ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಬೆಳಗಾವಿ: ಕಾಮದ ದಾಹಕ್ಕೆ ತನ್ನ ಗಂಡನನ್ನು ಅಮಾನುಷವಾಗಿ ಕೊಲೆ ಮಾಡಿಸಿದ ಹೆಂಡತಿ.
ಶಿವನಗೌಡ ಪಾಟೀಲ್ ಹಾಗೂ ಶೈಲಾ ಎಂಬುವರು ದಂಪತಿಗಳಾಗಿದ್ದು ಹಲವು ವರ್ಷಗಳಿಂದ ಸಂಸಾರ ನಡೆಸುತ್ತಾ ಬರುತ್ತಿದ್ದರು ಆದರೆ ಕೆಲವು ತಿಂಗಳುಗಳ ಹಿಂದೆ ರುದ್ರಪ್ಪ ಹೊಸಟ್ಟಿ ಎಂಬುವನ ಜೊತೆ ಅಕ್ರಮ ಸಂಬಂಧ ಶೈಲಾ ಹೊಂದಿದ್ದಳು ಎನ್ನಲಾಗಿದೆ ಈ ವಿಚಾರ ಗಂಡನಿಗೆ ತಿಳಿದು ಗಂಡ ಶಿವನಗೌಡ ಪಾಟೀಲ್ ತನ್ನ ಹೆಂಡತಿಯಾದ ಶೈಲಳಿಗೆ ಬುದ್ಧಿ ಹೇಳಿ ಈ ರೀತಿ ಮಾಡಬೇಡ ಎಂದು ತಿಳಿಸಿರುತ್ತಾನೆ. ಶೈಲಾ ಹಾಗೂ ರುದ್ರಪ್ಪನ ಅಕ್ರಮ ಸಂಬಂಧ ಶೈಲ ಗಂಡನಾದ ಶಿವನಗೌಡ ಪಾಟೀಲ್ ಹಾಗೂ ಶೈಲಾ ಮತ್ತು ರುದ್ರಪ್ಪ ಈ ಮೂರು ಜನರಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿರುವುದಿಲ್ಲ.
ಹೀಗೆ ಒಂದು ದಿನ ಶಿವನಗೌಡ ಪಾಟೀಲ್ ಹೆಂಡತಿ ಶೈಲಾ ತನ್ನ ತವರು ಮನೆಗೆ ಹೋಗುತ್ತೇನೆ ಎಂದು ಹೇಳಿ ತವರು ಮನೆಗೆ ಹೋಗಿರುತ್ತಾಳೆ. ಶೈಲ ಆಗು ರುದ್ರಪ್ಪ ಇಬ್ಬರು ಶಿವನಗೌಡ ಪಾಟೀಲ್ ನನ್ನು ಕೊಲೆ ಮಾಡಲು ಮೊದಲೇ ಸಂಚುರೂಪಿಸಿದ್ದರು ತನ್ನ ಗಂಡನನ್ನು ಕೊಲೆ ಮಾಡಲು ರುದ್ರಪ್ಪನಿಗೆ ತಿಳಿಸಿ ಶೈಲಾ ಕನ್ನಡ ತವರು ಮನೆಗೆ ಹೋಗಿರುತ್ತಾಳೆ. ಆಗ ರುದ್ರಪ್ಪ ಶಿವನಗೌಡನ ಮನೆಗೆ ರಾತ್ರಿ ವೇಳೆ ಬಂದು ಮಲಗಿದ್ದ ಶಿವನಗೌಡನ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಿರುತ್ತಾನೆ.
ಕೊಲೆಯಾದ ನಂತರ ಹೆಂಡತಿ ಶೈಲಾ ವಿಚಾರವಾಗಿ ಪೊಲೀಸರಿಗೆ ಅನುಮಾನ ಬಂದು ಅವಳನ್ನು ವಿಚಾರಣೆಗೆ ಒಳಪಡಿಸಿ ಶೈಲಾಳ ಮೊಬೈಲ್ ವೀಕ್ಷಿಸಿದಾಗ, ಶೈಲಾ ಗಂಡನ ಹತ್ಯೆಯನ್ನು ತನ್ನ ಮೊಬೈಲ್ ವಾಟ್ಸಪ್ ನಲ್ಲಿ ಲೈವ್ ಆಗಿ ನೋಡಿ ಆ ವಿಡಿಯೋವನ್ನು ಸೇವ್ ಮಾಡಿದ್ದಳಂತೆ. ಪೊಲೀಸರ ಅನುಮಾನ ಸರಿಯಾಗಿದ್ದು ಮೊಬೈಲ್ ನಿಂದ ಶೈಲಾ ಹಾಗೂ ರುದ್ರಪ್ಪನ ಅಕ್ರಮ ಸಂಬಂಧ ತಿಳಿದು ಬಂದಿದೆ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸರು ಬಂಧಿಸಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಪಾವಗಡ ಶಾಸಕರೇ, ಅಧಿಕಾರದ ದರ್ಪ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ: ಜನರೇ ನಿಜವಾದ ಪ್ರಭುಗಳು, ರಾಜಕಾರಣಿಗಳಲ್ಲ!