City Rounds News

Kannada News Website

ಆರೋಪಿ ಕಡೆಕಲ್ ಅಬಿದ್ : ಕಾಲು ಸೀಳಿದ ಪೊಲೀಸ್ ಬುಲೆಟ್..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ ಎಂ 

 

ಭದ್ರಾವತಿ : ಸುಮಾರು 20 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಡೆಕಲ್ ಅಬಿದ್ ಎಂಬ ರೌಡಿಶೀಟರ್ ಪೊಲೀಸರ ವಿಚಾರಣೆಗೆ ಒಳಪಡದೆ ಸುಮಾರು ತಿಂಗಳುಗಳಿಂದ ಕಣ್ತಪ್ಪಿಸಿಕೊಂಡು ಓಡಾಡಿಕೊಂಡಿರುತ್ತಾನೆ. ಇವನು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಖಚಿತ ಮಾಹಿತಿಯ ಮೇಲೆ ಆರೋಪಿಯನ್ನು ಬಂಧಿಸಲು ಪೇಪರ್ ಟೌನ್ ಇನ್ಸ್‌ಪೆಕ್ಟರ್ ನಾಗಮ್ಮ ಹಾಗೂ ಅವರ ತಂಡವು ಆರೋಪಿ ಕಡೆಕಲ್ ಅಬಿದ್ ನನ್ನು ಬಂಧಿಸಲು ಮುಂದಾದಾಗ.

ಆರೋಪಿ ಅಬಿದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಹಾಗೂ ಬಂಧಿಸಲು ಬಂದಂತಹ ಪೊಲೀಸ್ ಪೇದೆಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ ಆಗುವ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ನಾಗಮ್ಮ ಅವರು ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದರು ಆರೋಪಿ ಕಡೆಕಲ್ ಅಬಿದ್ ತಪ್ಪಿಸಿಕೊಳ್ಳುವ ಸಲುವಾಗಿ ಪೊಲೀಸ್ ಇನ್ಸ್ಪೆಕ್ಟರ್ ನಾಗಮ್ಮನವರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ರಕ್ಷಣೆಗಾಗಿ ಪೇಪರ್ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನಾಗಮ್ಮನವರು ಆರೋಪಿ ಕಡೆಕಲ್ ಅಬಿದ್ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿ ನಂತರ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದಾರೆ. ಕಡೆಕಲ್ ಅಬಿದ್ ಕೊಲೆ, ದರೋಡೆ, ಕಳ್ಳತನ, ಹಾಗೂ ಇನ್ನೂ ಅನೇಕ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದು ನ್ಯಾಯಾಂಗ ತನಿಖೆಗೆ ಬೇಕಾದಂತಹ ಆರೋಪಿಯಾಗಿದ್ದ ಎಂದು ತಿಳಿಸಿದ್ದಾರೆ.