City Rounds News

Kannada News Website

ಶಿವಮೊಗ್ಗದಲ್ಲಿ ಕೆಲ ಮಧ್ಯದ ಅಂಗಡಿಗಳಿಗೆ ಸಮಯದ ಮಿತಿ ಇಲ್ಲವೇ..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ ಎಂ

ಶಿವಮೊಗ್ಗ : ಕರ್ನಾಟಕ ಸರ್ಕಾರದ ಹಲವಾರು ಇಲಾಖೆಗಳಲ್ಲಿ ಪ್ರತಿಯೊಂದು ಇಲಾಖೆಗಳಿಗೂ ಹಲವಾರು ರೀತಿಯ ನಿಯಮಗಳಿವೆ. ಅದರಂತೆ ಅಬಕಾರಿ ಇಲಾಖೆಯ ನಿಯಮಗಳಂತೆ ಪ್ರತಿಯೊಂದು ಮಧ್ಯದ ಅಂಗಡಿಗೆ ಇಂತಿಷ್ಟೇ ಸಮಯ ವ್ಯಾಪಾರ ಮಾಡುವಂತೆ ಸಮಯ ನಿಗದಿ ಪಡಿಸಲಾಗಿರುತ್ತದೆ, ಆದರೆ ಕರ್ನಾಟಕ ಸರ್ಕಾರದ ಹಾಗೂ ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಕೆಲ ಮಧ್ಯದ ಅಂಗಡಿಗಳ ಮಾಲೀಕರು ನಿಗದಿತ ಸಮಯಕ್ಕೆ ವ್ಯಾಪಾರ ವಹಿವಾಟುಗಳನ್ನು ಮುಕ್ತಗೊಳಿಸದೆ ರಾತ್ರಿ ಹೆಚ್ಚಿನ ಸಮಯದವರೆಗೆ ಮಧ್ಯ ಮಾರಾಟವನ್ನು ಮಾಡುತ್ತಿದ್ದಾರೆ.

 

ಈ ರೀತಿಯ ಮಧ್ಯ ಮಾರಾಟದಿಂದ ಅನೇಕರಿಗೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತಿದ್ದು ರಾತ್ರಿಯ ಸಮಯದಲ್ಲಿ ರಸ್ತೆಯಲ್ಲಿ ವಾಹನ ಚಾಲಕರಿಗೆ ಹಾಗೂ ಇನ್ನಿತರ ಸಾರ್ವಜನಿಕರಿಗೆ ಮಧ್ಯ ಪಾನ ಮಾಡಿದ ವ್ಯಕ್ತಿಗಳಿಂದ ಸಮಸ್ಯೆಗಳು ಉಂಟಾಗುತ್ತಿದ್ದು ಮಧ್ಯ ಸೇವಿಸಿ ವಾಹನ ಚಲಾಯಿಸುವ ವ್ಯಕ್ತಿಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಸಂಬಂಧಪಟ್ಟ ಏರಿಯಾದ ಬೀಟ್ ಪೊಲೀಸರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತಹ ತಿನಿಸು ಗಾಡಿಗಳಿಗೆ 10 ಗಂಟೆ 30 ನಿಮಿಷಗಳಿಗೆ ಬಾಗಿಲು ಮುಚ್ಚಿಸುವ ಮುನ್ನೆಚ್ಚರಿಕೆಯನ್ನು ನೀಡುತ್ತಾ ಪಿಪಿ ಉದುತ್ತಾ ಓಡಾಡುವಂತ ಪೊಲೀಸ್ ಇಲಾಖೆಯ ಪೊಲೀಸ್ ಸಿಬ್ಬಂದಿಗಳು ಮಧ್ಯದ ಅಂಗಡಿಗಳನ್ನು ಮುಚ್ಚಿಸುತ್ತಿಲ್ಲವೇಕೆ. ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದಂತಹ ಮಧ್ಯದಂಗಡಿಗಳ ಮೇಲೆ ಅಬಕಾರಿ ಇಲಾಖೆಯವರು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರಯೆ.

ಹಾಗಾದರೆ ಮಧ್ಯದ ಅಂಗಡಿಗಳಿಗೆ ನಿಗದಿತ ಸಮಯದಲ್ಲಿ ವ್ಯಾಪಾರ ವಹಿವಾಟು ಮಾಡದಂತೆ ಸೂಚನೆ ನೀಡುವ ಅಧಿಕಾರವನ್ನು ಅಬಕಾರಿ ಇಲಾಖೆಯವರಿಗೆ ರಾಜ್ಯ ಸರ್ಕಾರ ನೀಡಿಲ್ಲವೇ ಅಥವಾ ನೀಡಿದ್ದರೂ ಅಬಕಾರಿ ಇಲಾಖೆಯವರು ಯಾವ ಆಮಿಷಕ್ಕೆ ಒಳಗಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಶಿವಮೊಗ್ಗ ನಗರದಲ್ಲಿ ಅನೇಕ ಮಧ್ಯದ ಅಂಗಡಿಗಳು ಪರವಾನಿಗೆ ಪಡೆದುಕೊಂಡಿರುವಂತಹ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇಂತಹ ಮಧ್ಯದ ಅಂಗಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳದ ಅಬಕಾರಿ ಇಲಾಖೆಯ ವಿರುದ್ಧ ಶಿವಮೊಗ್ಗ ಜಿಲ್ಲಾ ಅಧಿಕಾರಿಗಳು ಕ್ರಮ ಕೈಗೊಂಡು ನಗರದಲ್ಲಿ ನಿಗದಿತ ಸಮಯಕ್ಕೆ ಮಧ್ಯದ ಅಂಗಡಿಗಳನ್ನು ಮುಚ್ಚಿಸಬೇಕೆಂದು ಸಿಟಿ ರೌಂಡ್ಸ್ ಪತ್ರಿಕೆಯ ಬಳಗದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ.