ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಶಿವಮೊಗ್ಗ: ದಿನಾಂಕ 06-042025ರಂದು ಶ್ರೀ ರಾಮನವಮಿ ಪ್ರಯುಕ್ತ ನಗರದಲ್ಲಿ ಮಾಂಸ ಮಾರಾಟ ನಿಷೇಧ ಎಂದು ನೋಟಿಸ್ ಜಾರಿಗೊಳಿಸಿದ ಮಹಾನಗರ ಪಾಲಿಕೆ ಆಯುಕ್ತರು. ಅದರಂತೆ ಶಿವಮೊಗ್ಗ ನಗರದ ಮಾಂಸ ಮಾರಾಟದ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದಾರೆಯೇ.? ಇಲ್ಲ ಹಲವಾರು ಕಡೆ ಮಾಂಸ ಮಾರಾಟದ ಅಂಗಡಿಗಳು ಅಂಗಡಿಯ ಬಾಗಿಲನ್ನು ಮುಚ್ಚಿ ಹಿಂಬದಿಯ ಬಾಗಿಲಿನಿಂದ ಹಾಗೂ ಇನ್ನಿತರ ಕದ್ದು ಮುಚ್ಚಿ ಮಾಂಸವನ್ನು ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಕಾನೂನು ನಿಯಮವನ್ನು ಉಲ್ಲಂಘಿಸಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರ ಆದೇಶಕ್ಕೂ ಕ್ಯಾರೆಎನ್ನದ ಮಾಂಸ ಮಾರಾಟದ ಅಂಗಡಿ ಮಾಲೀಕರು ಹಾಗೂ ಈ ರೀತಿಯ ನಿಷೇಧ ಜಾರಿಯಲ್ಲಿರುವ ಸಮಯದಲ್ಲಿ ಕಾರ್ಯ ಪ್ರವೃತ್ತಿಯರಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಹೆಲ್ತ್ ಇನ್ಸ್ಪೆಕ್ಟರ್ಗಳು ಕಾಣೆಯಾಗಿದ್ದಾರೆಯೇ, ಅಥವಾ ಮಾಂಸ ಮಾರಾಟ ಮಾಡುತ್ತಿರುವ ಅಂಗಡಿ ಮಾಲಿಕರಿಂದ ಸಂಥಿಂಗ್, ಸಂಥಿಂಗ್ ಏನಾದರೂ ನಡೆದಿದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಸಂಶಯವನ್ನು ಉಂಟು ಮಾಡಿದೆ.
ಈ ರೀತಿಯಾದ ಮಾಂಸ ಮಾರಾಟ ನಿಷೇಧ ಎಂದು ನೋಟಿಸ್ ಜಾರಿಗೊಳಿಸುವುದು ಆನಂತರ ಅಂಗಡಿ ಮಾಲೀಕರುಗಳು ಅಂಗಡಿಗೆ ಬಾಗಿಲನ್ನು ಮುಚ್ಚಿ ಬೇರೆ ರೀತಿಯ ಕಳ್ಳಧಾರಿಗಳಿಂದ ಮಾಂಸ ಮಾರಾಟ ಮಾಡುತ್ತಿರುವುದು ಇದೇನು ಹೊಸದಲ್ಲ ಪ್ರತಿವರ್ಷವೂ ಮಹಾವೀರ ಜಯಂತಿ ಹಾಗೂ ರಾಮನವಮಿ ಇನ್ನೂ ಅನೇಕ ರೀತಿಯ ಮಾಂಸ ನಿಷೇಧ ದಿನಗಳಲ್ಲಿ ಕದ್ದು ಮುಚ್ಚಿ ಮಾಂಸ ಮಾಡುತ್ತಿರುವುದು ಕಂಡುಬರುತ್ತಿದೆ. ಆದರೆ ಅಧಿಕಾರಿಗಳು ಕೇವಲ ನೆಪ ಮಾತ್ರಕ್ಕೆ ಮಾತ್ರ ನೋಟಿಸ್ ಜಾರಿಗೊಳಿಸುವುದು ಹಾಗೂ ಮಾಂಸದ ಅಂಗಡಿ ಮಾಲೀಕರುಗಳು ನೆಪ ಮಾತ್ರಕ್ಕೆ ಅಂಗಡಿಯ ಬಾಗಿಲಿನ ಮುಚ್ಚುವುದು, ಈ ರೀತಿಯ ಕಣ್ಣಮುಚ್ಚಾಲೆ ಆಟಗಳು ಕಂಡಂತ ಸಾರ್ವಜನಿಕರು, ಅಧಿಕಾರಿಗಳ ವೈಫಲ್ಯಗಳನ್ನು ಹಾಗೂ ಅಂಗಡಿ ಮಾಲೀಕರ ಕಾನೂನು ಉಲ್ಲಂಘನೆಯನ್ನು ಪ್ರಶ್ನೆ ಮಾಡುವಂತಹ ಅಧಿಕಾರಿಗಳೇ ಇಲ್ಲವೆ ಅಥವಾ ಜನಪ್ರತಿನಿಧಿಗಳೆ ಇಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರದ ಶಾಸಕರಾದ ಚನ್ನಬಸಪ್ಪನವರೇ ನಿಮ್ಮ ಗಮನಕ್ಕೂ ಈ ರೀತಿಯ ವಿಚಾರಗಳು ಬಂದಿದೆಯೇ ಅಥವಾ ಬಂದಿದ್ದರು ನೀವು ಕಾನೂನು ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುವಿರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಅದರಿಂದ ಮಾಂಸ ಮಾರಾಟ ನಿಷೇಧ ದಿನಗಳಲ್ಲಿ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಮಾಂಸ ಮಾರಾಟದ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಂತವರ ಅಂಗಡಿಯ ಪರವಾನಿಗೆಯನ್ನು ರದ್ದುಪಡಿಸಿ ಹಾಗೂ ಮಾಂಸ ಮಾರಾಟ ನಿಷೇಧದ ದಿನದಂದು ಕರ್ತವ್ಯ ಲೋಪವೇಸಗಿದಂತ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಪರವಾಗಿ ಸಿಟಿ ರೌಂಡ್ಸ್ ಪತ್ರಿಕೆಯ ಬಳಗದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ದೂರು.
More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!