ಶಿವಮೊಗಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ನವದೆಹಲಿ: ದೆಹಲಿ ಹೈಕೋರ್ಟ್‌ನ ಜಡ್ಜ್ ಯಶವಂತ್ ವರ್ಮ ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ದೆಹಲಿ ಹೈಕೋರ್ಟ್ ಸಿಜೆ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ನೀಡಿದ ದೆಹಲಿ ಹೈಕೋರ್ಟ್‌ನ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ಶನಿವಾರ ತಡರಾತ್ರಿ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಕಂತೆ ಕಂತೆ ಹಣದ ಬಗ್ಗೆ ತನಿಖಾ ವರದಿಯಲ್ಲಿರುವ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಯಶವಂತ್ ವರ್ಮಾ ನಿರಾಕರಿಸಿದ್ದಾರೆ.ಔಟ್‌ಹೌಸ್ ಗೆ ಬೆಂಕಿ ಹೊತ್ತಿಕೊಂಡ ಮತ್ತು ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಕೊಠಡಿ ಔಟ್‌ಹೌಸ್ ಆಗಿತ್ತು, ನಾನು ಮತ್ತು ನನ್ನ ಕುಟುಂಬ ವಾಸಿಸುವ ಮುಖ್ಯ ಕಟ್ಟಡವಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಆ ಔಟ್‌ಹೌಸ್ ರೂಂನಲ್ಲಿ ಸಿಕ್ಕಂತಹ ಅನಾದ ವಿಚಾರವೂ ನಮಗಾಗಲಿ ನಮ್ಮ ಕುಟುಂಬಕ್ಕಾಗಲಿ ಮಾಹಿತಿ ಇಲ್ಲ, ಹಣವನ್ನು ಇಟ್ಟಿಲ್ಲ ಎಂದು ನಾನ ಹೇಳುತ್ತೇನೆ . ಈ ಹಣವನ್ನು ನಾವು ಇಟ್ಟುಕೊಂಡಿದ್ದೇವೆ ಅಥವಾ ಸಂಗ್ರಹಿಸಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣವಾಗಿ ಅಸಂಬದ್ಧವಾಗಿದೆ. ಕ್ವಾರ್ಟರ್ಸ್ ಬಳಿ ಅಥವಾ ಔಟ್‌ಹೌಸ್ ಗೆ ಯಾರಾದರೂ ಮುಕ್ತವಾಗಿ ಪ್ರವೇಶಿಸಬಹುದಾಗಿದೆ. ಅದು ನನ್ನ ವಾಸಿಸುತ್ತಿರುವ ಮನೆಯಿಂದ ಸಂಪೂರ್ಣವಾಗಿ ಬೇರ್ಪಟ್ಟ ಕೋಣೆಯಾಗಿದೆ ಮತ್ತುಕಾಂಪೌಂಡ್ ಗೋಡೆಯು ನಾವು ವಾಸಿಸುತ್ತಿರುವ ವಾಸಸ್ಥಳದಿಂದ ಆ ಔಟ್‌ಹೌಸ್ ಪ್ರತ್ಯೇಕವಾಗಿದೆ. ನನ್ನ ಬಗ್ಗೆ ಆರೋಪ ಸುಳ್ಳು ಹೇಳಲಾಗುತ್ತಿದೆ
.

More Stories
ದೆಹಲಿಯ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್..!!
₹3 ಕೋಟಿ ಲಂಚಕ್ಕೆ ಬೇಡಿಕೆ: ಐಪಿಎಸ್ ಅಧಿಕಾರಿ ಬಂಧನ..!!
ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸೋರಿಕೆ… ಅವ್ಯವಸ್ಥೆಯ ನೇರ ಹೊಣೆಗಾರ ಕೇಂದ್ರ ಸರ್ಕಾರ..!!