯುಕ್ತ ಶ್ರೀ ಸೀತಾ ರಾಮಾಂಜನೇಯ ದೇವರ ಆಶೀರ್ವಾದ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ